Advertisement

ಅಂಗವಿಕಲರನ್ನು ಕೇವಲವಾಗಿ ಕಾಣದೇ ಪ್ರೋತ್ಸಾಹಿಸಿ

11:48 AM Dec 04, 2018 | |

ಹುಮನಾಬಾದ: ಅಂಗವಿಕಲರಿಗೆ ಬೇಕಾಗಿರವುದು ಅನುಕಂಪವಲ್ಲ ಅವಕಾಶ. ಅಂಗವಿಕಲರು ಅಸಹಾಯಕರಲ್ಲ. ಅವರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಿದಲ್ಲಿ ಸದೃಢರಿಗಿಂತಲೂ ಹೆಚ್ಚಿನದನ್ನು ಸಾಧಿಸಿ ತೋರಿಸುವ ಸಾಮರ್ಥ್ಯವಿದೆ ಎಂದು ಬಿಆರ್‌ಸಿ ಶಿವಕುಮಾರ ಪಾರಶಟ್ಟಿ ಹೇಳಿದರು.

Advertisement

ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಸೋಮವಾರ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲ ಮಕ್ಕಳಿಗಾಗಿ ಆಯೋಜಿಸಿದ್ದ ಕ್ರೀಡಾಸ್ಪರ್ಧೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ಅಂಗವಿಕಲರನ್ನು ಕೇವಲವಾಗಿ ಕಾಣದೇ ಸದೃಢರು ಪ್ರೋತ್ಸಾಹಿಸುವ ಮನೊಭಾವ ಬೆಳೆಸಿಕೊಳ್ಳಬೇಕು. ಆ ಉದ್ದೇಶದಿಂದ ಆ ಮಕ್ಕಳಿಗಾಗಿ 10ಕ್ಕೂ ಅಧಿಕ ವೈವಿಧ್ಯಮಯ ಕ್ರೀಡಾಸ್ಪರ್ಧೆ ಆಯೋಜಿಸಿದ್ದು, ಅವಕಾಶ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು. ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖ್‌ ಮೆಹೆಬೂಬ್‌ ಮಾತನಾಡಿ, ಸಾಮಾನ್ಯ ಮಕ್ಕಳ ಶಾಲೆಗಳಲ್ಲಿ ಪ್ರವೇಶ ಪಡೆಯುವ ಅಂಗವಿಕಲ ಮಕ್ಕಳಿಗೆ ಸಾಮಾನ್ಯ ಶಿಕ್ಷಕರು ಬೋಧನೆ ಮಾಡುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಅಂಗವಿಕಲ ಮಕ್ಕಳನ್ನು ಹೊಂದಿದ ಶಾಲೆ ಶಿಕ್ಷಕರಿಗೆ ತರಬೇತಿ ನೀಡುವ ವ್ಯವಸ್ಥೆಯಾದರೆ ಬೋಧನೆಗೆ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ಅಧಿಕಾರಿಗಳ ಗಮನಸೆಳೆಯಬೇಕು ಎಂದು ಸಲಹೆ ನೀಡಿದರು.

ಬಿಆರ್‌ಪಿ ಸಂಜೀವಕುಮಾರ ಪ್ರಾಸ್ತಾವಿಕ ಮಾತನಾಡಿ, ಅಂಗವಿಕಲ ಮಕ್ಕಳಿಗಾಗಿ ಚಮಚ ಲಿಂಬೆಹಣ್ಣಿನ ಆಟ, ಕಪ್ಪೆ ಆಟ, ಸಂಗೀತ ಕುರ್ಚಿ, 100 ಮೀ. ಓಟ, ಜನಪದ ಗೀತೆ, ಆಶು ಭಾಷಣ, ರಸಪ್ರಶ್ನೆ, ಸ್ಥಳದಲ್ಲೇ ಚಿತ್ರ ಬಿಡಿಸುವುದು, ಮಡಿಕೆ ಒಡೆಯುವುದು ಮತ್ತು ಛದ್ಮವೇಶ ಸೇರಿ ಒಟ್ಟು 10 ಸ್ಪರ್ಧೆ ನಡೆಸಲಾಗುತ್ತಿದೆ. ಸ್ಪರ್ಧೆಯಲ್ಲಿ ಒಟ್ಟು 148ಮಕ್ಕಳು ಭಾಗವಹಿಸುತ್ತಿದ್ದು, ಪ್ರತೀ ಆಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ತಾಲೂಕು ಅಧ್ಯಕ್ಷ ಮುರಗೇಂದ್ರ ಸಜ್ಜನಶಟ್ಟಿ, ಕೋಶಾಧ್ಯಕ್ಷ ಶಿವರಾಜ ಮೇತ್ರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಹರನಾಳಕರ್‌, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಪೂಜಾರಿ, ರಾಜಪ್ಪ ಜಮಾದಾರ, ಬಿಆರ್‌ಸಿ ಕಚೇರಿ ಸಿಬ್ಬಂದಿ ಪ್ರವೇಶಕುಮಾರ, ಶ್ರೀಧರ ಚವ್ಹಾಣ, ಐ.ಆರ್‌.ಟಿ ಅಶೋಕಕುಮಾರ, ಭೀಮರಾವ್‌, ಕರುಣಾದೇವಿ, ಭೂವನೇಶ್ವರಿ, ಮಡೆಪ್ಪ ಕುಂಬಾರ ಮೊದಲಾದವರು ಇದ್ದರು. ಬಿಆರ್‌ಪಿ ಧನಶ್ರೀರೆಡ್ಡಿ ಸ್ವಾಗತಿಸಿದರು. ಶ್ರೀಕಾಂತ ಸೂಗಿ ನಿರೂಪಿಸಿದರು. ಎಲಿಜಬತ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next