Advertisement

ಜು. 26ರಿಂದ ಎಂಜಿನಿಯರಿಂಗ್‌ ಪರೀಕ್ಷೆ

11:01 PM Jul 08, 2021 | Team Udayavani |

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಬಿ.ಇ., ಬಿ.ಟೆಕ್‌., ಬಿ.ಆರ್ಕ್‌., ಬಿ.ಪ್ಲಾನ್‌, ಎಂ.ಟೆಕ್‌., ಎಂ.ಆರ್ಕ್‌., ಎಂಬಿಎ, ಎಂಸಿಎ ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ ಪರೀಕ್ಷೆಯನ್ನು ಜುಲೈ 26ರಿಂದ ನಡೆಸಲು ನಿರ್ಧರಿಸಿದೆ.

Advertisement

ಬಿ.ಇ., ಬಿ.ಟೆಕ್‌., ಬಿ.ಆರ್ಕ್‌., ಬಿ.ಪ್ಲಾನ್‌ ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ ಥಿಯರಿ (ಬಾಕಿ ಉಳಿದಿರುವ ವಿಷಯ), ಪ್ರಾಯೋಗಿಕ ಪರೀಕ್ಷೆಗಳು ಮತ್ತು ಎಂ.ಟೆಕ್‌., ಎಂ.ಆರ್ಕ್‌, ಎಂಬಿಎ, ಎಂಸಿಎ ಕೋರ್ಸ್‌ಗಳ ಮೊದಲ ಸೆಮಿಸ್ಟರ್‌ ಥಿಯರಿ ಹಾಗೂ ಪ್ರಾಯೋಗಿಕ ಪರೀಕ್ಷೆಯ ಜುಲೈ 26ರಿಂದ ಆರಂಭವಾಗಲಿದ್ದು, ಪರೀಕ್ಷಾಂಗ ವಿಭಾಗದಿಂದ ವಿಸ್ತೃತ ವೇಳಾಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ ಎಂದು ವಿಟಿಯು ತಿಳಿಸಿದೆ.

ಅಂತಿಮ ವರ್ಷದ ಪ್ರಾಜೆಕ್ಟ್, ಸೆಮಿನಾರ್‌  ಪರೀಕ್ಷೆಗಳನ್ನು ಆನ್‌ಲೈನ್‌  ವೇದಿಕೆ ಮೂಲಕ ನಡೆಸಲಾಗುತ್ತದೆ. ಪ್ರಾಜೆಕ್ಟರ್‌ ಹಾಗೂ ಸೆಮಿಸ್ಟರ್‌ ರಿಪೋರ್ಟ್‌ಗಳನ್ನು ಸಿ.ಡಿ. ಮೂಲಕ ಪಡೆಯಲಾಗುತ್ತದೆ. ಮೊದಲಸ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಜುಲೈ 19ರಿಂದ ವ್ಯಾಸಂಗಕ್ಕೆ ರಜೆ ನೀಡಲಾಗುತ್ತದೆ. 2ನೇ ಸೆಮಿಸ್ಟರ್‌ ತರಗತಿಗಳು ಪ್ರಾಯೋಗಿಕ ಪರೀಕ್ಷೆ ಮುಗಿದ ಕೂಡಲೇ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next