Advertisement

ಇಂಧನ ಉಳಿತಾಯ; ವಾಯವ್ಯ ಸಾರಿಗೆಗೆ ರಾಷ್ಟ್ರ ಮಟ್ಟದ ಪ್ರಶಸಿ

11:53 AM Apr 12, 2022 | Team Udayavani |

ಹುಬ್ಬಳ್ಳಿ: ಅಧಿಕ ಇಂಧನ ಉಳಿತಾಯ ಹಾಗೂ ಕಾರ್ಯಕ್ಷಮತೆಗಾಗಿ ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ವತಿಯಿಂದ ನೀಡುವ ರಾಷ್ಟ್ರಪ್ರಶಸ್ತಿ ಲಭಿಸಿದೆ.

Advertisement

ಇಂಧನ ಉಳಿತಾಯ, ಅನಿಲ ಸಂರಕ್ಷಣೆ ಹಾಗೂ ಪರಿಸರ ಕುರಿತು ಜಾಗೃತಿಗಾಗಿ ಏಪ್ರಿಲ್‌-2020ರಿಂದ ಮಾರ್ಚ್‌-2021 ರವರೆಗಿನ ಸಾಧನೆಗೆ ಈ ರಾಷ್ಟ್ರಪ್ರಶಸ್ತಿ ಲಭಿಸಿದೆ. ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆ ಕಲ್ಪಿಸಲು 3000 ಬಸ್‌ ಗಳನ್ನು ಬಳಸಲಾಗುತ್ತಿದೆ. ಈ ವಾಹನಗಳು ಅತೀ ಹೆಚ್ಚಿನ ಇಂಧನ ಉಳಿತಾಯ ಹಾಗೂ ಕಾರ್ಯಕ್ಷಮತೆ ಸಾಧಿಸಿವೆ. ಈ ಸಾಧನೆಗಾಗಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ಈ ಪ್ರಶಸ್ತಿ ನೀಡಿದೆ.

ಇಂಧನ ಉಳಿತಾಯ, ಅನಿಲ ಸಂರಕ್ಷಣೆ ಕುರಿತು ಸಚಿವಾಲಯ ಸಂರಕ್ಷಣಾ ಹಾಗೂ ಕ್ಷಮತಾ ಮಹೋತ್ಸವ ಹಮ್ಮಿಕೊಂಡಿದ್ದು, ದೆಹಲಿಯ ಭಾರತೀಯ ಹೆಬಿಟೆಟ್‌ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಹಾಗೂ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಕೇಂದ್ರದ ಅಧ್ಯಕ್ಷ ಪಂಕಜ ಜೈನ್‌ ಪ್ರಶಸ್ತಿ ಪ್ರದಾನ ಮಾಡಿದರು.

ಕೇಂದ್ರದ ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ, ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ ಹುದ್ದಾರ, ಮುಖ್ಯ ತಾಂತ್ರಿಕ ಅಭಿಯಂತರ ಎಂ.ರಮೇಶ ಅವರು ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಈ ರಾಷ್ಟ್ರಪ್ರಶಸ್ತಿಗೆ ಸಂಸ್ಥೆಯ ಚಾಲನಾ, ತಾಂತ್ರಿಕ ಸಿಬ್ಬಂದಿ, ಅಧಿಕಾರಗಳ ಪರಿಶ್ರಮವಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ಶ್ಲಾಘಿಸಿದ್ದಾರೆಂದು ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next