Advertisement

ENG vs NZ; ನ್ಯೂಜಿಲ್ಯಾಂಡ್‌ ವಿರುದ್ಧ ಇಂಗ್ಲೆಂಡಿಗೆ 100 ರನ್‌ ಗೆಲುವು

11:09 PM Sep 16, 2023 | Team Udayavani |

ಲಂಡನ್‌: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧದ 4 ಪಂದ್ಯಗಳ ಏಕದಿನ ಸರಣಿಯನ್ನು ಇಂಗ್ಲೆಂಡ್‌ 3-1ರಿಂದ ತನ್ನದಾಗಿಸಿಕೊಂಡಿದೆ. ಲಾರ್ಡ್ಸ್‌ ನಲ್ಲಿ ನಡೆದ ಅಂತಿಮ ಪಂದ್ಯವನ್ನು ಇಂಗ್ಲೆಂಡ್‌ ಭರ್ತಿ 100 ರನ್ನುಗಳಿಂದ ಜಯಿಸಿತು.

Advertisement

ಡೇವಿಡ್‌ ಮಲಾನ್‌ ಅವರ 127 ರನ್‌ ಪರಾಕ್ರಮದಿಂದ ಇಂಗ್ಲೆಂಡ್‌ 9 ವಿಕೆಟಿಗೆ 311 ರನ್‌ ಪೇರಿಸಿದರೆ, ನ್ಯೂಜಿಲ್ಯಾಂಡ್‌ 38.2 ಓವರ್‌ಗೆ 211ಕ್ಕೆ ಆಲೌಟ್‌ ಆಯಿತು. ಮಲಾನ್‌ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾದರು.

ನ್ಯೂಜಿಲ್ಯಾಂಡ್‌ ಮೊದಲ ಪಂದ್ಯವನ್ನು ಗೆದ್ದರೂ ಈ ಮುನ್ನಡೆಯನ್ನು ಉಳಿಸಿಕೊಳ್ಳಲು ವಿಫ‌ಲವಾಯಿತು. ಇಂಗ್ಲೆಂಡ್‌ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next