ಕೊಲಂಬೊ: ವರ್ಷಾಂತ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡಗಳ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದೆ. ದಸುನ್ ಶನಕ ಬದಲಿಗೆ ಟಿ20ಗೆ ಆಲ್ ರೌಂಡರ್ ವನಿಂದು ಹಸರಂಗ ಮತ್ತು ಏಕದಿನಕ್ಕೆ ಬ್ಯಾಟರ್ ಕುಸಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.
ಎರಡೂ ತಂಡಗಳಿಗೆ ಚರಿತ ಅಸಲಂಕ ಉಪನಾಯಕ ರಾಗಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಪ್ರವಾಸಿ ಜಿಂಬಾಬ್ವೆ ಎದುರಿನ ಸರಣಿಗಾಗಿ ನಾಯಕರನ್ನು ಹೆಸರಿಸಲಾಯಿತು.
ಆಗಸ್ಟ್‌ನಲ್ಲಿ ನಡೆದ ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ವನಿಂದು ಹಸರಂಗ ಅವರು ಏಷ್ಯಾ ಕಪ್ ಮತ್ತು ಕ್ರಿಕೆಟ್ ವಿಶ್ವಕಪ್‌ನಿಂದ ಹೊರಗುಳಿದಿದ್ದರು, ಇದೀಗ ಅವರು ಬಹುನಿರೀಕ್ಷಿತ ಮರಳಲು ಸಿದ್ಧರಾಗಿದ್ದಾರೆ.
ಪ್ರಾಥಮಿಕ ಏಕದಿನ ತಂಡ: ಕುಸಾಲ್ ಮೆಂಡಿಸ್ (ನಾ), ಚರಿತ್ ಅಸಲಂಕ (ಉ.ನಾ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಸದೀರ ಸಮರವಿಕ್ರಮ, ಸಹನ್ ಆರಾಚ್ಚಿಗೆ, ನುವಾನಿಡು ಫೆರ್ನಾಂಡೋ, ದಸುನ್ ಶನಕ, ಕಮಿಂದು ಮೆಂಡಿಸ್, ಚಾಮಿಕ ಕರುಣಾರತ್ನೆ, ಜನಿತ್ ಲಿಯಾನಗೆ, ವನಿಂದು ಹಸರಂಗ, ಮಹೇಶ ತೀಕ್ಷಣ, ದಿಲ್ಶನ್ ಮಧುಶಂಕ, ದುಷ್ಮಂತ ಚಮೀರ, ದುನಿತ್ ವೆಲ್ಲಲಗೆ, ಪ್ರಮೋದ್ ಮದುಶನ್, ಅಸಿತ ಫೆರ್ನಾಂಡೋ, ಅಕಿಲ ದನಂಜಯ, ಜೆಫ್ರಿ ವಂಡರ್ಸೆ, ಚಾಮಿಕ ಗುಣಶೇಖರ.
ಪ್ರಾಥಮಿಕ ಟಿ20 ತಂಡ: ವನಿಂದು ಹಸರಂಗ (ನಾ), ಚರಿತ್ ಅಸಲಂಕ (ಉ.ನಾ), ಪಾತುಮ್ ನಿಸ್ಸಾನಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ದಸುನ್ ಶನಕ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವ, ಮಹೇಶ್ ತೀಕ್ಷಣ, ಕುಸಲ್ ಜನಿತ್ ಪೆರೇರಾ, ಭಾನುಕ ರಾಜಪಕ್ಸೆ, ಕಮಿಂದು ಮೆಂಡಿಸ್, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಜೆಫ್ರಿ ವಾಂಡರ್ಸೆ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ, ಬಿನೂರ ಫೆರ್ನಾಂಡೋ, ನುವಾನ್ ತುಷಾರ, ಪ್ರಮೋದ್ ಮದುಶನ್, ಮತೀಶ ಪತಿರಣ.