Advertisement

ಜಮ್ಮು ಕಾಶ್ಮೀರ: ಕುಲ್ಗಾಮ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

12:37 PM Oct 10, 2020 | keerthan |

ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಮ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಶನಿವಾರ ಬೆಳಿಗ್ಗೆ ಈ ಎನ್ ಕೌಂಟರ್ ನಡೆದಿದ್ದು, ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

Advertisement

ಜಮ್ಮು ಕಾಶ್ಮೀರ ಪೊಲೀಸರ ತಂಡ ಮತ್ತು ಸೇನಾಪಡೆ ಯ ಜಂಟಿ ಕಾರ್ಯಾಚರಣೆಯಲ್ಲಿ ಎನ್ ಕೌಂಟರ್ ಮಾಡಲಾಗಿದೆ. ಕುಲ್ಗಾಮ್ ಜಿಲ್ಲೆಯ ಚಿಂಗಾಮ್ ನಲ್ಲಿ ಉಗ್ರರು ಅಡಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಸ್ಥಳವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದಾರೆ.

ಭದ್ರತಾ ಸಿಬ್ಬಂದಿ ಸುತ್ತುವರಿಯುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಸೇನೆಯೂ ಪ್ರತಿ ಉತ್ತರ ನೀಡಿದೆ.

ಇದನ್ನೂ ಓದಿ:ಕೋವಿಡ್ ಹಬ್ಬಿಸಿದ್ದು ನಾವಲ್ಲ: ಚೀನ ಡ್ರಾಮಾ

ಎನ್ ಕೌಂಟರ್ ಮುಂದುವರಿದಿದ್ದು, ಇದುವರೆಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಸದ್ಯ ಎನ್ ಕೌಂಟರ್ ನಡೆಯುತ್ತಿರುವ ಕಾರಣ ಇಬ್ಬರ ಮೃತದೇಹಗಳನ್ನು ಸ್ಥಳದಿಂದ ಪಡೆಯಲಾಗಿಲ್ಲ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next