ಉಪದೇಶ ನೀಡಿದ್ದು, ಪರಮ ಶಾಂತಿಗಾಗಿ ಗೀತೆಯ ಅಧ್ಯಯನ ಅವಶ್ಯಕವಾಗಿದೆ. ಬದುಕಿಗೆ ಶಾಶ್ವತ ಸುಖ ಸಿಗಬೇಕಾದರೆ ಪ್ರತಿಯೊಬ್ಬರು ಗೀತೆಯನ್ನು ಪಠಿಸಬೇಕು ಎಂದರು. ಸುದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾಯಬಣ್ಣ ಪುರೆಲ ಮಾತನಾಡಿ, ಯಾದವ ಸಮಾಜ ಪ್ರತಿಯೊಂದು ರಂಗದಲ್ಲಿ ಸಂಘಟಿತರಾಗಬೇಕು. ಶಿಕ್ಷಣ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದರು. ಯಾದವ ಸಮಾಜದ ತಾಲೂಕು ಅಧ್ಯಕ್ಷ ನಾರಾಯಣ ಯಾದವ, ಹಿರಿಯ ಮುಖಂಡ ಮಹಾದೇವಪ್ಪ ಸಾಲಿಮನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಸೋಮಶೇಖರ ಹಾಗರಗುಂಡಿಗಿ, ಸಣ್ಣನಿಂಗಣ್ಣ ನಾಯೋಡಿ, ನಾಗಪ್ಪ ತಹಶೀಲ್ದಾರ, ನಗರ
ಯೋಜನಾ ಅಧ್ಯಕ್ಷ ಸಲೀಂ ಸಂಗ್ರಾಮ, ರಾಜುಗೌಡ ಉಕ್ಕಿನಾಳ, ಶರಣಗೌಡ ಮುದ್ನಾಳ, ವಿಠಲ್, ಮಾಳಪ್ಪ ಯಾದವ ಸೇರಿದಂತೆ
ಯಾದವ ಸಮಾಜದ ಹಲವಾರು ಮುಖಂಡರು ಭಾಗವಹಿಸಿದ್ದರು. ಸೂರ್ಯಕಾಂತ ಕಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಯಾದವ ಸಮಾಜದ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುಂಚೆ ಸಿ.ಬಿ. ಕಮಾನದಿಂದ ನಗರಸಭೆ ವರೆಗೂ ಶ್ರೀಕೃಷ್ಣನ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮಕ್ಕಳು ಶ್ರೀಕೃಷ್ಣ ರಾಧೆ ವೇಷಧರಿಸಿ ಭಾಗವಹಿಸಿದ್ದರು.
Advertisement