Advertisement

ಮೇ 31ಕ್ಕೆ ಯಾಂತ್ರಿಕ ಮೀನುಗಾರಿಕೆ ಅಂತ್ಯ

10:50 PM May 29, 2020 | Sriram |

ಮಲ್ಪೆ: ಸರಕಾರ ಯಾಂತ್ರಿಕ ಮೀನುಗಾರಿಕೆ ಅವಧಿಯನ್ನು 14ದಿನಗಳ ವರೆಗೆ ವಿಸ್ತರಿಸಿದರೂ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೇ 31ಕ್ಕೆ ಮೀನುಗಾರಿಕೆ ಅಂತ್ಯ ಗೊಳ್ಳಲಿದ್ದು, ಬೋಟಿನಿಂದ ಮೀನು ಇಳಿಸುವ, ಮಾರಾಟ ಮಾಡುವ ಚಟುವಟಿಕೆಗಳು ಜೂ. 6ರ ವರೆಗೆ ನಡೆಯಲಿವೆ ಎಂದು ಮಲ್ಪೆ ಮೀನು ಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ ತಿಳಿಸಿದ್ದಾರೆ.

Advertisement

ಗುರುವಾರ ಮಲ್ಪೆ ಮೀನುಗಾರ ಸಮು ದಾಯ ಭವನದಲ್ಲಿ ನಡೆದ ಮೀನುಗಾರ ಸಂಘದ ನೇತೃತ್ವದಲ್ಲಿ 22 ವಿವಿಧ ಸಂಘಟನೆಗಳ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.

ಈಗಾಗಲೇ 300ಕ್ಕೂ ಅಧಿಕ ದೋಣಿಗಳು ಸಮುದ್ರದಲ್ಲಿವೆ. ಅವೆಲ್ಲ ಅವಧಿಯೊಳಗೆ ಬಂದು ದಡ ಸೇರಲಿದ್ದು, ಏಕಕಾಲದಲ್ಲಿ ಮೀನು ಇಳಿಸುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಆದೇಶದಲ್ಲಿ ಮೀನು ಇಳಿಸಲು 40 ಬೋಟುಗಳಿಗೆ ಮಾತ್ರ ಅವಕಾಶ ಇರುವು ದರಿಂದ ದಡ ಸೇರಿದ ಬೋಟುಗಳಿಗೆ ಜೂ. 6ರವರೆಗೆ ಅವಕಾಶ ನೀಡಲಾಗಿದೆ. ಶನಿವಾರ ದಿಂದ ಯಾವುದೇ ದೋಣಿಗಳು ಮಂಜುಗಡ್ಡೆ ತುಂಬಿಸಿ ಮೀನುಗಾರಿಕೆಗೆ ತೆರಳುವಂತಿಲ್ಲ. ಈ ಬಗ್ಗೆ ಈಗಾಗಲೇ ಮಂಜುಗಡ್ಡೆ ಸ್ಥಾವರ ಗಳಿಗೆ, ಮಂಜುಗಡ್ಡೆ ಸಾಗಾಟದ ಟೆಂಪೋ ಚಾಲಕರು ಮತ್ತು ಮಂಜುಗಡ್ಡೆ ತುಂಬಿಸುವ ಕನ್ನಿ ಮೀನುಗಾರರ ಸಂಘಕ್ಕೂ ಸೂಚನೆ ನೀಡ ಲಾಗಿದೆ ಎಂದು ಕೃಷ್ಣ ಸುವರ್ಣ ತಿಳಿಸಿದ್ದಾರೆ.

ಹೆಚ್ಚುವರಿ ಅವಧಿ
ಪ್ರತಿ ವರ್ಷ ಮೇ 31ರಿಂದ ಯಾಂತ್ರಿಕ ಮೀನುಗಾರಿಕೆ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಈ ಬಾರಿ ಜೂ. 14ರ ವರೆಗೆ ವಿಸ್ತರಿಸಲಾಗಿತ್ತು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಮೀನುಗಾರಿಕೆಗೆ ನಿಷೇಧ ಹೇರಿದ್ದರಿಂದ ಪರಿಹಾರಕ್ಕಾಗಿ ಕೇಂದ್ರ ಮೀನುಗಾರಿಕೆ ಸಚಿವಾಲಯ ಹೆಚ್ಚುವರಿ ಅವಧಿಯನ್ನು ನೀಡಿದೆ.

ನಿಯಮ ಉಲ್ಲಂಘಿಸಿದರೆ ಕಠಿನ ಕ್ರಮ
ಜೂ. 6ರವರೆಗೆ ಮೀನು ಇಳಿಸಲು ಅವಕಾಶವಿದೆ ಎಂದು ಯಾವುದೇ ದೋಣಿಗಳು ಇನ್ನಿತರ ಬಂದರುಗಳಿಗೆ ತೆರಳಿ ಮಂಜುಗಡ್ಡೆ, ಡಿಸೇಲ್‌ ತುಂಬಿಸಿ ಮೀನುಗಾರಿಕೆ ನಡೆಸುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ಅಂತಹ ಬೋಟಿನ ಮೀನನ್ನು ಇಳಿಸಲು, ವ್ಯಾಪಾರಸ್ಥರು ಖರೀದಿಸಲು ಅವಕಾಶ ಇರುವುದಿಲ್ಲ. ಮುಂದೆ ಆ ಬೋಟಿನ ಡೀಸೆಲ್‌ ಪಾಸ್‌ಪುಸ್ತಕ ರದ್ದುಪಡಿಸುವ ಮೂಲಕ ಕಠಿನ ಕ್ರಮವನ್ನು ಜರಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Advertisement

ಮೀನುಗಾರರ ಒಮ್ಮತದ ಅಭಿಪ್ರಾಯದ ಪ್ರಕಾರ ನಿರ್ಧಾರ
ಸರಕಾರ ಮೀನುಗಾರಿಕೆ ಅವಧಿ ವಿಸ್ತರಣೆಯ ಆದೇಶ ಕೊಟ್ಟಿದ್ದರೂ ಸಂಘಕ್ಕೆ ಯಾವುದೇ ಲಿಖೀತ ಆದೇಶ ಬಂದಿಲ್ಲ. ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹೆಚ್ಚುತ್ತಿರುವುದರಿಂದ, ಮೀನುಗಾರರ ಹಿತ ಕಾಪಾಡುವ ದೃಷ್ಟಿಯಿಂದ ಸಮಸ್ತ ಮೀನುಗಾರ ಒಮ್ಮತದ ಅಭಿಪ್ರಾಯದ
ಮೇಲೆ ಮೇ 31ಕ್ಕೆ ಮೀನುಗಾರಿಕೆಯನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.
-ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

 

Advertisement

Udayavani is now on Telegram. Click here to join our channel and stay updated with the latest news.

Next