ಶ್ರೀನಗರ: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಮೂವರು ಪಾಕಿಸ್ಥಾನ ಉಗ್ರರನ್ನು ಹೊಡೆದುರುಳಿಸಿದೆ. ಲೈನ್ ಆಫ್ ಕಂಟ್ರೋಲ್ ನ ರಾಂಪುರ್ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದೆ. ಈ ವೇಳೆ ಎನ್ ಕೌಂಟರ್ ಆರಂಭವಾಗಿದೆ. ಸ್ಥಳದಲ್ಲಿ ಒಟ್ಟು ಆರು ಭಯೋತ್ಪಾದಕರು ಅಡಗಿರುವ ಮಾಹಿತಿಯಿದ್ದು, ಇದುವರೆಗೆ ಒಟ್ಟು ಮೂವರನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಸದ್ಯ ಎನ್ ಕೌಂಟರ್ ಮುಂದುವರಿದಿದೆ.
ಇದನ್ನೂ ಓದಿ:ಅಸ್ಸಾಂ: ಮೂಢನಂಬಿಕೆ ಹೋಗಲಾಡಿಸಲು ಖಡ್ಗಮೃಗಗಳ 2,479 ಕೊಂಬುಗಳ ದಹನ
ಭಾರತೀಯ ಸೇನೆಯು ಕಾರ್ಯಾಚರಣೆಯಲ್ಲಿ ಹತ್ಯೆಯಾದ ಭಯೋತ್ಪಾದಕರಿಂದ ಐದು ಎಕೆ -47, 8 ಪಿಸ್ತೂಲ್ ಮತ್ತು 70 ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ.