Advertisement

ಕಮಲೇಶ್ಚಂದ್ರ ವರದಿ ಜಾರಿ ಮಾಡಿ

10:54 AM Jun 04, 2018 | |

ವಿಜಯಪುರ: ಕಮಲೇಶ್ಚಂದ್ರ ವರದಿ ಜಾರಿ ಹಾಗೂ 7ನೇ ವೇತನ ಜಾರಿಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ನಗರದ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗೀಯ ಕಾರ್ಯದರ್ಶಿ ಕೆ.ಪಿ. ಹೂಗಾರ, ಕೇಂದ್ರ ಸರ್ಕಾರದ ಈ ಕಾರ್ಮಿಕ ವಿರೋಧಿ ಕ್ರಮವನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಜೂ. 4ರಂದು ಭಾರತ ಬಂದ್‌ ಕರೆ ನೀಡಲಾಗಿದೆ. 

ವಿಜಯಪುರ ಜಿಲ್ಲೆಯಲ್ಲೂ ಈ ಬಂದ್‌ ಕರೆ ನೀಡಲಾಗಿದೆ. ನಗರದಲ್ಲಿ ಬೆಳಗ್ಗೆ 11ಕ್ಕೆ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಮಹಾತ್ಮ ಗಾಂಧೀಜಿ ವೃತ್ತ, ಕಿತ್ತೂರು ಚನ್ನಮ್ಮ ಮಾರುಕಟ್ಟೆ, ಟಿಪ್ಪು ಸುಲ್ತಾನ್‌ ಚೌಕ್‌ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದರು.

ಗ್ರಾಮೀಣ ಅಂಚೆ ನೌಕರರ ನ್ಯಾಯ ಸಮ್ಮತ ಹೋರಾಟಕ್ಕಾಗಿ ಬೀದಿಗೆ ಇಳಿದು ನಿರಂತರ 13 ದಿನದಿಂದ ಮುಷ್ಕರ ನಡೆಸಿದರೂ ಯಾವೊಬ್ಬ ಸಂಸದರೂ ಪ್ರತಿಭಟನಾನಿರತರು ಹಾಗೂ ಸಂಘಟನೆ ಜೊತೆ ಮಾತನಾಡಲಿಲ್ಲ. ಈ ನಿರ್ಲಕ್ಷ್ಯದಿಂದ ದೇ ಶಕ್ಕೆಗ್ರಾಮೀಣ ಅಂಚೆ ಸೇವಕರ ಅಗತ್ಯ ಇಲ್ಲವೇ ಎಂಬ ಅನುಮಾನ ಮೂಡುತ್ತಿದೆ.

ಬೆಂಗಳೂರಿನ ವಲಯ ಉಪಾಧ್ಯಕ್ಷ ಬಿ.ಎಲ್‌. ಹೂಗಾರ ಮಾತನಾಡಿ, ಈ ಮುಷ್ಕರ ಯಶಸ್ವಿಗೊಳಿಸಲು ಎಲ್ಲ ಗ್ರಾಮೀಣ ಅಂಚೆ ನೌಕರರು ಜನತಾ ನ್ಯಾಯಾಲಯದ ಮುಂದೆ ತಮ್ಮ ಕುಟುಂಬ ಸಮೇತ ಭಾಗವಹಿಸಬೇಕು. ಇದರೊಂದಿಗೆ ಅಂಚೆ ನೌಕರರ ಕುಟುಂಬ ತಮಗಾದ ಅನ್ಯಾಯ ಕುರಿತು ಪ್ರತಿಭಟನೆ ಮೂಲಕ ಸಮಾಜದ ಮುಂದೆ
ಇಡಬೇಕು ಎಂದು ಮನವಿ ಮಾಡಿದರು. 

Advertisement

ಈ ಸಂದರ್ಭದಲ್ಲಿ ಸಿಐಟಿಯು, ಕರ್ನಾಟಕ ರೈತ ಸಂಘ, ಎಪಿಎಂಸಿ ಹಮಾಲರ ಸಂಘ, ಜನವಾದಿ ಮಹಿಳಾ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಲಾರಿ ಹಮಾಲರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘಗಳ ಒಕ್ಕೂಟ, ಗ್ರಾಪಂ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ಗುತ್ತಿಗೆ ನೌಕರರ ಸಂಘ, ಬಿಎಸ್‌ಎನ್‌ಎಲ್‌ ಪತ್ತಿನ ಸಹಕಾರಿ
ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಕುರುಬರ ಸಂಘ, ಶ್ರೀರಾಮ ಸೇನೆ, ಜೈ ಭಗೀರಥ ಸಂಘ, ಜಿಲ್ಲಾ ಉಪ್ಪಾರ ಸಮಾಜ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕ, ವಕೀಲ ಸಾಹಿತ್ಯ ಪರಿಷತ್‌ ಸೇರಿದಂತೆ ಮುಂತಾದವರು ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆ ಮುಖಂಡರು ವಿವರಿಸಿದರು.

ಇದೇ ಸಂದರ್ಭದಲ್ಲಿ ಎಂ.ಎಂ. ಬೀಳಗಿ, ಎಂ.ಜಿ. ಹೂಗೂಡಿ, ಎಸ್‌.ಎಸ್‌. ಗಲಗಲಿ, ಬಿ.ಕೆ. ದಿಂಡವಾರ, ಆರ್‌.ಆರ್‌. ಚಿಕ್ಕಲಕಿ, ಪಿ.ಎನ್‌. ಕುಲಕರ್ಣಿ, ಎಸ್‌.ಎಂ. ಕೂಳೂರು, ಪಿ.ಎಸ್‌. ಕೋಳೂರಗಿ, ಎನ್‌.ಎಸ್‌. ಮಠಪತಿ, ಎಚ್‌.ಪಿ.
ಕಟ್ಟಿ, ಜಿ.ಎಸ್‌. ಪಾಟೀಲ, ಐ.ಸಿ. ಹಂಚಿನಾಳ, ಎಸ್‌. ಆರ್‌. ನರಳೆ, ಕೆ.ಎಸ್‌. ಓಂಕಾರ ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next