ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಗುರಿಯಾದ ನಾಯಕರ ಸಹವರ್ತಿಗಳಿಗೆ ಸಂಬಂಧಿಸಿದಂತೆ ನವದೆಹಲಿ ಮತ್ತು ಮುಂಬೈನಲ್ಲಿರುವ 76.54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿಗೊಳಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ತಿಳಿಸಿದೆ.
ಅಕ್ರಮ ಹಣವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯ ತಾತ್ಕಾಲಿಕ ಜಪ್ತಿ ಆದೇಶವನ್ನು ಇಡಿ ಹೊರಡಿಸಿ, ಆಸ್ತಿ ಮುಟ್ಟುಗೋಲು ಹಾಕಿದೆ. ದೆಹಲಿ ಉಪ ಮುಖ್ಯಮಂತ್ರಿ ಮನಿಷ ಸಿಸೋಡಿಯಾ ಅವರ ನಿಕಟವರ್ತಿ ಎನ್ನಲಾಗಿದ್ದ ಆಪ್‌ನ ಸಂವಹನ ಉಸ್ತುವಾರಿ ವಿಜಯ್ ನಾಯರ್ ಹಾಗೂ ಉದ್ಯಮಿ ದಿನೇಶ್ ಅರೋರಾ ಹಾಗೂ ಅಮಿತ್ ಅರೋರಾ ಅವರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಅಲ್ಲದೇ, ತೆಲಂಗಾಣ ಮುಖ್ಯಮಂತ್ರಿಗಳ ಪುತ್ರಿ ಎಂಎಲ್‌ಸಿ ಕವಿತಾ ಅವರ ಸಂಸ್ಥೆಯ ಪಾಲುದಾರರಾಗಿದ್ದ ಹೈದರಾಬಾದ್ ಮೂಲದ ಮದ್ಯ ಉದ್ಯಮಿ ಅರುಣ್ ಪಿಳ್ಳೆ, ಮತ್ತೂಬ್ಬ ಮದ್ಯ ಉದ್ಯಮಿ ಸಮೀರ್ ಮಹಂದೂರು ಮತ್ತು ಪತ್ನಿ ಗೀತಾ ಮಹಂದೂರು ಅವರ ಒಡೆತನದ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ವಶಪಡಿಸಿಕೊಂಡಿರುವ 76.54 ಕೋಟಿ ರೂ.ಮೊತ್ತದ ಆಸ್ತಿಯಲ್ಲಿ, ಸಮೀರ್ ಹಾಗೂ ಗೀತಾ ದಂಪತಿಯ ಒಡೆತನದ 35
ರೂ.ಮೌಲ್ಯದ ವಸತಿ ಆಸ್ತಿ, 10.23 ಕೋಟಿ ರೂ. ಮೌಲ್ಯದ 50 ವಾಹನಗಳು ಸೇರಿವೆ. ಜತೆಗೆ ಅಮಿತ್‌ಗೆ ಸಂಬಂಧಿಸಿದ 7.68 ಕೋಟ ರೂ, ವಿಜಯ್‌ನ 4.95 ಕೋಟಿ ರೂ. ದಿನೇಶ್‌ಗೆ ಸಂಬಂಧಿಸಿದ 2.25 ಕೋಟಿ ರೂ ಹಾಗೂ ಅರುಣ್ ಪಿಲ್ಲೆ„ನ 14.39 ಕೋಟಿ ರೂ. ಮೌಲ್ಯದ ಆಸ್ತಿ ಸೇರಿದೆ.
ಇದನ್ನೂ ಓದಿ: ಶತಕ ಬಾರಿಸಿದರೂ ತಂದೆಗೆ ಖುಷಿ ಆಗಿರಲಿಕ್ಕಿಲ್ಲ: ಶುಭಮನ್ ಗಿಲ್