Advertisement

ಗ್ರಾಮೀಣ ನಾಟಕಗಳ ಜೀವಂತಿಕೆ ಪ್ರೋತ್ಸಾಹಿಸಿ

04:11 PM Feb 02, 2018 | Team Udayavani |

ಮಾಗಡಿ: ಸಿನಿಮಾ, ಧಾರವಾಹಿಗಳ ಭರಾಟೆ ನಡುವೆಯೂ ಗ್ರಾಮೀಣ ನಾಟಕಗಳ ಜೀವಂತಿಕೆಗೆ ಕಲಾವಿದರ ಪ್ರೋತ್ಸಾಹ ಅಗತ್ಯವಿದೆ ತಾಪಂ ಮಾಜಿ ಅಧ್ಯಕ್ಷ ಬಿ.ಟಿ.ವೆಂಕಟೇಶ್‌ ತಿಳಿಸಿದರು.

Advertisement

ತಾಲೂಕಿನ ಬೆಳಗವಾಡಿಂ‌ುಲ್ಲಿ ಶ್ರೀರಂಗ ಜಾನಪದ ಕಲಾ ಸಂಘವು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜನಪದ ಉತ್ಸವ ಮತ್ತು ನಾಟಕೋತ್ಸವದಲ್ಲಿ ಮಾತನಾಡಿ, ಗ್ರಾಮೀಣ ಕಲಾವಿದರಿಂದ ಜಾನಪದ ಕಲೆ, ಸಾಹಿತ್ಯ, ನಾಟಕಗಳು ಇನ್ನೂ ಜೀವಂತವಾಗಿ ಉಳಿದಿದೆ. ಆದರೆ ಸಿನಿಮಾ, ಧಾರವಾಹಿ ಭರಾಟೆಯಲ್ಲಿ ಗ್ರಾಮೀಣ ಕಲೆ ನಶಿಸುತ್ತಿರುವುದು ಆತಂಕದ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಮೌಲ್ಯಗಳು, ನಾಡಿನ ಸಂಸ್ಕೃತಿಯ ಪ್ರತಿಬಿಂಬ ರಂಗಕಲೆಯಾಗಿದೆ. ಸರ್ಕಾರ ಕಲಾವಿದರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಕಾಲಕಾಲಕ್ಕೆ ಒದಗಿಸಬೇಕು. ಪ್ರತಿ ತಾಲೂಕಿನಲ್ಲೊಂದು ಕಲಾ ಮಂದಿರ ಕಟ್ಟಿಸುವ ಮೂಲಕ ರಂಗಕಲೆಯನ್ನು ಪ್ರೋತ್ಸಾಹಿಸಬೇಕಿದೆ. ಈ ಮೂಲಕ ನಾಡಿನ ಕಲಾ ಸಂಪತ್ತನ್ನು ಉಳಿಸಿಬೆಳಸಬೇಕು ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಟಿ. ಗಂಗಣ್ಣ ಕಲಾವಿದರನ್ನು ಕುರಿತು ಮಾತನಾಡಿದರು. ಮಾಗಡಿ ಕೆಂಪೇಗೌಡ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ಬಿ.ಆರ್‌.ಕೃಷ್ಣಪ್ಪ ಮಾತನಾಡಿ, ಪ್ರತಿವರ್ಷ ನೂರಾರು ಕಲಾಶಕ್ತರನ್ನು ಸಂಘದಡಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ.

ತಾಲೂಕಿನಲ್ಲಿ ನೂರಾರು ಹಿರಿಯ ಕಲಾವಿದರಿದ್ದು, ಅವರು ಮಾಸಾಶನದಿಂದ ವಂಚಿತರಾಗಿದ್ದಾರೆ. ಇದರಿಂದ ತುಂಬ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಹಿರಿಯ ಕಲಾವಿದರನ್ನು ಗುರುತಿಸಿ ಅಗತ್ಯ ಮಾಸಾಸನ ನೀಡುವ ಮೂಲಕ ಕಲಾವಿದರಿಗೆ ನೆರವಿಗೆ ಬರಬೇಕು ಎಂದರು.

Advertisement

ಇದೇ ವೇಳೆ ಏರ್ಪಡಿಸಿದ್ದ ಪಾರ್ವತಿ ಕಲ್ಯಾಣ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಲಾಶಕ್ತರನ್ನು ರಂಜಿಸಿದರು. ತಿಮ್ಮಯ್ಯ ತಂಡದಿಂದ ಶ್ರೀನಿವಾಸ್‌ ತಂಡದಿಂದ ಪೂಜೆ ಕುಣಿತ, ಸೋಮನ ಕುಣಿತ, ಬ್ಯಾಲಕೆರೆ ಪುಟ್ಟಸ್ವಾಮಿ ತಂಡವರಿಂದ ತಮಟೆ, ಅರೆ ವಾದ್ಯ, ಲಕ್ಷ್ಮಮ್ಮ ಅವರಿಂದ ಸೋಬಾನೆ ಪದ, ಶ್ರೀನಿವಾಸ್‌ ರಾಮಣ್ಣ ಅವರಿಂದ ಪೂಜಾ ಕುಣಿತ, ಹೊಸಪೇಟೆ ಗಿರಿಜಮ್ಮ ತಂಡದವರಿಂದ ತತ್ವಪದ,

ಜಯಮ್ಮ ತಂಡ ಮತ್ತು ನರಸಿಂಹಯ್ಯ ತಂಡದಿಂದ ರಾಗಿಬೀಸುವ ಪದ, ದಿನೇಶ್‌, ತತ್ವಪದ ಗಂಗಮ್ಮ, ಜಯಲಕ್ಷ್ಮೀ ತಂಡ ಕೋಲಾಟ, ಗೋವಿಂದಯ್ಯ ಶನೇಶ್ವರಸ್ವಾಮಿ ಭಕ್ತಿಗೀತ, ರಂಗಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಗ್ರಾಮದೇವತೆ ಉತ್ಸವ ನಡೆಸಿದರು. ಕ್ಯಾಶಿಯೋ ವೆಂಕಟೇಶ್‌, ತಬಲ ರಾಜು, ಹಾರೊನಿಯಂ ಮುನಿಯಪ್ಪ, ಕೆಂಪಣ್ಣ ದಾಸ, ಸಿದ್ದಾಪ್ಪಾಜಿ. ನಾಗಣ್ಣ, ಕಾಳಪ್ಪ, ಚೆನ್ನಮ್ಮಪಾಳ್ಯದ ಗಂಗರಂಗಯ್ಯ, ಪುರಿ ಮಂಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next