Advertisement
ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡ್ಯೊಯಲು ಇಂತಹ ಸಾಹಿತ್ಯ ಸಮ್ಮೇಳನ ಮಾಡಬೇಕಿದೆ. ಅದರಂತೆಯೇ ಕನ್ನಡದ ಬಗ್ಗೆ ಮರು ಆಲೋಚನೆಗೆ ಹಚ್ಚುವ ರೀತಿ ಸಾಹಿತ್ಯ ಸಮ್ಮೇಳನ ನಡೆಸುವತ್ತ ಸಂಘಟಕರು ಚಿಂತನೆ ನಡೆಸಬೇಕಿದೆ. ಕನ್ನಡ ಭಾಷೆ ಅನ್ನ ಕೊಡತ್ತೂ ಇಲ್ಲವೋ, ಆದರೆ ಅಪ್ಪಟ ಮನುಷ್ಯತ್ವದ ಗುಣ ಲಕ್ಷಣವನ್ನು ಕನ್ನಡ ಭಾಷೆ, ಸಾಹಿತ್ಯ ಕಲಿಸಲಿದೆ ಎಂದರು.
ಕಾರಣರಾದವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಸಮ್ಮೇಳನಕ್ಕೆ ಸಹಕರಿಸಿದವರನ್ನು
ಅಭಿನಂದಿಸಿದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ
ಕಡತೋಕಾ, ಉದ್ಯಮಿ ರಾಜು ಭಂಡಾರಿ, ಸೇಫ್ ಸ್ಟಾರ್ ಸಮೂಹ ಸಂಸ್ಥೆ ಅಧ್ಯಕ್ಷ ಜಿ.ಜಿ.ಶಂಕರ, ಅಭಿಮಾನ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂದೀಪ ಪೂಜಾರಿ, ಇ.ಒ. ಸುರೇಶ ನಾಯ್ಕ, ಬಿ.ಇ.ಒ ಜಿ.ಎಸ್ .ನಾಯ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ್, ಜಿಲ್ಲಾ ಕಾ.ನಿ.ಪ ಸಂಘದ ಸದಸ್ಯ ಎಚ್.ಎಂ.ಮಾರುತಿ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಸುದೀಶ ನಾಯ್ಕ, ಆರ್.ಟಿ.ನಾಯ್ಕ, ಸತೀಶ ನಾಯ್ಕ, ದೀಪಕ ನಾಯ್ಕ, ಸಂತೋಷ ಕುಮಾರ, ಅಣ್ಣಪ್ಪ ಮುಕ್ರಿ, ಮತ್ತಿತರರು ಇದ್ದರು.
Related Articles
ಎಚ್. ಗೌಡ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಪ್ರಾಸ್ತಾವಿಕ ನುಡಿಯನ್ನಾಡಿದರು. ಗೌರವ
ಕಾರ್ಯದರ್ಶಿ ಪಿ.ಆರ್.ನಾಯ್ಕ ವಂದಿಸಿದರು. ಪ್ರಕಾಶ ನಾಯ್ಕ, ಆರ್.ಬಿ.ಶೆಟ್ಟಿ ನಿರ್ವಹಿಸಿದರು.
Advertisement
ಡಾ| ಶ್ರೀಪಾದ ಶೆಟ್ಟರ ಕವಿತೆಗಳಲ್ಲಿ ಹಳ್ಳಿಸೊಗಡು-ಪ್ರಕೃತಿ ಸೌಂದರ್ಯ
ಹಳ್ಳಿಯ ಸೊಗಡು, ಪ್ರಕೃತಿ ಸೌಂದರ್ಯವನ್ನು ಕವಿತೆ ರೂಪದಲ್ಲಿ ಕಟ್ಟಿಕೊಟ್ಟ ಹಿರಿಮೆ ಡಾ| ಶ್ರೀಪಾದ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ಸಾಹಿತಿ ಪ್ರೋ| ಆರ್.ಎಸ್.ನಾಯಕ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವ ಲೋಕನ ಸಂವಾದದಲ್ಲಿ ಪಾಲ್ಗೊಂಡು ಸಾಹಿತ್ಯ ಸಮ್ಮೆಳಾಧ್ಯಕ್ಷರ ಸಾಹಿತ್ಯ ಕೃಷಿ ಅವಲೋಕಿಸಿ ಅವರು ಮಾತನಾಡಿದರು.
ಕವಿಗಳ ವ್ಯಕ್ತಿ ಚಿತ್ರಣ, ತಾಲೂಕಿನಲ್ಲಿ ಹರಿಯುವ ಶರಾವತಿ ನದಿಯ ಆರ್ಭಟ ಸೇರಿದಂತೆ ಪ್ರಕೃತಿಯ ವಿಸ್ಮಯವನ್ನು ಕವಿತೆಯ ರೂಪದಲ್ಲಿ ಸಮಾಜದ ಮುಂದೆ ಇಟ್ಟಿದ್ದಾರೆ. ದಿನಕರ ದೇಸಾಯಿಯವರ ಕುರಿತು ಸಂಶೋಧನಾ ಪ್ರಬಂಧ ಇಂದಿನ ಯುವಕರಿಗೆ ಮಾರ್ಗದರ್ಶನ ಗ್ರಂಥವಾಗಿದೆ. ಇವರಿಂದ ಪ್ರಕಟವಾದ ಪ್ರವಾಸಿ ಕಥನಗಳು ಪ್ರವಾಸಿಗರನ್ನು ಆ ಸ್ಥಳದತ್ತ ಕರೆದೊಯ್ಯುವ ಮಟ್ಟಿಗೆ ಪ್ರಭಾವ ಬೀರಿದೆ ಎಂದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಸಮ್ಮೇಳನಾಧ್ಯಕ್ಷರ ಬದುಕಿನ ಕುರಿತು ಮಾತನಾಡಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿ, ಸಮಾಜಮುಖಿ ಕಾರ್ಯ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದರು. ಸಂವಾದದಲ್ಲಿ ಶಂಕರ ಗೌಡ, ಮಮತಾ ನಾಯ್ಕ, ಪೂರ್ಣಿಮಾ ಮುರ್ಡೇಶ್ವರ, ಶಶಿಧರ ದೇವಾಡಿಗ, ಎಂ.ಡಿ. ಹರಿಕಂತ್ರ, ಮಂಜುನಾಥ ಗಾವಂಕರ ಬರ್ಗಿ, ಜನಾರ್ದನ ಹರಿನೀರು, ವಿನಾಯಕ ಶೇಟ್, ಸಾಧನಾ ಬರ್ಗಿ ಪಾಲ್ಗೊಂಡರು. ವೇದಿಕೆಯಲ್ಲಿ ಅಂಕೋಲಾದ ದಿನಕರ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು, ನಿವೃತ ಪ್ರಾಧ್ಯಾಪಕ ಡಾ| ಸುರೇಂದ್ರ ದಫೇದಾರ ಉಪಸ್ಥಿತರಿದ್ದರು.
23ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯ *ಶಿರಸಿಯಲ್ಲಿ ಈಗಾಗಲೇ ಘೋಷಣೆಯಾಗಿರುವ ಪರಿಸರ ವಿಶ್ವವಿದ್ಯಾಲಯವನ್ನು ಶೀಘ್ರ ಸ್ಥಾಪಿಸುವುದರ ಜೊತೆಗೆ ಜಿಲ್ಲೆಗೊಂದು ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಲು ಒತ್ತಾಯ.
* ಜಿಲ್ಲೆಯಲ್ಲಿ ಈಗಾಗಲೇ ಬೇಡಿಕೆ ಇರುವ ಹೋರಾಟದ ಧ್ವನಿಯೂ ಆಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಆಗ್ರಹ
*ಹೊನ್ನಾವರದಲ್ಲಿ ರಾಣಿ ಚೆನ್ನ ಭೈರಾದೇವಿ ಥೀಮ್ ಪಾರ್ಕ್ ಜೊತೆಗೆ ಅಂಕೋಲೆಯಲ್ಲಿ ಡಾ| ದಿನಕರ ದೇಸಾಯಿ
ಥೀಮ್ ಪಾರ್ಕ್ ಸ್ಥಾಪನೆಗೆ ಒತ್ತಾಯ.
* ಘೋಷಿತ ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗ ಹಾಗೂ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗ ಶೀಘ್ರ ಪ್ರಾರಂಭಿಸಲು
ಒತ್ತಾಯ.
* ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ಪ್ರವಾಸೋದ್ಯಮ ಮಾನ್ಯತೆ
ಸಿಗಬೇಕು.
* ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿಗೊಂದು ಸಾಹಿತ್ಯ ಭವನ ನಿರ್ಮಿಸಲು ಸರ್ಕಾರಕ್ಕೆ ಒತ್ತಾಯ.
* 7. ಸಮ್ಮೇಳನದ ಯಶಸ್ವಿಗೆ ಕಾರಣಿಕರ್ತರಾದ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಸಮ್ಮೇಳನದ ಯಶಸ್ಸಿಗೆ ಜೊತೆಯಾದ
ಎಲ್ಲರಿಗೂ ಜಿಲ್ಲಾ ಸಾಹಿತ್ಯ ಪರಿಷತ್‌ನಿಂದ ವಿಶೇಷವಾಗಿ ಅಭಿನಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.