ಬೆಳ್ತಂಗಡಿ: ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಬದುಕಿನ ಎಲ್ಲ ರಂಗಗಳಲ್ಲಿಯೂ ಎಂಜಿನಿಯರ್‌ಗಳು ಅನಿವಾರ್ಯವಾಗುತ್ತಿದ್ದು, ಅವರಲ್ಲೂ ಸರಕಾರಿ ಎಂಜಿನಿಯರ್‌ಗಳು ಶಿಸ್ತು, ಬದ್ಧತೆಯಿಂದ ಕೆಲಸ ಮಾಡಿ, ಜನರಿಗೆ ಸೇವೆ ನೀಡಬೇಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ರವಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಲೋಕೋಪಯೋಗಿ, ಜಲ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಗಳನ್ನೊಳಗೊಂಡ ಕರ್ನಾಟಕ ಎಂಜಿನಿಯರ್‌ಗಳ ಸಂಘದ 6ನೇ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ವತಿಯಿಂದ ಡಾ| ಹೆಗ್ಗಡೆ ಅವರನ್ನು ಸಮ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಡಿ.ಎಸ್. ದೇವರಾಜ್ ಅವರು ಸಂಘದ ಸೇವೆ, ಸಾಧನೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ನಿವೃತ್ತ ಎಂಜಿನಿಯರ್ ಕಲ್ಲಪ್ಪ ಅವರನ್ನು ಗೌರವಿಸಲಾಯಿತು. ಅಧೀಕ್ಷಕ ಎಂಜಿನಿಯರ್ ಕಾಂತರಾಜು ಬಿ., ಸಂಘದ ಹಿರಿಯ ಉಪಾಧ್ಯಕ್ಷ ಬಿ.ಡಿ. ನಸಲಾಂಪುರೆ, ಉಪಾಧ್ಯಕ್ಷರಾದ ಎಸ್.ಡಿ. ತಿಮ್ಮೇಗೌಡ, ಎಸ್.ಎಂ. ಮೇಟಿ, ನಾರಾಯಣ ಎಂ., ಎಚ್.ಕೆ. ಕಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಚಂದ್ರಶೇಖರ್, ಖಜಾಂಚಿ ಚಂದ್ರೇಗೌಡ ಎಚ್.ಸಿ., ಕಾನೂನು ಕಾರ್ಯದರ್ಶಿ ಎಂ.ಎನ್. ಮಾರ್ತಾಂಡಪ್ಪ, ಯಶವಂತಕುಮಾರ್ ಉಪಸ್ಥಿತರಿದ್ದರು. ಲೋಕೋಪಯೋಗಿ ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಪ್ರಸಾದ ಅಜಿಲ ಸ್ವಾಗತಿಸಿ, ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ವಂದಿಸಿದರು.
ಪಾತ್ರ ಮಹತ್ತರ
ಪ್ರಸ್ತುತ ವಿವಿಧ ವಿನ್ಯಾಸಗಳ ಸ್ಮಾರಕ, ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಮಂದಿರ ಮೊದಲಾದ ನಿರ್ಮಾಣಗಳಲ್ಲಿ ಎಂಜಿನಿಯರ್ ಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಸಮಾಜದಲ್ಲಿ ಎಂಜಿನಿಯರ್‌ಗಳಿಗೆ ವಿಶೇಷ ಸ್ಥಾನಮಾನವಿದ್ದು, ಅವರು ಜನರ ನೆನಪಿನಲ್ಲಿ ಉಳಿಯುವ ಹಾಗೂ ದೇಶದ ಪ್ರಗತಿಗೆ ಪೂರಕ ಕರ್ತವ್ಯ ನಿರ್ವಹಿಸಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ