Advertisement

ಎಂಡೋ ಸಮಸ್ಯೆ: ಡಾಕ್ಯುಮೆಂಟರಿ ನಿರ್ಮಾಣದ ಇಂಗಿತ

02:03 PM Feb 24, 2017 | Team Udayavani |

ಆಲಂಕಾರು : ಸಹನಾ ಕ್ರಿಯೇಶನ್ಸ್‌ ಮಕ್ಕಳ ಚಿತ್ರ ನಿರ್ಮಾಣ ತಂಡ ಕೊçಲ ಮತ್ತು ಕೊಕ್ಕಡದಲ್ಲಿರುವ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಎಂಡೋ ಸಂತ್ರಸ್ತ ಕುಟುಂಬಗಳ ಬಗೆಗಿನ ನೋವು-ದುಮ್ಮಾನಗಳ ಡಾಕ್ಯುಮೆಂಟರಿ ಚಿತ್ರ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದೆ.

Advertisement

ಕೊçಲ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ, ಎಂಡೋ ಪೀಡಿತ ಮಕ್ಕಳ ಸಂಕಷ್ಟಗಳ ಬಗ್ಗೆ ಮಾಹಿತಿ ಕಲೆ ಹಾಕಿದ ತಂಡ, ಎಂಡೋ ವಿರೋಧಿ ಹೋರಾಟ ಸಮಿತಿಯೊಂದಿಗೆ ಮಾತುಕತೆ ನಡೆಸಿತು.

ಸಂಸ್ಥೆಯ ನಿರ್ಮಾಪಕ ರಮೇಶ್‌, ನಿರ್ದೇಶಕ ತಪಸ್ವಿ, ಕಲಾವಿದ ಶಂಕರ್‌, ಛಾಯಾಚಿತ್ರಗ್ರಾಹಕ ಯಾಸಿರ್‌ ತಂಡ  ಎಂಡೋ ಹೋರಾಟ ಸಮಿತಿ ಅಧ್ಯಕ್ಷ ಪೀರ್‌ ಮಹಮ್ಮದ್‌ ಸಾಹೇಬ್‌, ಸದಸ್ಯೆ  ಗಂಗಾರತ್ನಾ ವಸಂತಾ, ಪತ್ರಕರ್ತ ಸಿದ್ದಿಕ್‌ ನೀರಾಜೆ, ಎಂಡೋ ಪಾಲನಾ ಕೇಂದ್ರದ ಸಂಯೋಜಕಿ ನಮಿತಾ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿತು.ಚಿತ್ರ ನಿರ್ಮಾಣ ತಂಡದವರೊಂದಿಗೆ ಪುತ್ತೂರು ನ.ಸ. ಸದಸ್ಯೆ ಸ್ವರ್ಣಲತಾ ಹೆಗ್ಡೆ, ಸೇವಾದಳ ರಾಜ್ಯ ಸಮಿತಿ ಸದಸ್ಯ ಸಾಬು ಸಾಹೇಬ್‌, ಉಮೇಶ್‌ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next