Advertisement

ಎಂಜಿನಿಯರ್‌ ಕೈ ಹಿಡಿದ ಕೃಷಿ ಹೊಂಡ

04:29 PM Mar 22, 2021 | Team Udayavani |

ಅಥಣಿ: ಒಕ್ಕಲುತನ ಮಾಡಬೇಕೆಂದರೆ ನೀರು ಬೇಕು. ಇಂತಹ ಒಂದು ನೀರಿನಸಮಸ್ಯೆಯನ್ನು ಮೆಟ್ಟಿ ನಿಂತು,ಕೃಷಿಹೊಂಡ ನಿರ್ಮಿಸಿಕೊಂಡು ಬೇಸಾಯದಲ್ಲಿ ಖುಷಿ ಕಾಣುತ್ತಿದ್ದಾರೆ ಅಥಣಿ ತಾಲೂಕು ಸಂಕೋನಟ್ಟಿ ಗ್ರಾಮದ ಎಂಜಿನಿಯರ್‌ ರಾಜಶೇಖರ ಟೋಪಗಿ.

Advertisement

ತಾಲೂಕಿನ ಕಾಲು ಭಾಗದಹಳ್ಳಿಗಳು ಕೃಷ್ಣಾನದಿ ತೀರದ ಫಲವತ್ತಾದಪ್ರದೇಶವಾದರೆ,ಮುಕ್ಕಾಲು ಪ್ರದೇಶದಲ್ಲಿನೀರಿಗಾಗಿ ಪರಿತಪಿಸುವ ಸ್ಥಿತಿ ಇದೆ.ನೀರಿನ ಅನಿವಾರ್ಯತೆ ಇರುವ ಕಡೆರೈತರು ಅನೇಕ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಕೆಲವರುಕೆರೆ-ಕಟ್ಟೆಗಳು, ಕೊಳವೆಬಾವಿಗಳನ್ನೇಆಶ್ರಯಿಸಿದರೆ, ಇನ್ನೂ ಕೆಲವು ರೈತರು ಹೊಲಗಳಲ್ಲಿ ಕೃಷಿಹೊಂಡಗಳನ್ನುನಿರ್ಮಿಸಿಕೊಂಡು ನೀರಿನ ಕೊರತೆಯನ್ನುನೀಗಿಸಿದ್ದಾರಲ್ಲದೇ ಕಡು ಬೇಸಿಗೆಯಲ್ಲೂಸಮೃದ್ಧ ಕೃಷಿ ಕೈಗೊಂಡಿದ್ದಾರೆ.

ಆಗಾಗ ನಾಲೆಯಲ್ಲಿ ಸಿಗುವ ನೀರು ಹಾಗೂ ಕೊಳವೆಬಾವಿ ನೀರನ್ನು ಕೃಷಿಹೊಂಡಕ್ಕೆ ತುಂಬಿಕೊಂಡು ಬೇಸಿಗೆಯಲ್ಲೂ ತೊಂದರೆಯಾಗದಂತೆನೋಡಿಕೊಂಡಿದ್ದಾರೆ.ರಾಜಶೇಖರ ಅವರು ಸುಮಾರು4 ಕೋಟಿ ಲೀಟರ್‌ ನೀರುಸಂಗ್ರಹವಾಗುವಷ್ಟು ದೊಡ್ಡದಾದ ಕೃಷಿಹೊಂಡ ನಿರ್ಮಿಸಿದ್ದು, ಕೃಷಿಹೊಂಡದನೀರನ್ನೇ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಕೃಷಿಹೊಂಡ120 ಅಡಿ ಉದ್ದ, 180ಅಡಿ ಅಗಲ ಹಾಗೂ53ಅಡಿ ಆಳವಿದೆ. ಇದೇಹೊಂಡದ ನೀರನ್ನು ಇವರುವರ್ಷದುದ್ದಕ್ಕೂ ಬಳಸಿ 7ಎಕರೆದ್ರಾಕ್ಷಿ ಹಾಗೂ 02 ಎಕರೆಯಲ್ಲಿಇತರೆ ಹಣ್ಣು ಬೆಳೆಯುತ್ತಾರೆ. ಅದಕ್ಕೆ ಈಹೊಂಡದ ನೀರನ್ನೇ ಬಳಸುತ್ತಾರೆ.ಆಧುನಿಕ ವ್ಯವಸ್ಥೆ ಹಾಗೂ ಕೃಷಿಗೆಪೂರಕ ವಾತಾವರಣ ಅರ್ಥಮಾಡಿಕೊಂಡು ತಂತ್ರಜ್ಞಾನಯುಕ್ತ ಕೃಷಿ ಮಾಡಿದರೆ ರೈತ ಅಭಿವೃದ್ಧಿಯಾಗುತ್ತಾನೆ ಎನ್ನುತ್ತಾರೆ ರಾಜಶೇಖರ.

ಹೊಂಡವನ್ನು ಒಮ್ಮೆ ತುಂಬಿಸಿದರೆವರ್ಷದವರೆಗೂ ಕೃಷಿಗೆ ನೀರಿನ ಅಭಾವಉಂಟಾಗಲ್ಲ. ಹೊಂಡದಿಂದ ಬಹಳ ಅನುಕೂಲವಿದೆ. ನಮ್ಮ ತೋಟದಲ್ಲಿಮೂರು ಬೋರ್‌ವೆಲ್‌ಗ‌ಳಿದ್ದು ಅದರನೀರನ್ನು ಸಂಪೂರ್ಣವಾಗಿ ಕೃಷಿ ಹೊಂಡತುಂಬಿಸಲು ಬಳಸುತ್ತೇವೆ.ಮಳೆ ಬಂದಾಗಲೂ ನೀರು ಸಂಗ್ರಹಿಸಲು ಇದು ನೆರವಾಗುತ್ತದೆಎನ್ನುತ್ತಾರೆ ಎಂಜಿನಿಯರ್‌ ರಾಜಶೇಖರಟೊಪಗಿ.

 

Advertisement

-ಸಂತೋಷ ರಾ. ಬಡಕಂಬಿ

Advertisement

Udayavani is now on Telegram. Click here to join our channel and stay updated with the latest news.

Next