Advertisement

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಗೆ ಮತ್ತೆ ಇಡಿ ಸಮನ್ಸ್

12:01 PM Dec 20, 2021 | Team Udayavani |

ಮುಂಬಯಿ: ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

Advertisement

ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸೋಮವಾರ ಐಶ್ವರ್ಯಾ ಅವರನ್ನು ಇಡಿ ವಿಚಾರಣೆಗೆ ಕರೆದಿದ್ದು, ಹೇಳಿಕೆಯನ್ನು ದಾಖಲಿಸಲು ಬಯಸುತ್ತದೆ ಎಂದು ಹೇಳಿದೆ. ವರದಿಗಳ ಪ್ರಕಾರ, ಐಶ್ವರ್ಯಾ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮತ್ತು ವಿಚಾರಣೆಗೆ ಹಾಜರಾಗಲು ಮತ್ತೊಂದು ದಿನಾಂಕವನ್ನು ಕೇಳಿದ್ದಾರೆ.

ಎಎನ್ ಐ ವರದಿಯ ಪ್ರಕಾರ ಇಡಿ 2002ರ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ಅಡಿಯಲ್ಲಿ ನಟಿಯ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಹಿಂದೆಯೂ ಸಮನ್ಸ್ ನೀಡಿಲಾಗಿತ್ತಾದರೂ ಕನಿಷ್ಠ ಎರಡು ಬಾರಿ ಹಾಜರಾಗಲು ಸಮಯ ಕೋರಿದ್ದರು.

ಪನಾಮ ಪೇಪರ್‌ಗಳು ಏಪ್ರಿಲ್ 2016 ರಲ್ಲಿ ಪ್ರಕಟವಾದ 11.5 ಮಿಲಿಯನ್ ಸೋರಿಕೆಯಾದ ಗೌಪ್ಯ ದಾಖಲೆಗಳಾಗಿದ್ದು, ಕಡಲಾಚೆಯ ಘಟಕಗಳ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next