Advertisement

ಎನ್‌ಕೌಂಟರ್‌: ಇಬ್ಬರು ಜೈಶ್‌ ಉಗ್ರರು ಹತ

11:27 AM Jul 11, 2018 | Harsha Rao |

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಕುಂದುಲನ್‌ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಸಿಬಂದಿ ನಡುವೆ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಮತ್ತು ಓರ್ವ ನಾಗರಿಕ ಹತರಾಗಿದ್ದಾರೆ. ಒಬ್ಬ ಯೋಧ ಸೇರಿ 21 ಜನರು ಗಾಯಗೊಂಡಿದ್ದಾರೆ.

Advertisement

ಉಗ್ರರ ಇರುವಿಕೆ ಕುರಿತ ಮಾಹಿತಿ ಆಧಾರದ ಮೇಲೆ ಭದ್ರತಾ ಸಿಬಂದಿ ಈ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿಗೆ ಮುಂದಾಗಿದ್ದು, ಎರಡೂ ಕಡೆ  ಗುಂಡಿನ ಚಕಮಕಿ ನಡೆದು, ಇಬ್ಬರು ಜೈಶ್‌ ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸೇನೆ ಯಶಸ್ವಿಯಾಯಿತು. ಮೃತರಲ್ಲಿ ಸ್ಥಳೀಯನೇ ಆದ ಸಮೀರ್‌ ಅಹ್ಮದ್‌ ಶೇಖ್‌ ಹಾಗೂ ಪಾಕಿಸ್ಥಾನ ಪ್ರಜೆ ಬಾಬರ್‌ ಸೇರಿದ್ದಾನೆ. ಕಾರ್ಯಾಚರಣೆ ವೇಳೆ, ಯೋಧರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರನ ಅಪ್ಪನಿಗೆ ಹೃದಯಾಘಾತ
ಶೋಪಿಯಾನ್‌ ಎನ್‌ಕೌಂಟರ್‌ ವೇಳೆ ತನ್ನ ಪುತ್ರನೂ ಸಿಲುಕಿಕೊಂಡಿದ್ದಾನೆ ಎಂಬ ವದಂತಿ ನಂಬಿ ಉಗ್ರನೊಬ್ಬನ ಅಪ್ಪ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿ ದ್ದಾರೆ. 2 ತಿಂಗಳ ಹಿಂದೆ ಉಗ್ರ ಸಂಘಟನೆಗೆ ಸೇರ್ಪಡೆಯಾದ ಝೀನತ್‌ ನೈಕೂ ಕೂಡ ಎನ್‌ಕೌಂಟರ್‌ ಸ್ಥಳದಲ್ಲಿದ್ದಾನೆ ಎಂಬ ಸುದ್ದಿ ಕೇಳುತ್ತಲೇ ಆತನ ತಂದೆ ಮೊಹಮ್ಮದ್‌ ಇಶಾಕ್‌ ನೈಕೂ ಕುಸಿದು ಬಿದ್ದರು. ಆದರೆ, ನೈಕೂ ಈ ಘಟನೆಯಲ್ಲಿ ಮೃತಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next