Advertisement
ದೇಗುಲದ ಭಕ್ತರಾದ ಸಂದೀಪ್ ಹಾಗೂ ನವೀನ್ ಜೈನ್ ಎಂಬುವವರು ದೇವಸ್ಥಾನದ ಪೂಜಾ ವಿಧಿವಿಧಾನಗಳಿಗೆ ಆಡಳಿತ ಮಂಡಳಿಯಿಂದ ಯಾವುದೇ ಅಡ್ಡಿಯಾಗದಂತೆ ನಿರ್ಬಂಧಕಾಜ್ಞೆ ನೀಡಬೇಕೆಂದು ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
Related Articles
Advertisement
ಕೋವಿಡ್-19 ಇರುವ ಈ ಕಾಲದಲ್ಲಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಏಕಕಾಲಕ್ಕೆ 40 ಜನರನ್ನು ಮಾತ್ರ ಸೇರಿಸಬೇಕು. ಭಕ್ತರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಅಂಶಕ್ಕೆ ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿಭಟ್ ಸಮ್ಮತಿ ಸೂಚಿಸಿದ್ದಾರೆ. ಪೂಜೆಯ ನಂತರ ಮಂಗಳಾರತಿ ತಟ್ಟೆಯನ್ನು ಅರ್ಚಕರು ಭಕ್ತರ ಬಳಿ ಕೊಂಡೊಯ್ಯುವಂತಿಲ್ಲ. ನಿರ್ದಿಷ್ಟ ಜಾಗದಲ್ಲಿ ಇಟ್ಟು ಭಕ್ತರಿಗೆ ನಮಸ್ಕರಿಸಲು ಅವಕಾಶ ನೀಡಬೇಕು. ದಸರಾ ಅಂಗವಾಗಿ ಶೇಷಗಿರಿ ಭಟ್ ಕುಟುಂಬ ಚಂಡಿಕಾಹೋಮವನ್ನು ಧರ್ಮದರ್ಶಿ ರಾಮಪ್ಪ ,ರವಿಕುಮಾರ್ ಕುಟುಂಬದವರ ಉಪಸ್ಥಿತಿಯಲ್ಲಿ ನೆರವೇರಿಸಬೇಕು ಎಂಬ ಅಂಶಕ್ಕೆ ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದ್ದಾರೆ.
ದೇವಾಲಯಕ್ಕೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸರಕಾರದ ಮಾರ್ಗಸೂಚಿಯನ್ವಯ ಅವಕಾಶ ನೀಡಬೇಕು. ಕೋವಿಡ್ ಪಿಡುಗಿನ ನಂತರ ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ ಅವರು ಪರಸ್ಪರ ಹೊಂದಾಣಿಕೆ ಮೂಲಕ ಪೂಜೆ ಮತ್ತಿತರ ಚಟುವಟಿಕೆ ಮುಂದುವರಿಸಿಕೊಂಡು ಹೋಗಲು ಮಧ್ಯಸ್ತಿಕೆಗಾರರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ
ಈ ಮಾತುಕತೆ ಬಳಿಕ ಉಭಯ ಪಕ್ಷಗಾರರ ಒಪ್ಪಿಗೆಯ ಮೇರೆಗೆ ದಾವೆಯನ್ನು ಹಿಂದೆ ಪಡೆಯಲಾಯಿತು. ದಾವೆದಾರರ ಪರವಾಗಿ ವಕೀಲರಾದ ರವೀಶ್ ಕುಮಾರ್, ಪ್ರತಿವಾದಿಗಳಾದ ರಾಮಪ್ಪ ಮತ್ತು ರವಿಕುಮಾರ್ ಪರವಾಗಿ ಎನ್.ವೆಂಕಟರಾಮ್, ಎಚ್.ಎನ್.ದಿವಾಕರ್, ಬಿ.ನಾಗರಾಜ, ಎಂ.ರಾಘವೇಂದ್ರ, ಕೆ.ಬಿ.ಮಹಾಬಲೇಶ್, ಶೇಷಗಿರಿ ಭಟ್ ಪರವಾಗಿ ಟಿ.ಎಸ್.ರಮಣ ಮಧ್ಯಸ್ಥಿಕೆಗಾರರಾಗಿ ವಕೀಲರಾದ ಮರಿದಾಸ್ ಭಾಗವಹಿಸಿದ್ದರು.
ಇದನ್ನೂ ಓದಿ: ಬ್ಯಾಟ್‌ನೊಂದಿಗೆ ವೆಡ್ಡಿಂಗ್ ಫೋಟೋ ಶೂಟ್: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ