ಗುವಾಹಟಿ: ಭದ್ರತಾ ಪಡೆಗಳು ರವಿವಾರ ನಡೆಸಿದ ಎನ್ ಕೌಂಟರ್ ನಲ್ಲಿ ಡಿಎನ್ ಎಲ್ ಎ ಗುಂಪಿಗೆ ಸೇರಿದ ಆರು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ.
ದಿಮಾಸ ರಾಷ್ಟ್ರೀಯ ಲಿಬರೇಶನ್ ಆರ್ಮಿಗೆ ಸೇರಿದ ಆರು ಮಂದಿ ಉಗ್ರರನ್ನು ಸದೆಬಡಿಯಲಾಗಿದೆ. ಈ ಡಿಎನ್ ಎಲ್ಎ ಉಗ್ರ ಸಂಘಟನೆಯು ಅಸ್ಸಾಂನ ದಿಮಾ ಹಸಾವೋ ಮತ್ತು ಕರ್ಬಿ ಅಂಗ್ಲಾಂಗ್ ಹಾಗೂ ನಾಗಾಲ್ಯಾಂಡ್ ನ ಗಡಿ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ.
ಖಚಿತ ಮಾಹಿತಿಯ ಮೇರೆಗೆ ನಾಗಾಲ್ಯಾಂಡ್ ಗಡಿ ಭಾಗ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಅಲ್ಲಿ ಬಂಡುಕೋರರನ್ನು ಪತ್ತೆ ಮಾಡಿ ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಇದನ್ನೂ ಓದಿ:ಕೋವಿಡ್ ಓಡಿಸಲು ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು.!
ಪಶ್ಚಿಮ ಕರ್ಬಿ ಅಂಗ್ಲಾಂಗ್ ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಈ ಏನ್ ಕೌಂಟರ್ ನಿಂದ ಬಂಡುಕೋರರ ಗುಂಪಿಗೆ ದೊಡ್ಡ ಹಿಡಿತ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಮೇ 19ರಂದು ಡಿಎನ್ಎಲ್ ಎ ಉಗ್ರರು ಅಸ್ಸಾಂ- ನಾಗಾಲ್ಯಾಂಡ್ ಗಡಿ ಭಾಗದ ಧನ್ಸಿರಿಯಲ್ಲಿ ಯುವಕನನ್ನು ಕೊಲೆ ಮಾಡಿದ್ದರು. ಇದಾದ ಬಳಿಕ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು.