Advertisement

ಸರ್ಕಾರಿ ಜಮೀನು ಒತ್ತುವರಿ ದೂರು: ಅಧಿಕಾರಿಗಳಿಂದ ಸರ್ವೆ 

04:57 PM Feb 03, 2021 | Team Udayavani |

ಚಿಂತಾಮಣಿ: ಚಿಲಕಲನೇರ್ಪು ಹೋಬಳಿ ಕೆಂಚಾರ್ಲಹಳ್ಳಿ ಗ್ರಾಪಂಗೆ ಸೇರಿದ ಕೋಡೆಗಂಡ್ಲು ಗ್ರಾಮದಲ್ಲಿ ಕೆಲವರು ಅಕ್ರಮವಾಗಿ ಜಮೀನು ಒತ್ತುವರಿ ಮಾಡಿದ್ದಾರೆಂದು ಬಂದ ದೂರಿನ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಹನುಮಂತ ರಾಯಪ್ಪ, ಸರ್ಕಾರಿ ಜಮೀನು ಯಾರೇ ಕಬಳಿಸಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಗ್ರಾಪಂಗೆ ನೂತನವಾಗಿ ಆಯ್ಕೆಯಾಗಿದ್ದ ಸದಸ್ಯರು ಅಕ್ರಮವೆಸಗಿದ್ದಾರೆಂದು ದೂರು ಬಂದಿದ್ದು, ಆದರೆ ವಾಸ್ತವಿಕವಾಗಿ ಎಲ್ಲಾರು ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿತಿಪ್ಪೆಗುಂಡಿಗಳನ್ನು ಮುಚ್ಚಿ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ ಎಂದರು.

 ಇದನ್ನೂ ಓದಿ :ರಾಮ ಮಂದಿರಕ್ಕೆ ದೇಣಿಗೆ ಮಹಾಪೂರ

ಸರ್ವೆ ನಂ 67ರಲ್ಲಿ 4.17 ಎ.ಗುಂಟೆ, ಆಖರಾಬು ಬಂಜರು, 69 ರಲ್ಲಿ 4.00ಎ ಸಶ್ಮಾನ, 27ರಲ್ಲಿ 2.17ಎ.ಗುಂಟೆಯಲ್ಲಿ ಹಾಗೂ 28ರಲ್ಲಿ 4.00 ಎ.ಇನಾಂತಿ ಜಮೀನು ಇದ್ದು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕಾನೂನು ಕ್ರಮ ಜರುಗಿಸಿ ಒತ್ತುವರಿ ತೆರವುಗೊಳಿಸಬೇಕೆಂದು ಗ್ರಾಮದ ಮುಖಂಡ ರಾಘವೇಂದ್ರ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಕಾಶ್‌, ಕೆ.ಎಂ. ಸುಬ್ಬನ್ನ, ಕೆ.ಆರ್‌.ವೆಂಕಟರವಣಪ್ಪ, ಕೆ.ಇ. ವೆಂಕಟರೆಡ್ಡಿ, ನಾರಾಯಣಸ್ವಾಮಿ, ಶ್ರೀನಿವಾಸ್‌, ಸುಬ್ಬರಾಯಪ್ಪ, ಪೆದ್ದನ್ನ, ರಾಜೇಶ್‌, ಪಿಳ್ಳಪ್ಪ, ಕೃಷ್ಣಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next