Advertisement

ಛತ್ತೀಸ್‌ಗಢ: ಮಾವೋ ಉಗ್ರರ ವಿರುದ್ಧ ಎನ್‌ಕೌಂಟರ್‌ , 9 ಮಂದಿ ಬಂಧನ

11:59 AM May 11, 2017 | Team Udayavani |

ರಾಯಪುರ : ಛತ್ತೀಸ್‌ಗಢದ ಪಂಖಜೂರ್‌ ಎಂಬಲ್ಲಿ ಇಂದು ಗುರುವಾರ ಬೆಳಗ್ಗೆ  ಬಿಎಸ್‌ಎಫ್ ಯೋಧರು ಮತ್ತು ಮಾವೋ ಉಗ್ರರ ನಡುವೆ ಭೀಕರ ಎನ್‌ಕೌಂಟರ್‌ ನಡೆದಿದೆ. 

Advertisement

ಕಳೆದ ಎಪ್ರಿಲ್‌ 24ರಂದು ಸುಕ್‌ಮಾದಲ್ಲಿ 25 ಸಿಆರ್‌ಪಿಎಫ್ ಯೋಧರನ್ನು ಮಾವೋ ಉಗ್ರರು ಹತ್ಯೆಗೈದ ಬಳಿಕದಲ್ಲಿ ಇಂದು ಗುಂಡಿನ ಕಾಳಗ ನಡೆದಿದೆ. ಚಿಂತಾಗುಫಾ ಪ್ರದೇಶದತ್ತ ಸಾಗುವ ರಸ್ತೆ ತೆರವಿನ ಯೋಧರ ಮೇಲೆ ಮಾವೋ ಉಗ್ರರು ಗುಂಡಿನ ದಾಳಿ ನಡೆಸಿದರು. 

ಎನ್‌ಕೌಂಟರ್‌ ಬಳಿಕ ಸಿಆರ್‌ಪಿಎಫ್ ಯೋಧರು ಚಿಂತಲನಾರ್‌ ಮತ್ತು ಚಿಂತಾಗುಫಾ ಎಂಬಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಿದರು. 

ಮಾವೋ ಉಗ್ರರ ಹುಟ್ಟಡಗಿಸಲು ಅವರಿಗೆ ಹಣ ಪೂರೈಕೆಯಾಗುವ ಮಾರ್ಗಗಳು ಹಾಗೂ ಮೂಲಗಳನ್ನು ನಾಶಪಡಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಮೊನ್ನೆ ಸೋಮವಾರ ಕರೆ ನೀಡಿದ್ದರಲ್ಲದೆ “ಸಮಾಧಾನ್‌’ ಎಂಬ ಹೊಸ “ನಕ್ಸಲ್‌ ನಿಗ್ರಹ ವ್ಯೂಹಗಾರಿಕೆ’ಯನ್ನು ಅನಾವರಣಗೊಳಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next