Advertisement

ಸೇವಾ ಮನೋಭಾವಕ್ಕೆ ಪ್ರೋತ್ಸಾಹವಿರಲಿ: ಕರಬಸಯ್ಯ

02:23 PM Oct 15, 2018 | Team Udayavani |

ಸೈದಾಪುರ: ಉತ್ತಮ ಸೇವಾ ಮನೋಭಾವನೆಗೆ ಪ್ರೋತ್ಸಾಹ ಅತೀ ಮುಖ್ಯವಾಗಿದೆ. ಇದರಿಂದ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದು ವಿದ್ಯಾವರ್ಧಕ ಡಿಎಲ್‌ಎಡ್‌ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಭಿಪ್ರಾಯಪಟ್ಟರು.

Advertisement

ಕಲಬುರಗಿ ಜಿಲ್ಲೆಯ ಆಳಂದ ತಾಲೂಕು ತಡಕಲ್‌ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಿಯಾಜ್‌ ಖುರೇಷಿ ಬಳಿಚಕ್ರ ಅವರನ್ನು ಗುರುಗಳ ಹಾಗೂ ಗೆಳೆಯರ ಬಳಗದಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸೈದಾಪುರದಲ್ಲಿ ವೃತ್ತಿ ತರಬೇತಿ ಮುಗಿಸಿ ಪ್ರಾಥಮಿಕ
ಹಾಗೂ ಬಳಿಚಕ್ರದಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿ ಕಲಬುರಗಿ ಜಿಲ್ಲೆ ಆಳಂದ ತಾಲೂಕು ತಡಕಲ್‌ ಗ್ರಾಪಂನಲ್ಲಿ ಉತ್ತಮ ಸೇವೆ ಸಲ್ಲಿಸಿ ಕರ್ನಾಟಕ ರಾಜ್ಯ ಸರಕಾರದಿಂದ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ್ದಾರೆ. ಗೆಳಯರ ಬಳಗದ ವತಿಯಿಂದ ಅವರನ್ನು ಸನ್ಮಾನಿಸುತ್ತಿರುವುದು ಇಲ್ಲಿನ ಸಂಸ್ಕೃತಿ ಗುರುತಿಸುತ್ತದೆ. ಇದೊಂದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಪಿಡಿಒ ರಿಯಾಜ್‌ ಖುರೇಷಿ ಮಾತನಾಡಿ, ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಿದಂತಾಗಿದೆ. ನನ್ನ ಸೇವೆ ಇಲ್ಲಿ ಅಲ್ಲದಿದ್ದರೂ ನಾನು ಮಾಡಿದ ಕೆಲಸಕ್ಕೆ ನನ್ನೊಡನೆ ಓದಿ ಬರೆದ ಸ್ನೇಹಿತರು ಗೌರವಿಸುತ್ತಿರುವುದು ನನಗೆ ಸಂತೋಷ ಉಂಟು ಮಾಡಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸರಕಾರದ
ಯೋಜನೆಗಳನ್ನು ಜನರಿಗೆ ತಲುಪುವಂತೆ ಮಾಡಿ ನಾಡಿನ ಅಭಿವೃದ್ಧಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ನನ್ನ ಅಳಿಲು ಸಾಧನೆ ಗುರುತಿಸಿ ಸನ್ಮಾನ ಮಾಡಿದ ಗುರುಗಳಿಗೂ ಹಾಗೂ ಆತ್ಮೀಯ ಬಳಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಬಸವಲಿಂಗಪ್ಪ ವಡಿಗೇರಿಕರ, ಭೀಮಣ್ಣ ವಡವಟ್‌, ಕಲ್ಲಪ್ಪ ಕುಂಬಾರ, ಮರೆಪ್ಪ ಕಟ್ಟಿಮನಿ ರಾಂಪುರ, ಮಲ್ಲಿಕಾರ್ಜುನ ಅರಿಕೇರಿಕರ್‌, ಕಾಶಿನಾಥ ಶೆಟ್ಟಹಳ್ಳಿ, ವೆಂಕಟೇಶ ಬದ್ದೇಪಲ್ಲಿ, ಮಹೇಶ ವಡವಟ್‌, ಹಸೇನ್‌ ವಾಡಿ, ಭೀಮಣ್ಣ ಮಡಿವಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next