Advertisement

ತಬ್ಲೀಘಿ ನಾಯಕ ಮೌಲಾನಾ ಸಾದ್ ವಿರುದ್ಧ ಅಕ್ರಮ ಹಣಸಾಗಣೆ ಕಾಯ್ದೆಯ ಅನ್ವಯ ಪ್ರಕರಣ ದಾಖಲು

01:58 AM Apr 17, 2020 | Hari Prasad |

ನವದೆಹಲಿ: ತಬ್ಲೀಘಿ ಜಮಾತ್‌ ನಾಯಕ ಮೌಲಾನಾ ಸಾದ್‌ ಕಂಧಾವಿ ವಿರುದ್ಧ ಜಾರಿ ನಿರ್ದೇಶನಾಲಯ ಗುರುವಾರ ಅಕ್ರಮ ಹಣಸಾಗಣೆ ಕಾಯ್ದೆಯ ಅನ್ವಯ ಕೇಸು ದಾಖಲಿಸಿದೆ.

Advertisement

ದಿಲ್ಲಿ ಪೊಲೀಸರು ದಾಖಲಿಸಿದ ಎಫ್ಐಆರ್‌ ಆಧಾರದಲ್ಲಿ ಜಾರಿ ನಿರ್ದೇಶನಾಲಯದ ಪ್ರಥಮ ವರ್ತಮಾನ ವರದಿಯನ್ನು (ಇಸಿಐಆರ್‌) ದಾಖಲಿಸಿಕೊಂಡಿದೆ. ಕಂಧಾವಿ ಜತೆಗೆ ಜಮಾತ್‌ಗೆ ಸಂಬಂಧಿಸಿದ ಇತರ ಟ್ರಸ್ಟ್‌ಗಳ ವಿರುದ್ಧವೂ ಕೇಸು ದಾಖಲಾಗಿದೆ.

ಇದೇ ವೇಳೆ, ತಬ್ಲೀಘಿ -ಎ-ಜಮಾತ್‌ ಸಂಘಟನೆಯ ಕೇಂದ್ರ ಕಚೇರಿಯಾದ ಮರ್ಕಜ್‌ಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗಳಿಗೆ ವಿದೇಶಿ ಮೂಲಗಳಿಂದ ಗಣನೀಯ ಪ್ರಮಾಣದ ಹಣ ಹರಿದುಬಂದಿರುವ ಬಗ್ಗೆ ಆ ಖಾತೆಗಳಿರುವ ಬ್ಯಾಂಕ್‌ನ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ತಬ್ಲೀಘಿ ಸಮಾವೇಶದ ತನಿಖೆ ನಡೆಸುತ್ತಿದ್ದ ದಿಲ್ಲಿ ಪೊಲೀಸ್‌ನ ಅಪರಾಧ ವಿಭಾಗದ ತಂಡ, ಮರ್ಕಜ್‌ ಪದಾಧಿಕಾರಿಗಳಲ್ಲಿ ಈ ಬಗ್ಗೆ ವಿವರಣೆ ಕೇಳಿದ್ದಾರೆ. ಕೆಲವು ದಿನಗಳ ಹಿಂದೆಯೇ ಖಾತೆಗಳಿಗೆ ದೊಡ್ಡ ಮೊತ್ತದ ಹಣ ಜಮೆಯಾಗಿದ್ದನ್ನು ಗಮನಿಸಿದ್ದ ಬ್ಯಾಂಕ್‌ ಅಧಿಕಾರಿಗಳು, ತಬ್ಲೀಘಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್‌ರನ್ನು ಭೇಟಿಯಾಗಿ ಹಣದ ಹರಿವಿನ ಬಗ್ಗೆ ವಿವರಣೆ ಪಡೆಯಲು ಮುಂದಾಗಿದ್ದರು. ಆದರೆ, ಸಾದ್‌ ಅವರು ತಮಗೆ ಬಿಡುವಿಲ್ಲ ಎಂಬ ಕಾರಣ ನೀಡಿ, ಭೇಟಿಗೆ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next