Advertisement
ಗುಜರಾತ್, ಕರ್ನಾಟಕ, ಹಿಮಾಚಲ, ಮಧ್ಯಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುವ ಅಶ್ವಗಂಧದ ವೈಜ್ಞಾ ನಿಕ ಹೆಸರು ಮಿತಾನಿಯ ಸಾಮ್ನಿಫೆರಾ. ಇದರಲ್ಲಿ ಅಲ್ಕಾಲಾಯಿಡ್ ಮಿಥಾನಿನ್ ಮತ್ತು ಸಾಮ್ನಿಫೆರಿರಾ ಔಷಧೀಯ ಅಂಶಗಳಿ ರುವುದರಿಂದ ಇದು ಸರ್ವರೋಗಕ್ಕೆ ಮನೆ ಮದ್ದು. ಇದರ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಫ, ಕೆಮ್ಮು, ನಿತ್ರಾಣ ಹಾಗೂ ಸ್ತ್ರೀಯರ ದೈಹಿಕ ಸಮಸ್ಯೆಗಳಿಗೆ ಅಶ್ವಗಂಧ ತತ್‌ಕ್ಷಣಕ್ಕೆ ಸಿಗುವ ಮನೆಮದ್ದು. ಇದರ ಎಲೆಗಳಲ್ಲಿ ಖನಿಜಾಂಶ ಹಾಗೂ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳಲ್ಲಿ ಟೂಳ್ಳು ಉಂಟಾಗದಂತೆ ತಡೆಯುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿಯಾಗಿರುವ ಅಶ್ವಗಂಧ,ಉರಿಯೂತ ನಿವಾರಕ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನಿದ್ರಾ ಹೀನತೆ, ಕ್ಯಾನ್ಸರ್, ಸಂಧಿವಾತ, ಮಧುಮೇಹ ವನ್ನು ಹತೋಟಿಗೆ ತರಲು ಅಶ್ವಗಂಧದ ಬೇರಿನಿಂದ ತಯಾರಿಸಿದ ಚೂರ್ಣವನ್ನು ನಿರಂತರವಾಗಿ ಸೇವಿಸುವುದು ಒಳಿತು. ಇದು ಮಾನಸಿಕ ಖನ್ನತೆಯನ್ನು ದೂರ ಮಾಡಿ ನಮ್ಮ ನರಮಂಡಲವನ್ನು ಸದೃಢವಾಗಿರುವಂತೆ ಮಾಡುತ್ತದೆ.
ಅಶ್ವಗಂಧದ ಬೇರನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ದೃಷ್ಟಿ ದೋಷವನ್ನು ನಿವಾರಣೆ ಮಾಡಬಹುದು ಎನ್ನುತ್ತಾರೆ ಆಯುರ್ವೇದ ಪಂಡಿತರು. ಅಶ್ವಗಂಧದ ಚೂರ್ಣ, ಲೋದ್ರದ ಚಕ್ಕೆ ಮತ್ತು ನೆಲಗುಂಬಳದ ಗಡ್ಡೆಯನ್ನು ಸಮಭಾಗದಲ್ಲಿ ಸೇರಿಸಿ, ದಿನಕ್ಕೆ 2.50 ಗ್ರಾಂ ಅನ್ನು ಪ್ರತಿ ನಿತ್ಯ ಒಂದು ಲೋಟ ಹಾಲಿನೊಂದಿಗೆ ಸ್ತ್ರೀಯರು ಸೇವಿಸಿದರೆ ಅವರಿಗೆ ಕಾಡುವ ಮಾನಸಿಕ ವೈಕಲ್ಯ ಮತ್ತು ಖನ್ನತೆಯನ್ನು ದೂರ ಮಾಡಬಹುದು. ಪುರುಷರಲ್ಲಿ ಕಾಡುವ ಲೈಂಗಿಕ ಸಮಸ್ಯೆಗಳಿಗೆ ಅಶ್ವಗಂಧವು ರಾಮಬಾಣವಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ಅನೇಕ ಸಮಸ್ಯೆಗಳಿಗೆ ನೈಸರ್ಗಿಕವಾದ ಪರಿಹಾರವನ್ನು ನೀಡುತ್ತವೆ. ಮಕ್ಕಳ ನಿಶ್ಶಕ್ತಿ ತಡೆ
ಅಶ್ವಗಂಧ ಉಷ್ಣಕಾರಕ
ಶಕ್ತಿಯನ್ನು ಹೊಂದಿರುವುದರಿಂದ ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ಸೇವಿಸುತ್ತಾರೆ. ಇದು ಶರೀರಕ್ಕೆ ಬಲ ನೀಡುತ್ತದೆ. ಮಕ್ಕಳು ಮತ್ತು ಯುವಕರಿಗೆ ಹೆಚ್ಚು ಅಶ್ವಗಂಧವನ್ನು ನೀಡಲಾಗುತ್ತದೆ. 100 ಗ್ರಾಂ ಅಶ್ವಗಂಧ ಬೇರನ್ನು ಶುದ್ಧ ಮಾಡಿ ಹಾಲಿನಲ್ಲಿ ಬೇಯಿಸಿ, ಒಣಗಿಸಿ, ಚೂರ್ಣವನ್ನು ಮಾಡಿ ಗಾಜಿನ ಭರಣಿಯಲ್ಲಿಡಬೇಕು. ಅನಂತರ ದಿನದಲ್ಲಿ ಮೂರು ಬಾರಿ ಐದು ಗ್ರಾಂ ನಷ್ಟು ಸೇವಿಸಿದರೆ ನಿಶ್ಶಕ್ತಿ ನಿವಾರಣೆಯಾಗುತ್ತದೆ.