Advertisement

ರಂಗಾಯಣದಿಂದ ಪ್ರತಿಭೆಗಳಿಗೆ ಪ್ರೋತ್ಸಾಹ

06:09 PM Nov 09, 2021 | Team Udayavani |

ಧಾರವಾಡ: ಪ್ರತಿಯೊಬ್ಬ ಮನುಷ್ಯನಲ್ಲೂ ಯಾವುದಾದ ರೊಂದು ಪ್ರತಿಭೆ ಅಡಗಿರುತ್ತದೆ. ಬದುಕನ್ನು ರೂಪಿಸುವಂತಹ ಕಲೆ, ಸಾಹಿತ್ಯ, ನೃತ್ಯ ಸೇರಿದಂತೆ ಹಲವಾರು ಬಗೆಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ರಂಗಾಯಣ ಮಾಡುತ್ತಿದೆ ಎಂದು ತೋಂಟದಾರ್ಯ ಮಠದ ಡಾ|ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಂಗಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಾರಾಂತ್ಯ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ರಂಗಾಯಣ ಪ್ರತಿ ವಾರ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ರಂಗಾಸಕ್ತರಿಗೆ ನಮ್ಮ ಕಲೆ, ಪರಂಪರೆ, ಸಂಸ್ಕೃತಿಯ ರಸದೌತಣ ನೀಡುತ್ತಿದೆ. ಮನುಷ್ಯನು ತನ್ನ ಅಂತರಂಗದಲ್ಲಿರುವ ಸಂಸ್ಕೃತಿಯ ಸೌಂದರ್ಯ ಬೆಳೆಸಿಕೊಳ್ಳಬೇಕು ಎಂದರು.

ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ನ್ಯಾಯವಾದಿ ಬಸವಪ್ರಭು ಲಖಮಗೌಡ ಪಾಟೀಲ ಮಾತನಾಡಿ, ಪ್ರಚಲಿತ ವಿದ್ಯಮಾನಗಳ ಕುರಿತು ನಾಟಕಗಳನ್ನು ರಚಿಸಿ, ಪ್ರಸ್ತುತಪಡಿಸುವ ಮೂಲಕ ಜನರ ಮೇಲೆ ಪ್ರಭಾವ ಬೀರಲಾಗುತ್ತದೆ. ನಾಟಕಗಳು ಜನರಿಗೆ ಮನರಂಜನೆ ಮಾತ್ರವಲ್ಲ ಇತಿಹಾಸ, ಪರಂಪರೆ, ಸಂಸ್ಕೃತಿ ಕುರಿತಾದ ಜ್ಞಾನ-ತಿಳಿವಳಿಕೆ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ರಂಗಾಯಣವು ಪ್ರತಿ ವಾರವೂ ನಾಟಕಗಳನ್ನು ಏರ್ಪಡಿಸುವ ಮೂಲಕ ರಂಗಾಸಕ್ತರಿಗೆ ಮನರಂಜನೆ ಜತೆಗೆ ತಿಳಿವಳಿಕೆ ನೀಡುತ್ತಿದೆ. ಇದಲ್ಲದೆ ಪ್ರವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಠಾಧೀಶರು ಮಾಡುತ್ತಿದ್ದಾರೆ. ರಂಗಾಯಣ ಸಹ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳನ್ನು ಪ್ರದರ್ಶನ ಮಾಡುತ್ತಿವೆ ಎಂದರು.

ಅಥಣಿ ಮೋಟಗಿಮಠದ ಶ್ರೀಪ್ರಭುಚನ್ನಬಸವ ಸ್ವಾಮೀಜಿ, ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಹಾಗೂ ಪಂ|ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಹಿರಿಯ ಸಾಹಿತಿ ಡಾ|ಬಾಳಣ್ಣ ಶೀಗೀಹಳ್ಳಿ ಸೇರಿದಂತೆ ಹಲವರು ಇದ್ದರು. ಡಾ|ಗಿರೀಶ ಕಾರ್ನಾಡ ಅವರು ರಚಿಸಿ, ಮಹಾದೇವ ಹಡಪದ ನಿರ್ದೇಶಿಸಿದ ತಲೆದಂಡ ನಾಟಕವನ್ನು ಸಮುದಾಯ ಧಾರವಾಡ ಘಟಕ ಕಲಾವಿದರು ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next