ಬೆಂಗಳೂರು: ಕೋವಿಡ್-19ರ ಹಾವಳಿ ನಡುವೆ ನಗರದಲ್ಲಿ ಶನಿವಾರ ಗಣೇಶ ಉತ್ಸವ ಸಂಭ್ರಮದಿಂದ ನಡೆಯಿತು. ಆದರೆ, ಅಬ್ಬರ ಮಾತ್ರ ಇರಲಿಲ್ಲ. ಮೆರವಣಿಗೆ ಇಲ್ಲ. ಹೆಚ್ಚು ಜನ ಸೇರುವಂತಿರಲಿಲ್ಲ. ಕೆರೆ, ಕಲ್ಯಾಣಿಗಳಲ್ಲಿ ವಿಸರ್ಜನೆ ನಿಷೇಧ. ನಾಲ್ಕು ಅಡಿಗಿಂತ ಎತ್ತರದ ಮೂರ್ತಿ ಪ್ರತಿಷ್ಠಾಪ ನೆಗೆ ಅವಕಾಶ ಇಲ್ಲ. ಈ ಎಲ್ಲ ಇಲ್ಲಗಳ ನಡುವೆ ಗಣೇಶ ಸದ್ದಿಲ್ಲದೆ ಬಂದು- ಹೋದಂತಾಯಿತು.
ಬೆಳಗ್ಗೆ ಮಕ್ಕಳು, ಮಹಿಳೆಯರು ಸೇರಿದಂತೆ ಸಡಗರದಿಂದ ಗಣೇಶನ ಮೂರ್ತಿ ಯನ್ನುಕಾರು, ಬೈಕ್, ಸ್ಕೂಟರ್‌ಗಳಲ್ಲಿ ಕರೆತರುವ ದೃಶ್ಯ ಸಾಮಾನ್ಯ ವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಪೂಜೆ-ಅಲಂಕಾರ ಗಳಿಂದ ಮನೆಗಳಲ್ಲಿ ಗಣೇಶ ಪ್ರತಿಷ್ಠಾಪಿತನಾಗಿದ್ದ. 8ರ ನಂತರ ವಿಸರ್ಜನೆ ಪ್ರಕ್ರಿಯೆ ನಡೆಯಿತು. ಇದರಿಂದ ಮನೆಯ ತಾರಸಿಗಳು, ಕಾರಿಡಾರ್‌ಗಳು ಗಣಪತಿ ವಿಸರ್ಜನಾ ತಾಣಗಳಾಗಿದ್ದವು.
ಸಾರ್ವಜನಿಕ ಗಣೇಶನ ಪ್ರತಿಷ್ಠಾಪಿಸುವವರ ಸಂಖ್ಯೆ ಮೊದಲ ದಿನ ತುಂಬಾ ಕಡಿಮೆ ಇತ್ತು. ರಸ್ತೆಗಳಲ್ಲಂತೂ ಅವಕಾಶವೇ ಇರಲಿಲ್ಲ. ಹಾಗಾಗಿ, ಖಾಲಿ ನಿವೇಶನಗಳಲ್ಲಿ ನಾಲ್ಕಾರು ಜನ ಸೇರಿ ಚಿಕ್ಕ ಪೆಂಡಾಲ್‌ಗಳನ್ನು ಹಾಕಿ, ವಿಘ್ನ ನಿವಾರಕನ ಕೂರಿ ಸಿದ್ದು ಕಂಡುಬಂತು. ಧ್ವನಿವರ್ಧಕಗಳಲ್ಲಿ ಎಂದಿನ ಭಕ್ತಿ ಗೀತೆಗಳು ಕೂಡ ಕೇಳಿಸಲಿಲ್ಲ. ದರ್ಶನಕ್ಕೆ ಬರು ವವರು ಮುಖಗವಸು ಹಾಕಿ ಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಸಂಜೆ ಹತ್ತಿರದ ಬಿಬಿಎಂಪಿ ವ್ಯವಸ್ಥೆ ಮಾಡಿದ್ದ ಮೊಬೈಲ್ ಟ್ಯಾಂಕರ್ ಗಳಲ್ಲಿ ವಿಸರ್ಜನೆ ಮಾಡಲಾಯಿತು. ಹಾಗಾಗಿ, ಹಿಂದಿನ ವರ್ಷಗಳಷ್ಟು ಅದ್ದೂರಿ ಕಾಣಿಸಲಿಲ್ಲ. ಪ್ರತಿ ವರ್ಷ ಪಾಲಿಕೆ 200ಕ್ಕೂ ಅಧಿಕ ಮೊಬೈಲ್ ಟ್ಯಾಂಕರ್‌ಗಳ ಜತೆಗೆ ಸ್ಯಾಂಕಿ, ಹಲಸೂರು ಸೇರಿದಂತೆ ಹತ್ತಾರು ಕೆರೆ, ಕಲ್ಯಾಣಿ ಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿತ್ತು. ಅಲ್ಲೆಲ್ಲಾ ಸರಿಸುಮಾರು ಒಂದೂವರೆ ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುತ್ತಿತ್ತು. ಆದರೆ, ಈ ಬಾರಿ ಕೆಲವೇ ಸಾವಿರ ಗಣೇಶನ ವಿಸರ್ಜನೆ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣೇಶ ವಿಸರ್ಜನೆ ಗೊಂದಲ : ನಗರದ ಕೆಲವೆಡೆ ಶನಿವಾರ ಗಣೇಶ ವಿಸರ್ಜನೆಗೆ ಭಕ್ತರು ಪರದಾಡಿದ ದೃಶ್ಯವೂ ಕಂಡುಬಂತು. ಬಿಬಿಎಂಪಿ ಅಲ್ಲಲ್ಲಿ ಮೊಬೈಲ್ ಕಲ್ಯಾಣಿಗಳ ವ್ಯವಸ್ಥೆ ಮಾಡಿದ್ದರೂ ಎಲ್ಲೆಡೆ ಈ ಸೌಲಭ್ಯ ಕಾಣಿಸಲಿಲ್ಲ. ಅಲ್ಲದೆ, ಎಲ್ಲೆಲ್ಲಿ ಮೊಬೈಲ್ ಟ್ಯಾಂಕರ್‌ಗಳಿವೆ ಎಂಬ ಮಾಹಿತಿ ಕೊರತೆಯೂ ಗೊಂದಲಕ್ಕೆ ಕಾರಣವಾಗಿತ್ತು. ಈ ಮಧ್ಯೆ ಭಾನುವಾರವೂ ಅಲ್ಲಲ್ಲಿ ಗಣೇಶನ ಪ್ರತಿಷ್ಠಾಪನೆ, ವಿಸರ್ಜನೆ ನಡೆಯಿತು. 11 ದಿನಗಳ ಕಾಲ ಗಣೇಶನ ಪ್ರತಿಷ್ಠಾಪನೆ ಭಕ್ತರ ಅನುಕೂಲಕ್ಕೆ ತಕ್ಕಂತೆ ನಡೆಯಲಿದೆ. ಗಣೇಶನ ವಿಸರ್ಜನೆಗೆ ಪಾಲಿಕೆಯಿಂದ ಅನುಮತಿ ಪಡೆಯುವುದು ಸರಿ ಕಾಣಲಿಲ್ಲ. ಆದ್ದರಿಂದ ನಾವು ಮಂದಿರದ ಹಿಂಭಾಗದಲ್ಲೇ ಡ್ರಮ್‌ನಲ್ಲಿ ಮೂರ್ತಿ ವಿಸರ್ಜನೆ ಮಾಡಿದೆವು ಎಂದು ಜಯನಗರ 8ನೇ ಬ್ಲಾಕ್‌ನ ವಿನಾಯಕ ಮಿತ್ರ ಮಂಡಳಿ ಪದಾಧಿಕಾರಿಯೊಬ್ಬರು ತಿಳಿಸಿದರು. ಅದೇ ರೀತಿ, ಜೆ.ಪಿ. ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಉತ್ಸವ ಆಚರಿಸಲಾಗುತ್ತಿತ್ತು.