Advertisement

ಕೊಟ್ಟಿಗೆಹಾರ: ಮೀಸಲು ಅರಣ್ಯದ ರಸ್ತೆಯಲ್ಲಿ 60ಕ್ಕೂ ಹೆಚ್ಚು ಖಾಲಿ ಕಾಟ್ರೇಜ್ ಗಳು ಪತ್ತೆ

08:48 AM Mar 08, 2023 | Team Udayavani |

ಕೊಟ್ಟಿಗೆಹಾರ: ಸಾರಗೋಡು-ತತ್ಕೋಳ ಮೀಸಲು ಅರಣ್ಯದ ರಸ್ತೆಯಲ್ಲಿ ಫೈರಿಂಗ್ ಆದ ಬಂದೂಕಿನ ಖಾಲಿ ಕಾಟ್ರೇಜ್ ಗಳು ಪತ್ತೆಯಾಗಿದೆ.

Advertisement

ಸಾರಗೋಡು-ತತ್ಕೋಳ ಮೀಸಲು ಅರಣ್ಯದ  ರಸ್ತೆಯಲ್ಲಿ  60ಕ್ಕೂ ಹೆಚ್ಚು ಬಂದೂಕಿನ ಖಾಲಿ ಕಾಟ್ರೇಜ್ ಗಳು ಪತ್ತೆಯಾಗಿದೆ. ವಗೇರ್ ನಿಂದ ಕನ್ನಗದ್ದೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಕಾಟ್ರೇಜ್ ಗಳು ಖಾಲಿ ಪತ್ತೆಯಾಗಿದೆ.

ಒಂದೇ ಕಡೆ 60ಕ್ಕೂ ಹೆಚ್ಚು ಕಾಟ್ರೇಜ್ ಪತ್ತೆಯಾಗಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿದೆ. ಕಾಡು ಪ್ರಾಣಿಗಳು ಸಾರಗೋಡು ತತ್ಕೋಳ ಮೀಸಲು ಅರಣ್ಯದಲ್ಲಿ ಹೆಚ್ಚಿವೆ. ಇದರಿಂದ ಕಾಟ್ರೇಜ್ ಗಳು ಕಾಡು ಪ್ರಾಣಿಗಳ ಶಿಕಾರಿಗಾಗಿ ಬಳಕೆಯಾಗಿತ್ತಾ ಎನ್ನುವ ಅನುಮಾನವೂ ವ್ಯಕ್ತವಾಗಿದೆ.

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.ಅನಧಿಕೃತ ಬಂದೂಕುಗಳ ವಶದ ಬೆನ್ನಲ್ಲೆ ಖಾಲಿ‌ ಕಾಟ್ರೇಜ್ ಗಳು ಪತ್ತೆಯಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next