Advertisement

ಎಂಡೋಸಲ್ಫಾನ್‌ : ಸಂತ್ರಸ್ತರ ಪಟ್ಟಿಗೆ ಹೆಚ್ಚುವರಿ 511 ಮಂದಿ ಸೇರ್ಪಡೆ

12:37 AM Jun 17, 2019 | Team Udayavani |

ಕಾಸರಗೋಡು: ಎಂಡೋಸಲ್ಫಾನ್‌ ಸಂತ್ರಸ್ತರ ಪಟ್ಟಿಯಲ್ಲಿ ಹೆಚ್ಚುವರಿ 511 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್‌ ಜಿಲ್ಲಾ ಮಟ್ಟದ ಘಟಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್‌ ಅಧ್ಯಕ್ಷತೆ ವಹಿಸಿದ್ದರು.

Advertisement

1981 ಮಂದಿಯ ಪಟ್ಟಿ ಈ ಹಿಂದೆ ಅಂಗೀಕರಿಸಿ, ಅವರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಇದಲ್ಲದೆ 18 ವರ್ಷಕ್ಕಿಂತ ಕಳೆಗಿನವರನ್ನು ಈಗ ಸೇರಿಸಲಾಗಿದೆ. ಇವರಿಗೆ ಸರಕಾರ ಘೋಷಿಸಿರುವ ಎಲ್ಲ ಸೌಲಭ್ಯಗಳೂ ಲಭಿಸಲಿವೆ. ಈ ಪಟ್ಟಿಗೆ ಅರ್ಹರಾದವರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಜೂ.25ರಿಂದ ಜುಲೈ 9 ರ ವರೆಗೆ ವಿವಿಧ ಪಂಚಾಯತ್‌ಗಳಲ್ಲಿ ಶಿಬಿರ ನಡೆಯಲಿದೆ. ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವ ಸಂತ್ರಸ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು. ಸಂತ್ರಸ್ತರ ಚಿಕಿತ್ಸೆಯ ಎಲ್ಲ ವೆಚ್ಚಗಳನ್ನೂ ಸರಕಾರ ವಹಿಸಿಕೊಳ್ಳಲಿದೆ. ಇದಕ್ಕೆ ಮಿತಿಯನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ಸಚಿವ ತಿಳಿಸಿದರು.

ಪುನರ್ವಸತಿ ಗ್ರಾಮ ನಿರ್ಮಾಣಕ್ಕಾಗಿ 68 ಕೋಟಿ ರೂ. ನ ಸಮಗ್ರ ಯೋಜನೆ¿ ಅಳವಡಿಸಿ ಯೋಜನೆ ಜಾರಿಗೊಳಿಸಲು ಸರಕಾರ ಉದ್ದೇಶಿಸಿದೆ. ಪುನರ್ವತಿ ಯೋಜನೆ ತ್ವರಿತವಾಗಿಲ್ಲ ಎಂಬ ಆರೋಪವನ್ನು ಗಂಭಿರವಾಗಿ ಪರಿಶೀಲಿಸುತ್ತಿದೆ. ಸಂತ್ರಸ್ತರ 3 ಲಕ್ಷ ರೂ. ವರೆಗಿನ ಸಾಲಗಳನ್ನು ಮನ್ನಾ ಮಾಡುವ ಕ್ರಮ ಕೈಗೊಂಡಿದೆ. ಇದಕ್ಕೆ ಚೆಕ್‌ ಗಳನ್ನು ಖಜಾನೆಗೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ತಿಳಿಸಿದರು.

ಶಿಲಾನ್ಯಾಸ ನಡೆಸಿ 6 ವರ್ಷ

ಶಿಲಾನ್ಯಾಸ ನಡೆಸಿ 6 ವರ್ಷ ಕಳೆದರೂ ಕಾಸರಗೋಡು ಮೆಡಿಕಲ್ ಕಾಲೇಜಿನ ಕಾಮಗಾರಿ ಪೂರ್ಣಗೊಳ್ಳದೇ ಉಳಿದಿದೆ. ತುರ್ತು 10ಕೊಟಿ ರೂ. ಸರಕಾರದಿಂದ ಲಭಿಸುವ ಕ್ರಮ ಕೈಗೊಳ್ಳಲಾಗುವುದು. ಸಂಸದರ, ಶಾಸಕರ ನಿಧಿ ಬಳಸಲೂ ಆಲೋಚಿಸಲಾಗುತ್ತಿದೆ. ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಕಿಡ್ಕೋ ಗೆ ಹಸ್ತಾಂತರಿಸಲಾಗಿದ್ದ 1.25 ಕೊಟಿ ರೂ. ಗುತ್ತಿಗೆದಾರರಿಗೆ ನೀಡದೇ ಬೇರೆ ವಿಚಾರಗಳಿಗಾಗಿ ವೆಚ್ಚ ಮಾಡಲಾಗಿದೆ ಎಂಬ ಆರೋಪ ಬಗ್ಗೆ ತನಿಖೆ ನಡೆಸಲಾಗುವುದು. ಎಂಡೋಸಲ್ಫಾನ್‌ ಸಂತ್ರಸ್ತರಿಂದ ಅಕ್ಷಯ ಕೇಂದ್ರಗಳಲ್ಲಿ 50 ರೂ. ನೋಂದಣಿ ಶುಲ್ಕವಾಗಿ ಪಡೆಯುತ್ತಿರುವ ದೂರುಗಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

Advertisement

ಶೀಘ್ರದಲ್ಲೇ ಆರಂಭ

ಬಡ್ಸ್‌ ಶಾಲೆಗಳ ಚಟುವಟಿಕೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. Í. ಡಯಾಲಿಸಿಸ್‌ ಅಗತ್ಯವಿರುವ ಎಲ್ಲ ಸಂತ್ರಸ್ತರಿಗೆ ಬೇಕಾದ ಸೌಲಭ್ಯ ಸರಕಾರಿ ಆಸ್ಪತ್ರೆಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಅಸ್ಪತ್ರೆಗಳಲ್ಲೂ ಸೌಲಭ್ಯ ಏರ್ಪಡಿಸಲಾಗುವುದು.

ಸರಕಾರಗಳು ವಿಫಲ

ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ, ಎಂಡೋಸಲ್ಫಾನ್‌ ನಿರ್ಮಾಣ ಸಂಸ್ಥೆಯಿಂದ, ರಾಜ್ಯ ತೋಟ ಗಾರಿಕೆ ನಿಗಮದಿಂದ ಲಭಿಸಬೇಕಾದ ಸಹಾಯ ಗಳನ್ನು ಒದಗಿಸುವಲ್ಲಿ ರಾಜ್ಯದಲ್ಲಿ ಆಡಳಿñ ನಡೆಸಿದ ಸರಕಾರಗಳು ವಿಫಲವಾಗಿವೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಇಂದಿಗೂ ದಾಸ್ತಾನು ಕೇಂದ್ರದಲ್ಲಿರುವ ಕೀಟನಾಶಕ ಹಾಗೆಯೇ ಇದೆ. ಇದು ಅಪಾಯಕ್ಕೆ ಕಾರಣವಾಗಲಿದೆ ಎಂಬ ದೂರುಗಳು ಕೇಳಿಬಂದುವು. ಸಂಸದ ರಾಜ್‌ ಮೋಹನ್‌ ಉಣ್ಣಿತ್ತಾನ್‌, ಶಾಸಕರಾದ ಎನ್‌.ಎ.ನೆಲ್ಲಿಕುನ್ನು, ಕೆ.ಕುಂಞಿ ರಾಮನ್‌, ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಘಟಕ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next