Advertisement

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ

05:14 AM Jun 07, 2020 | Lakshmi GovindaRaj |

ತಿ.ನರಸೀಪುರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ, ಎರಡು ಜಿಲ್ಲೆಯ ಹಾಲು ಒಕ್ಕೂಟದ ಸಹಕಾರದೊಂದಿಗೆ ಜಿಲ್ಲೆಯ ಆಶಾ ಕಾರ್ಯ ಕರ್ತೆಯರಿಗೆ 75 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು  ಡಿಸಿಸಿ  ಬ್ಯಾಂಕ್‌ ಅಧ್ಯಕ್ಷ ಹರೀಶ್‌ಗೌಡ ತಿಳಿಸಿದರು.

Advertisement

ಪಟ್ಟಣದಲ್ಲಿ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಗಳಿಂದ ಆಶಾ ಕಾರ್ಯಕರ್ತ ರಿಗೆ ಪ್ರೋತ್ಸಾಹ ಧನ ವಿತರಣೆ, ರೈತರಿಗೆ ಹಾಗೂ ಸ್ವಸಹಾಯ ಸಂಘಗಳ ಸಾಲ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ತಾಲೂಕಿನಲ್ಲಿ 87 ಕೋಟಿ ವಿತರಿಸಲಾಗಿದೆ. ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಇನ್ನೂ 5 ಕೋಟಿ ಹಣ ಬರಬೇಕಿದ್ದು, ಸಚಿವರಿಗೆ ಮನವಿ ಮಾಡಲಾಗಿದೆ ಎಂದು  ಹೇಳಿದರು.

ಸಹಕಾರ ಸಚಿವರು ಆಶಾ ಕಾರ್ಯಕರ್ತೆಯ ರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದಾರೆ. ಸಿಎಂ ಪರಿಹಾರ ನಿಧಿಗೆ ಬಂದ ಅನುದಾನದಲ್ಲಿ ಶೇ.50 ರಷ್ಟು ಅನುದಾ,  ಪ್ರಾಣಿ  ಪಕ್ಷಿಗಳ ಹಿತರಕ್ಷಣೆಗೂ ಬದರಾಗಿ 2.85 ಕೋಟಿ ದೇಣಿಗೆ ಕೊಡಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸೋಮ ಶೇಖರ್‌, ಶಾಸಕ ಅಶ್ವಿ‌ನ್‌  ಕುಮಾರ್‌ ಆಶಾ ಕಾರ್ಯ ಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್‌  ವಿತರಿಸಿದರು. ಕಾರ್ಯ ಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಎಸ್‌ಪಿ ರಿಷ್ಯಂತ್‌, ಜಿಪಂ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ, ಎಂಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸದಾನಂದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next