Advertisement
ಈ ಮಧ್ಯೆ ಎಂಡೋಸಲ್ಫಾನ್ ದುರಂತ ಬಾಧಿತರ ಪುನರ್ವಸತಿಗಿರುವ ಎಂಡೋ ಸಲ್ಫಾನ್ ಸೆಲ್ ಸಭೆಯು ಮಾ.18ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಕಲೆಕ್ಟರೇಟ್‌ನಲ್ಲಿ ಜರಗಲಿದೆ. ಮಾರ್ಚ್ ತಿಂಗಳಿಗಿಂತ ಮೊದಲು ವೈದ್ಯಕೀಯ ಶಿಬಿರ ನಡೆಸಲು ಮರು ಸ್ಥಾಪನೆಗೊಂಡ ಎಂಡೋ ಸೆಲ್‌ನ ಪ್ರಥಮ ಸಭೆಯಲ್ಲಿ ನಿರ್ಧರಿಸಲಾಗಿತ್ತು.
Related Articles
Advertisement
2013ರ ಆಗಸ್ಟ್ 20ರಿಂದ 25ರ ವರೆಗೆ ಕೊನೆಯದಾಗಿ ಎಂಡೋಸಲ್ಫಾನ್ ಪೀಡಿತರ ವೈದ್ಯಕೀಯ ಶಿಬಿರ ನಡೆದಿತ್ತು. ಸಂತ್ರಸ್ತರನ್ನು ಗುರುತಿಸಲು ಪ್ರತಿ ವರ್ಷ ವೈದ್ಯಕೀಯ ಶಿಬಿರವನ್ನು ನಡೆಸಬೇಕು ಎಂದು ಎಂಡೋ ವಿರುದ್ಧ ಹೋರಾಟ ನಡೆಸುವ ಕ್ರಿಯಾ ಸಮಿತಿಗೆ 2014ರಲ್ಲಿ ಅಂದಿನ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಲಿಖೀತ ರೂಪದಲ್ಲಿ ಭರವಸೆ ನೀಡಿದ್ದರು. ಆದರೆ ಈ ಭರವಸೆ ಕೂಡ ಮಣ್ಣು ಪಾಲಾಗಿರುವುದು ಸುಳ್ಳಲ್ಲ.
2016ರ ಫೆಬ್ರವರಿ ತಿಂಗಳಾಂತ್ಯದಲ್ಲಿ ಶಿಬಿರ ನಡೆಸಲಾಗುವುದು ಎಂದು ಸತ್ಯಾಗ್ರಹ ನಿರತರಾಗಿದ್ದ ಹೋರಾಟ ಸಮಿತಿ ಮುಖಂಡರಿಗೆ ಮತ್ತೆ ಭರವಸೆ ಕೊಡಲಾಗಿತ್ತಾದರೂ ಅದನ್ನೂ ಪಾಲಿಸ ಲಿಲ್ಲ. ಶಿಬಿರದಲ್ಲಿ ಭಾಗವಹಿಸಿದ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೆಸರಿಲ್ಲದಿರುವುದರಿಂದ ಹಲವು ಮಂದಿ ಸಂತ್ರಸ್ತರಿಗೆ ಚಿಕಿತ್ಸಾ ಸಹಾಯ ನಿರಾಕರಿಸಲಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ಕಾಸರಗೋಡು ಜಿಲ್ಲೆಯ ಯಾವುದೇ ರೋಗಿ ಎಂಡೋಸಲ್ಫಾನ್ ಬಾಧಿತ ರಾಗಿದ್ದರೆ ಉಚಿತ ಚಿಕಿತ್ಸೆ ಒದಗಿಸಬೇಕು ಎಂಬ ನಿಯಮವಿದೆ. ಆದರೂ ವೈದ್ಯರು ಅದಕ್ಕೆ ಸಿದ್ಧರಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
2013ರ ವೈದ್ಯಕೀಯ ಶಿಬಿರದ ಮಾನದಂಡಗಳಿಗೆ ಅನುಸಾರವಾಗಿ ನೂತನ ಶಿಬಿರದಿಂದ ರೋಗಿಗಳನ್ನು ಎಂಡೋಸಲ್ಫಾನ್ ಪೀಡಿತರ ಪಟ್ಟಿಗೆ ಸೇರಿಸಲಾಗುವುದು ಎಂದು ಅಧಿಕಾರಿ ಗಳು ಹೇಳುತ್ತಿದ್ದಾರೆ.
ಇದೀಗ 5,848 ಮಂದಿ ಎಂಡೋಸಲ್ಫಾನ್ ಸಂತ್ರಸ್ತರು ಪಟ್ಟಿಯಲ್ಲಿದ್ದಾರೆ ಎಂದು ಎಂಡೋ ಬಾಧಿತರ ಕಲ್ಯಾಣ ಚಟುವಟಿಕೆಗಳ ಉಸ್ತುವಾರಿ ಹೊಂದಿರುವ ಸಹಾಯಕ ಜಿಲ್ಲಾಧಿಕಾರಿ ಕೆ.ಆರ್. ರವೀಂದ್ರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭರವಸೆ ನೀಡಿದರೂ ಪಾಲನೆಯಾಗಿಲ್ಲ 2013ರ ಆಗಸ್ಟ್ 20ರಿಂದ 25ರ ತನಕ ಕೊನೆಯದಾಗಿ ಎಂಡೋ ಸಲ್ಫಾನ್ ಬಾಧಿತರ ವೈದ್ಯಕೀಯ ಶಿಬಿರವನ್ನು ನಡೆಸಲಾಗಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಸಂತ್ರಸ್ತರನ್ನು ಗುರುತಿಸಲು ಪ್ರತಿ ವರ್ಷ ವೈದ್ಯಕೀಯ ಶಿಬಿರ ನಡೆಸಲಾಗುವುದು ಎಂದು ಎಂಡೋಸಲ್ಫಾನ್ ವಿರೋಧಿ ಹೋರಾಟ ಕ್ರಿಯಾ ಸಮಿತಿಗೆ 2014ರಲ್ಲಿ ಅಂದಿನ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಭರವಸೆ ನೀಡಿದ್ದರು. 2016ರ ಫೆಬ್ರವರಿ ತಿಂಗಳಲ್ಲಿ ಶಿಬಿರ ಏರ್ಪಡಿಸಲಾಗುವುದು ಎಂದು ನಿರಶನ ನಿರತರಾಗಿದ್ದ ಹೋರಾಟ ಸಮಿತಿ ಪದಾಧಿಕಾರಿಗಳಿಗೆ ಕೇರಳ ಸರಕಾರದ ಕಡೆಯಿಂದ ಮತ್ತೆ ಭರವಸೆ ನೀಡಲಾಗಿತ್ತಾದರೂ ಅದನ್ನು ಇಲ್ಲಿಯವರೆಗೆ ಈಡೇರಿಸಿಲ್ಲ ಎಂಬುದು ಬಹುದೊಡ್ಡ ದುರಂತ.