Advertisement

ವಿಶೇಷ ಮಕ್ಕಳನ್ನು ಕಡೆಗಣಿಸದೆ ಪ್ರೋತ್ಸಾಹಿಸಿ

12:57 PM Nov 14, 2017 | Team Udayavani |

ಮೈಸೂರು: ವಿಶೇಷ ಮಕ್ಕಳು ಜನಿಸಿದ ಸಂದರ್ಭ ಪೋಷಕರು ಕಡೆಗಣಿಸದೆ, ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ತಿಳಿಸಿದರು. ಅಖೀಲ ಭಾರತ ವಾಕ್‌ ಶ್ರವಣ ಸಂಸ್ಥೆಯ ಎಲೆಕ್ಟ್ರಾನಿಕ್ಸ್‌ ವಿಭಾಗದಿಂದ ಆಯಿಷ್‌ನಲ್ಲಿ ಆಯೋಜಿಸಿರುವ ಶ್ರವಣಯಂತ್ರ ದುರಸ್ತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

Advertisement

ವಿಶೇಷ ಮಕ್ಕಳು ಜನಿಸಿದ ಕಾರಣಕ್ಕೆ ಪೋಷಕರು ಆ ಮಕ್ಕಳನ್ನು ಕಡೆಗಣಿಸಬಾರದು. ಬದಲಿಗೆ ತಾವು ಜನ್ಮನೀಡಿದ ಮಕ್ಕಳ ಬಗ್ಗೆ ಹೆಮ್ಮೆಪಡಬೇಕು. ವಿಶೇಷ ಮಕ್ಕಳೂ ಪ್ರತಿಭಾವಂತರಾಗಿರಲಿದ್ದು, ಈ ನಿಟ್ಟಿನಲ್ಲಿ ಪೋಷಕರು ಹಾಗೂ ಗುರುಗಳು ವಿಶೇಷ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಸಮಾಜದಲ್ಲಿ ಯಾರು, ಯಾರ ಮೇಲೂ ಅವಲಂಬಿತರಾಗಿಲ್ಲ. ಕಷ್ಟಗಳು ಎಲ್ಲರಿಗೂ ಇದೆ. ಸ್ವರ್ಗ ನರಕವನ್ನು ಯಾರೂ ಕಂಡಿಲ್ಲ. ಕಷ್ಟಬಂದಾಗ ಅದೇ ನರಕ, ಸಂತಸವಿದ್ದಾಗ ಅದೇ ಸ್ವರ್ಗ ಎಂದು ತಿಳಿಯಬೇಕು ಎಂದರು. ಸಂಗೀತ ವಿವಿ ಕುಲಸಚಿವ ಡಾ.ನಿರಂಜನ ವಾನಳ್ಳಿ, ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳಲು ತಾಳ್ಮೆ, ಕರುಣೆಯುಳ್ಳ ತಾಯಿಯ ಗುಣ ಹೊಂದಿರಬೇಕು.

ಈ ನಿಟ್ಟಿನಲ್ಲಿ ಅಖೀಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಹಾಗೂ ಸೌಲಭ್ಯ ನೀಡುವಲ್ಲಿ ಅನೇಕ ಕಾರ್ಯಕ್ರಮಗಳು ನಡೆಸುತ್ತಿದೆ. ಮಾಧ್ಯಮಗಳು ಈ ರೀತಿಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಆಯಿಷ್‌ ನಿರ್ದೇಶಕಿ ಡಾ.ಎಸ್‌.ಆರ್‌.ಸಾವಿತ್ರಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next