Advertisement

ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

08:34 AM Jun 03, 2020 | mahesh |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದೆ. ಅವಂತಿಪೋರಾದ ಸೈಮೋಹ್‌ ಎಂಬಲ್ಲಿ ಶಸ್ತ್ರಸಜ್ಜಿತ ಉಗ್ರರು ಅವಿತುಕೊಂಡಿರುವ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆ ಮತ್ತು ಜಮ್ಮು- ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಎರಡೂ ಕಡೆ ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು. ಶರಣಾಗುವಂತೆ ಉಗ್ರರಿಗೆ ಎಷ್ಟೇ ಸೂಚನೆ ಕೊಟ್ಟರೂ ಅವರು ಮಣಿಯಲಿಲ್ಲ. ಕೊನೆಗೆ ಇಬ್ಬರು ಉಗ್ರರನ್ನು ಹೊಡೆದು ರುಳಿಸುವಲ್ಲಿ ಭದ್ರತಾ ಪಡೆ ಯೋಧರು ಯಶಸ್ವಿಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next