Advertisement

“ದೇವರ ಸರ್ಕಾರ’ಇ-ಬುಕ್‌ ಓದಲು ಪ್ರಚೋದನೆ

03:20 PM Jul 29, 2022 | Team Udayavani |

ಬೆಂಗಳೂರು: ಅಲ್‌ ಖೈದಾ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ತೀವ್ರಗಾಮಿ ಉಗ್ರ ಅಖ್ತರ್‌ ಹುಸೇನ್‌ ಲಷ್ಕರ್‌ ಅಲ್‌ ಖೈದಾ ಉಗ್ರ ಸಂಘಟನೆ ರಚಿಸಿದ “ದೇವರ ಸರ್ಕಾರ’ ಎಂಬ ಇ-ಬುಕ್‌ ಓದುತ್ತಿದ್ದ. ಅಲ್ಲದೆ, ಪಶ್ಚಿಮ ಬಂಗಾಳ ಮೂಲದ ಮತ್ತೊಬ್ಬ ಶಂಕಿತ ಉಗ್ರ ಈತನಿಗೆ ಅಲ್‌ ಖೈದಾ ಸಂಘಟನೆ ಸೇರ್ಪಡೆಗೆ ಪ್ರಚೋದನೆ ನೀಡಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

Advertisement

ಸಿಎಆರ್‌ ಮತ್ತು ಎನ್‌ ಆರ್‌ಸಿ ವಿರೋಧಿಸಿ ಅಖ್ತರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಮುದಾ ಯದ ನಾಯಕರು ಹಾಗೂ ರಾಜಕೀಯ ನಾಯಕರ ಭಾಷಣದ ವಿಡಿಯೋ ತುಣುಕು ಸೇರಿ ಬೆಂಗಾಳಿ ಭಾಷೆಯಲ್ಲಿ ಹಾಕುತ್ತಿದ್ದ ಪೋಸ್ಟ್‌ ಗಳನ್ನು ಗಮನಿಸಿ ಪಶ್ಚಿಮ ಬಂಗಾಳ ಮೂಲದ
ಅಲ್‌ ಖೈದಾ ಸಂಘಟನೆ ಸದಸ್ಯನೊಬ್ಬ ಈತನನ್ನು ಫೇಸ್‌ ಬುಕ್‌ ಮೂಲಕ ಪರಿಚಯಿಸಿ ಕೊಂಡು ಅಲ್‌ ಖೈದಾ ಸಂಘಟನೆ ಬಗ್ಗೆ ಪ್ರಚೋದನೆ ನೀಡಿದ್ದ. ಅಲ್ಲದೆ, ದುಬೈ, ಆಫ್ಘಾನಿಸ್ತಾನ ದಲ್ಲಿರುವ ಸಂಘಟನೆ ಸದಸ್ಯರ ಜತೆ ಕಾನ್ಫರೆನ್ಸ್‌ ಕಾಲ್‌ ಹಾಕಿ ಮಾತನಾಡಿಸಿದ್ದ. ಅದರಿಂದ ಪ್ರಭಾವಿತನಾಗಿ ಸಂಘಟನೆ ಸೇರಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.

ಈ ಬುಕ್‌ ಓದುತ್ತಿದ್ದ ಅಖ್ತರ್‌: ಪ.ಬಂಗಾಳ ಮೂಲದ ಶಂಕಿತನ ಸೂಚನೆ ಮೇರೆಗೆ ಅಲ್‌ ಖೈದಾ ಸಂಘಟನೆ ರಚಿಸಿರುವ “ದೇವರ ಸರ್ಕಾರ’ ಎಂಬ ಇ-ಬುಕ್‌  ಓದು ವಂತೆ ಸಲಹೆ ನೀಡಿದ್ದ. ಅಲ್ಲದೆ, ಈ ಬುಕ್‌ ನಲ್ಲಿ ಸಿರಿಯಾ ಕಾನೂನುಗಳಿದ್ದು, ಅದನ್ನು ಪಾಲಿಸಿದರೆ ಧರ್ಮ ಉಳಿ ಸಬ ಹುದುಜತೆಗೆ ದೇವರ ಸರ್ಕಾರ ಬಂದರೆ, ನಾವುಗಳು ಏನೆಲ್ಲ ಅನುಕೂಲ ಪಡೆದುಕೊಳ್ಳಬಹುದು.

ಭಾರತವನ್ನು ಹೇಗೆ ತಮ್ಮ ಕೈವಶ ಮಾಡಿಕೊಳ್ಳಬಹುದು ಎಂದೆಲ್ಲ ಇದೆ ಎಂದು ಪ್ರಚೋ ದಿ ಸಿದ್ದ. ಹೀಗಾಗಿ ಅಖ್ತರ್‌, ಇ-ಬುಕ್‌ನ ಚಂದಾದಾರನಾಗಿದ್ದ ಎಂದು ಮೂಲಗಳು ತಿಳಿಸಿವೆ.

ಎಚ್ಚರಿಕೆ ನೀಡಿದ್ದ ಫೇಸ್‌ಬುಕ್‌: ಪ್ರಚೋದನಾಕಾರಿ ಭಾಷಣದಪೋಸ್ಟ್‌ ಗಳನ್ನು ಗಮನಿಸಿದ್ದ ಫೇಸ್‌ ಬುಕ್‌ ಅಖ್ತರ್‌ಗೆ ಎಚ್ಚರಿಕೆ ನೀಡಿ , ಖಾತೆ ನಿಷ್ಕ್ರಿಯಗೊಳಿಸಿತ್ತು. ಆದರೆ, ಆರೋಪಿ ಮತ್ತೊದು ನಕಲಿ ಖಾತೆ ತೆರೆದು ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿದ್ದ. ಇದೇ ವೇಳೆ ಪಶ್ಚಿಮ ಬಂಗಾಳ ಮೂಲದ ಶಂಕಿತನೇ ತಮಿಳುನಾಡಿನ ಜುಬಾನಾನನ್ನು ಅಖ್ತರ್‌ಗೆ ಪರಿಚಯಿ ಸಿಕೊಟ್ಟಿದ್ದ. ಅಲ್ಲದೆ, ಕಾಶ್ಮೀರ-ಪಾಕಿಸ್ತಾನ ಬಳಿಕ ಆಫ್ಘಾನಿಸ್ತಾನಕ್ಕೆ ಕಳುಹಿಸುತ್ತೇನೆ ಎಂದು ಪ್ರಚೋದಿಸಿದ್ದ ಎಂದು ಮೂಲಗಳು ತಿಳಿಸಿವೆ.

Advertisement

ಹಣ, ಗನ್‌, ಕೊಡುತ್ತೇವೆ ಬನ್ನಿ!: ಅಖ್ತರ್‌ ಮತ್ತು ಜುಬಾನಾ ಪರಿಚಯವಾದ ಬಳಿಕ ಆಫ್ಘಾನಿಸ್ತಾನಕ್ಕೆ ಹೋಗಲು ಸಿದ್ಧವಾಗಿದ್ದರು. ಆದರೆ, ಲಕ್ಷಾಂತರ ರೂ. ಇಲ್ಲ ಎಂದು ಇಬ್ಬರು, ಹ್ಯಾಂಡ್ಲರ್‌ (ಪಶ್ಚಿಮ ಬಂಗಾಳದ ಶಂಕಿತ) ಬಳಿ ಹೇಳಿಕೊಂಡಿದ್ದರು. ಆಗ ಹ್ಯಾಂಡ್ಲರ್‌, ಕಾಶ್ಮೀರದವರೆಗೆ ರೈಲು ಮಾರ್ಗದ ಮೂಲಕ ಬನ್ನಿ. ಅಲ್ಲಿರುವ ಸಂಘಟನೆಯವರು ಹಣ ಕೊಟ್ಟು ಪಾಕಿಸ್ತಾನಕ್ಕೆ ಕರೆದೊಯ್ಯುತ್ತಾರೆ. ಬಳಿಕ ಸೂಕ್ತ ತರಬೇತಿ ನೀಡುತ್ತೇವೆ. ನಂತರ ಆಫ್ಘಾನಿಸ್ತಾನದಲ್ಲಿಯೂ ಕಠಿಣ ತರಬೇತಿ ಪಡೆದ ಬಳಿಕ ಬಂದೂಕು ಕೊಡುತ್ತೇವೆ. ಆ ಬಳಿಕ ‘ನೀವೇ ಬಾಸ್‌’ ಎಂದು ಆಮಿಷವೊಡ್ಡಿದ್ದ. ಅಲ್ಲದೆ, ಸಂಘಟನೆ ಐದಾರು ವರ್ಷಗಳಿಂದ ಭಾರತದಿಂದ ಯಾರನ್ನು ನೇಮಿಸಿಕೊಂಡಿಲ್ಲ. ನಿಮ್ಮ ಕಾರ್ಯವೈಖರಿ ಕಂಡು ನೇರವಾಗಿ ಸಂಘಟನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಂಘಟನೆ ಸೇರುವುದರಿಂದ ಅಲ್‌ ಖೈದಾ ಸಂಘಟನೆ ಮುಖ್ಯಸ್ಥ ಬಿನ್‌ ಲಾಡೆನ್‌ ರೀತಿ ಬದುಕಬಹುದು. ಆರ್ಥಿಕ ಸಮಸ್ಯೆ, ಬಲಹೀನ ಸ್ಥಿತಿ ಇರಲ್ಲ. ಭಾರತದ ಯಾವುದಾದರೂ ಒಂದು ಭಾಗದ ಕಮಾಂಡರ್‌ ಗಳು ಆಗುತ್ತಿರಾ ಎಂದು ಪ್ರಚೋದನೆ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಅಖ್ತರ್‌ ತಂದೆ ಗ್ರಾಪಂ ಅಧ್ಯಕ್ಷ
ನಗರಲ್ಲಿ ಫುಡ್ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಅಖ್ತರ್‌ನ ತಂದೆ ಅಸ್ಸಾಂನ ಗ್ರಾಮ ವೊಂದರ ಪಂಚಾಯಿತಿ ಅಧ್ಯಕ್ಷ ಎಂದು ಹೇಳಲಾಗಿದೆ. ಈ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಅಸ್ಸಾಂಗೆ ಒಂದು ತಂಡ ಹಾಗೂ ಪಶ್ಚಿಮ ಬಂಗಾಳದಲ್ಲಿರುವ ಶಂಕಿತನ ಬಂಧನಕ್ಕೆ ಮತ್ತೊಂದು ತಂಡ ತೆರಳಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next