Advertisement

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

09:54 PM Apr 22, 2021 | Team Udayavani |

ವರದಿ : ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

ನರಗುಂದ: ಅಧಿಕಾರ ಶಾಶ್ವತವಲ್ಲ. ಕಷ್ಟಪಟ್ಟು ಮೈಮುರಿದು ದುಡಿಯುವ ದುಡಿಮೆ ಜೀವನಕ್ಕೊಂದು ಆಧಾರವಾಗಿದೆ. ಇದು ಜೀವನಪೂರ್ತಿ ಬದುಕಿಗೆ ನೆರವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾದ ಗ್ರಾಪಂ ಸದಸ್ಯರೊಬ್ಬರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ.

ತಾಲೂಕಿನ ಕೊಣ್ಣೂರ ಗ್ರಾಮದ ಗ್ರಾಮ ಪಂಚಾಯತಿ ವ್ಯಾಪ್ತಿಯ 7ನೇ ವಾರ್ಡ್‌ನಿಂತ ನೂತನವಾಗಿ ಚುನಾಯಿತಗೊಂಡ ಸದಸ್ಯ ಗೂಳಪ್ಪ ಬಸಪ್ಪ ಹುಜರತ್ತಿ ಮಾದರಿ ಕಾರ್ಯದಲ್ಲಿ ಸೈ ಎನಿಸಿಕೊಂಡಿದ್ದಾರೆ. ಗ್ರಾಮೀಣ ಉದ್ಯೋಗ: ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ರೈತಾಪಿ ಕುಟುಂಬಗಳು, ಕೂಲಿಕಾರರಿಗೆ ಆರ್ಥಿಕ ಭದ್ರತೆ ಒದಗಿಸಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಸ್ವತಃ ಕೂಲಿಕಾರರೊಂದಿಗೆ ತಾವೂ ಗುದ್ದಲಿ, ಸಲಿಕೆಯೊಂದಿಗೆ ಖಾತ್ರಿ ಯೋಜನೆ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಪಂ ಸದಸ್ಯ ಗೂಳಪ್ಪ ಹುಜರತ್ತಿ ಸಹ ಕೆಲಸಗಾರರಿಗೆ ಮಾದರಿಯಾಗಿದ್ದಾರೆ.

ಇದು ಅವರ ವಾರ್ಡ್‌ನ ಜನರಿಗೆ ಪ್ರೇರಣೆಯಾಗಿದ್ದು, ಗ್ರಾಪಂ ಸದಸ್ಯರೊಂದಿಗೆ ಖಾತ್ರಿ ಯೋಜನೆಯಲ್ಲಿ ಕೆಲಸ ಕೈಗೊಂಡಿರುವುದು ಅವರಿಗೂ ಸ್ಫೂರ್ತಿದಾಯಕವಾಗಿದೆ. ತಮ್ಮ ವಾರ್ಡ್‌ ಜನರೊಂದಿಗೆ ಕಷ್ಟಪಟ್ಟು ದುಡಿಯುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾದ ಸದಸ್ಯ ಗೂಳಪ್ಪ ಅವರೊಂದಿಗೆ ಅವರ ಧರ್ಮಪತ್ನಿ ರೇಣುಕಾ ಕೈಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next