ಶ್ರೀನಗರ: ಜಮ್ಮು ಕಾಶ್ಮೀರದ ಶೋಫಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಧ್ರತಾ ಪಡೆಗಳು ಓರ್ವ ಉಗ್ರನನ್ನು ಸದೆಬಡೆಯುವಲ್ಲಿ ಯಶಸ್ವಿಯಾಗಿದೆ.
ಇದೇ ವೇಳೆ ಓರ್ವ ಉಗ್ರ ಗಾಯಗೊಂಡಿದ್ದು, ಆತನನ್ನು ಅನಂತನಾಗ್ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಉಗ್ರರು ಪೊಲೀಸ್ ಅಧಿಕಾರಿಯೋರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅನಂತನಾಗ್ ಪೊಲೀಸ್ ಅಧಿಕಾರಿಯು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಇನ್ ಸ್ಪೆಕ್ಟರ್ ಮೊಹಮ್ಮದ್ ಅಶ್ರಫ್ ಭಟ್ ಅವರನ್ನು ಬಿಜ್ ಬೆಹ್ರಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಯಶಸ್ವಿಯಾಗಲಿಲ್ಲ. ಇದಾಗಿ ಒಂದು ಗಂಟೆಯಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಕೊಂದು, ಓರ್ವನನ್ನು ಸೆರೆ ಹಿಡಿದಿವೆ.
ಇದನ್ನೂ ಓದಿ:ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್ ಇರಿಸಿ ಪತ್ರ
ಮೊಹಮ್ಮದ್ ಅಶ್ರಫ್ ಭಟ್ ಅವರು ಪ್ರಸ್ತುತ ಪುಲ್ವಾಮಾ ಜಿಲ್ಲೆಯ ಲೆಥ್‌ಪೊರಾದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನಂತ್‌ನಾಗ್‌ನ ಬಿಜ್‌ಬೆಹರಾದ ಸುಂಡ್‌ಪೋರಾ ಕನೆಲ್ವಾನ್ ಪ್ರದೇಶದ ಅವರ ನಿವಾಸದ ಬಳಿ ಇನ್ಸ್ಪೆಕ್ಟರ್ ಭಟ್ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ.
ಘಟನಾ ಸ್ಥಳವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.