Advertisement

ತಾಯ್ತನಕ್ಕೆ ಕೊನೆಯೆಂಬುದಿಲ್ಲ…

07:05 PM Mar 10, 2021 | Team Udayavani |

ಅಮ್ಮನೆಂಬ ವ್ಯಕ್ತಿತ್ವವನ್ನು ನೆನೆಸಿಕೊಂಡಾಗಲೆಲ್ಲಾ ಅನಿರ್ವಚನೀಯ ಭಾವವೊಂದು ಜೊತೆಯಾಗುತ್ತದೆ. ಮನೆಯವರ ಬಯಕೆಗಳನ್ನೆಲ್ಲ ನಿಷ್ಠೆಯಿಂದ ಪೂರೈಸುವ, ಆದರೆ ತನ್ನ ಬಯಕೆಗಳನ್ನೆಂದೂ ಹೇಳಿಕೊಳ್ಳದ ಜೀವಿಯೊಂದು ಈ ಪ್ರಪಂಚದಲ್ಲಿ ಇದೆ ಎಂದರೆ ಅದು ಅಮ್ಮ ಮಾತ್ರ!

Advertisement

ಹೆಗಲೆತ್ತರ ಬೆಳೆದ ಮೊಮ್ಮಕ್ಕಳ ಅಜ್ಜನಾಗಿರುವ ನನ್ನ ಎದುರುಮನೆಯ ಕಂಠಿ ಅಂಕಲ್, ಪ್ರತೀ ಬಾರಿ ಹೊರ ಹೊರಟೊಡನೆ ತಮ್ಮ ತೊಂಭತ್ತುವಯಸ್ಸಿನ ತಾಯಿಗೆ ಮರೆಯದೆ ಪುಟ್ಟಮಗುವಿನಂತೆ “ಹೋಗಿ ಬರ್ತೀನಿ ಅಮ್ಮಾ’ ಎಂದು ಹೇಳುವುದನ್ನು ಇನ್ನೂ ಬಿಟ್ಟಿಲ್ಲ ಎಂದರೆ, ಇಂಥ ಗಳಿಕೆ ತಾಯಿಯ ಔದಾರ್ಯಕ್ಕೆ ಮಾತ್ರ ಸಾಧ್ಯವಾಗುವುದು ಹೊರತು ಇನ್ನೋರ್ವರಿಗೆ ಕಷ್ಟಸಾಧ್ಯ.

ಒಂದು ಅರ್ಜಿಯನ್ನು ಮರಳಿಸುವ ಸಂದರ್ಭದಲ್ಲಿ ನನಗಾದ ಅನುಭವ ಇದು: ಮೀಟರುಗಟ್ಟಲೆ ಉದ್ದ ಸರತಿಯ ಸಾಲು ಇದ್ದುದರಿಂದ, ಆವತ್ತು ನನ್ನ ಮೂರು ವರ್ಷದ ಮಗಳ ನೆವ ಹೇಳಿ ಸ್ವಲ್ಪ ಬೇಗ ಪರಿಶೀಲಿಸಲು ಅಧಿಕಾರಿಗಳನ್ನು ಕೋರಿಕೊಂಡೆ. ಇದನ್ನು ಕೇಳಿಸಿಕೊಂಡ ಇನ್ನೊಂದು ಮಹಿಳೆ-“ಮೇಡಂ, ಅವರದ್ದು ಮೂರು ವರ್ಷದ ಮಗು, ನಾನು ಮೂರು ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ, ನನ್ನದೇ ಮೊದಲು ತೆಗೆದುಕೊಳ್ಳಿ’ ಎಂದರು!. ಆಗ ಆ ಅಧಿಕಾರಿ- “ನೋಡೀ,

ಮಗು ಮೂರು ತಿಂಗಳಿನದ್ದಾಗಲೀ, ಮೂರು ವರ್ಷದ್ದಾಗಲೀ, ಅಮ್ಮನಿಗೆ ಅದುಯಾವತ್ತೂ ಮಗುವೇ. ಮಕ್ಕಳಿಗೆ ವರ್ಷ ಜಾಸ್ತಿಯಾದರೆ ತಾಯಿಗೆ ಅವುಗಳ ಮೇಲಿನಪ್ರೇಮವೇನೂಕಡಿಮೆಯಾಗುವುದಿಲ್ಲ’ ಎಂದರು.

ಅವರ ಈ ಮಾತುಗಳು ಅನುಭವಜನ್ಯ ಎನಿಸಿ ಗೌರವ ಮೂಡಿತು. ಹೀಗಾಗಿ ಮಕ್ಕಳು ಹುಟ್ಟಿದಾಗ ಮೂಡುವ ಪ್ರೀತಿ ಅದು ಅವಳ ಅಂತ್ಯದವರೆಗೂ ಲವಲೇಶವೂಕಡಿಮೆಯಾಗುವುದಿಲ್ಲ. ಮಕ್ಕಳ ಮೇಲಿನಮಮತೆ ಅವಳ ಅಂತ್ಯದವರೆಗೂ ಸ್ಥಾಯಿ.ಇದನ್ನೇ ಕರಾವಳಿ ಜನಪದ “ಮಕ್ಕಳತಾಯೀನ ಸುಟ್ಟರೂ ಬೇಯಳು, ಮಕ್ಕೀಗದ್ದೇಲಿ ನಿಂತ್ಕಂಡ್‌| ತಾಯಮ್ಮ ಮಕ್ಳೀಗಿನ್ಯಾರು ಗತಿಯೆಂಬುದು’ ಅಂದರೆ ತಾಯಿ ತನ್ನ ಸಾವಿನಲ್ಲೂ ಮಕ್ಕಳಿಗಾಗಿಕನಲುತ್ತಾಳೆ ಎನ್ನುತ್ತದೆ. ಮಕ್ಕಳು ಎಷ್ಟೇ ಪಾಕಪ್ರವೀಣರೇಆಗಿದ್ದರೂ, ಅಮ್ಮ ಬರೇ ಉಪ್ಪು, ಹುಳಿ, ಖಾರ ಹಾಕಿದ ಅಡುಗೆರುಚಿಯಾಗುವುದು-ಅದರೊಂದಿಗೆ ಮಿಳಿತವಾಗಿರುವ ನಿಸ್ವಾರ್ಥ ಪ್ರೀತಿಯಕಾರಣಕ್ಕೆ. ಅದಕ್ಕೆ ತಾಯಿಯೆಂದಾಗನಮ್ಮಲ್ಲಿ ದೈವತ್ವದ ಪೂಜ್ಯಭಾವನೆಯೊಂದು ಹಾಗೇ ಮನಸ್ಸಿನಲ್ಲಿಮೂಡಿದರೆ ಅದು ಆ ಪದವಿಗಿರುವಶ್ರೇಷ್ಠತೆ, ಪ್ರಕೃತಿ ಮಾನವನಿಗೆ ಕೊಟ್ಟ ಅತ್ಯಮೂಲ್ಯ ಕಾಣಿಕೆ

Advertisement

 

ಶ್ರೀರಂಜನಿ ಅಡಿಗ

 

Advertisement

Udayavani is now on Telegram. Click here to join our channel and stay updated with the latest news.

Next