Advertisement
ಆದರೆ, ಕ್ಷೇತ್ರದ ಅಭ್ಯರ್ಥಿಗೆ ಇಲ್ಲಿ ಮತಚಲಾಯಿಸುವ ಅವಕಾಶ ಇರಲಿಲ್ಲ. ಇವುಗಳೊಟ್ಟಿಗೆ ಮತಯಂತ್ರ ಕೈಕೊಟ್ಟು ಕಿರಿಕಿರಿ, ಮತಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿ ಪರದಾಟ… ಇವೆಲ್ಲಾ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ವೇಳೆ ಕಂಡು ಬಂದ ದೃಶ್ಯಗಳು. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ 270 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಶಾಂತಿಯುತ ಮತದಾನ ನಡೆದಿಯಿತು. ಮಹಾಲಕ್ಷ್ಮೀ ಲೇಔಟ್‌ನ ಕಮಲನಗರ ಬಳಿ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಉಮಾದೇವಿ ಎಂಬ ಕುಬ್ಜ ಮಹಿಳೆ ಬಂದು ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, “ಓಟ್ ಮಾಡದವರು ಬ್ಯಾಡ್ ಫೇಲೋಸ್. ಮತದಾನ ನಮ್ಮ ಹಕ್ಕು, ಎಲ್ಲರೂ ಎದ್ದು ಬಂದು ಮತ ದಾನ ಮಾಡಿ‘ ಎಂದರು.
Related Articles
Advertisement
ನಿವೃತ್ತ ನೌಕರರು, ಹಿರಿಯ ನಾಗರಿಕರು, 90 ವರ್ಷ ಮೇಲ್ವಟ್ಟ ವಯೋವೃದ್ಧರು ಬೆಳಗಿನ ಅವಧಿಯಲ್ಲಿ ಹೆಚ್ಚು
ಕಾಣಿಸಿಕೊಂಡರೆ, ಮಧ್ಯಾಹ್ನದ ನಂತರ ಮಹಿಳೆಯರ ಪ್ರಮಾಣ ಹೆಚ್ಚಿತ್ತು. ಸಂಜೆ ಬಿರುಸಿನ ಮತದಾನ ಕಂಡುಬಂತು. ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿ ನಂದಿನಿ ಲೇಔಟ್ 4ನೇ ಬ್ಲಾಕ್, 6ನೇ ಮುಖ್ಯ ರಸ್ತೆಯ ಹತ್ತಕ್ಕೂ ಹೆಚ್ಚು ಮಂದಿ ಚುನಾವಣಾ ಆಯೋಗದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. 50 ವರ್ಷದಿಂದ ಇದೇ ಬಡಾವಣೆಯಲ್ಲಿದ್ದೇವೆ. ಕಳೆದ ಬಾರಿ ಓಟ್ ಹಾಕಿದ್ದೆವು. ಈ ಬಾರಿ ಪಟ್ಟಿಯಲ್ಲಿ ಹೆಸರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ, ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.