ಉಳ್ಳಾಲ : ಅಬ್ಬಕ್ಕ ಉತ್ಸವದೊಂದಿಗೆ ಸಾಂಸ್ಕೃತಿಕ ಸ್ಪರ್ಧೆಗಳು ಹೊಸ ಪ್ರತಿಭಾನ್ವಿತರಿಗೆ ಒಂದು ವೇದಿಕೆಯಾಗಿದ್ದು, ಉತ್ಸವದ ಮೂಲಕ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಭಿನಂದನೀಯ ಎಂದು ನೃತ್ಯ ವಿದುಷಿ ಆರತಿ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಕೊಲ್ಯ ನಾಗಮಂಡಲದ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವದ- 2018ರ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬಕ್ಕ ಉತ್ಸವ ಸಮಿತಿಯ ಉಸ್ತುವಾರಿ ಸಮಿತಿಯ ಪ್ರಮುಖರಾದ ದಿನಕರ ಉಳ್ಳಾಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿಎಂಎಸ್ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು, ಸದಸ್ಯ ಬಾಝಿಲ್ ಡಿ’ಸೋಜಾ, ಮುಖಂಡರಾದ ಸೀತಾರಾಮ ಬಂಗೇರ, ಆನಂದ ಅಸೈಗೋಳಿ, ತಾರನಾಥ್, ದೇವಕಿ ಉಳ್ಳಾಲ್, ತೋನ್ಸೆ ಪುಷ್ಕಳ್ ಕುಮಾರ್, ರಾಘವ ಮಾಸ್ಟರ್, ಲಕ್ಷ್ಮೀ ನಾರಾಯಣ್, ವಾಸುದೇವ ರಾವ್, ರತ್ವಾತಿ ಬೈಕಾಡಿ ವಾಣಿ ಲೋಕಯ್ಯ, ಸತೀಶ್ ಭಂಡಾರಿ, ಮಲ್ಲಿಕಾ ಭಂಡಾರಿ, ಅನುಪಮಾ, ಸರೋಜಾದೇವಿ, ಅಬ್ದುಲ್ ಅಜೀಝ್ ಹಕ್, ಲೀಲಾವತಿ ಶಶಿಕಲಾ ಗಟ್ಟಿ, ಸುರೇಖಾ ಯಳವಾರ, ಹೇಮ ಕಾಪಿಕಾಡ್, ನಿರ್ಮಲ್ ಭಟ್ ಉಪಸ್ಥಿತರಿದ್ದರು.
ಕ್ರೀಡಾ ಸಂಚಾಲಕ ತಾರನಾಥ ರೈ ಸ್ವಾಗತಿಸಿದರು. ಸಾಂಸ್ಕೃತಿಕ ಸಂಚಾಲಕ ತೋನ್ಸೆ ಪುಷ್ಕಳ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಸ್ಪಾರ್ಧಾ ಸಂಚಾಲಕ ಪಿ.ಡಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.