ಮಹಿಳಾ ನೌಕರರು ಕಳೆದ ಆರು ತಿಂಗಳಿಂದ ಇಲಾಖೆಯಿಂದ ವೇತನ ಸಿಗದೇ ಪರದಾಡುತ್ತಿದ್ದಾರೆ. ಶಾಲೆಗಳ ಬಿಸಿಯೂಟ ತಯಾರಿಕೆಯಲ್ಲಿ ತೊಡಗಿರುವ ಸಿಬ್ಬಂದಿ ವೇತನ ಯಾವಾಗ ಕೈಗೆ ಬರುತ್ತದೆ ಎಂಬ ಚಿಂತೆಯಲ್ಲಿ ಕಚೇರಿಗೆ ಎಡತಾಕುತ್ತಿದ್ದಾರೆ. ಸಿಬ್ಬಂದಿಗಳ ತಿಂಗಳ ವೇತನ ಮತ್ತು ಸಾದ್ವಿಲ್ವಾರ ಹಣ (ತರಕಾರಿ ಖರೀದಿ ಹಣ) ಕೈಗೆ ಬಾರದಿರುವುದು ಒಂದಡೆಯಾದರೆ. ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳ ಕಾಟ ಮತ್ತೂಂದಡೆ. ಇದನ್ನೆಲ್ಲ ಎದುರಿಸಿ ಬಿಸಿಯೂಟ ತಯಾರಿಸಿ ವಿದ್ಯಾರ್ಥಿಗಳಿಗೆ ಉಣಬಡಿಸಲು ಹರಸಹಾಸ ಪಡುತ್ತಿದ್ದಾರೆ. ಅಲ್ಲದೆ, 800 ಸಿಲಿಂಡರ್ ಪೂರೈಸಲು ಕೇವಲ ಒಂದೇ ಏಜ್‌ನ್ಸಿ ಇದೆ. ಎಲ್ಲ ಶಾಲೆಗಳಿಗೆ ಸಮರ್ಪಕವಾಗಿ ಪೂರೈಕೆ ಆಗದಿರುವುದು ಸಹ ತೊಂದರೆಗೆ ಕಾರಣವಾಗಿದೆ. ವಲಯವಾರು ಸಿಲಿಂಡರ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸುತ್ತೇಲೆ ಬಂದಿದೆ. ಆದರು ಸರ್ಕಾರ ಮಟ್ಟದಲ್ಲಿ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೊಟ್ಟೆಗೇನು ತಿನ್ನಬೇಕು. ಆರು ತಿಂಗಳಿಂದ ಪಗಾರ ಕೊಟ್ಟಿಲ್ಲ. ಶಾಲೆ ಮುಖ್ಯಸ್ಥರಿಗೆ ಹೇಳಿ ಬ್ಯಾಂಕ್ ಖಾತೆ ಸಂಖ್ಯೆ
ಕೊಟ್ಟಿದೇವು. ಒಬ್ಬರ ಮೇಲೆ ಒಬ್ಬರು ಹಾಕಿ ಕೈ ತೊಳೆದುಕೊಳ್ಳುತ್ತಿದ್ದಾರೆ. ವಿಧವೆಯರು, ಬಡವರಿದ್ದೇವೆ. ಏನು ತಿನ್ನಬೇಕು. ಮೊದಲು ಪಗಾರ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಬಿಸಿಯೂಟ ಅಡುಗೆ ತಯಾರಿಕೆ ಸಿಬ್ಬಂದಿಯೊಬ್ಬರು ಆಗ್ರಹಿಸಿದ್ದಾರೆ. ಅಡಿಗೆಯವರ ಪಗಾರ ಕೊಡುವಂತೆ ಅನೇಕ ಬಾರಿ ತಾಲೂಕು ಅಧಿಕಾರಿಗಳಿಗೆ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ವಿಳಂಬ ಮಾಡುತ್ತಿದ್ದಾರೆ ಎಂದು ಅಕ್ಷರ ದಾಸೋಹ ನೌಕರರ ಜಿಲ್ಲಾ ನಾಯಕಿ ರೇಖಾ ಸುತಾರ ದೂರಿದ್ದಾರೆ. ಸಮಯಕ್ಕೆ ಸರಿಯಾಗಿ ಅಡುಗೆ ಸಿಬ್ಬಂದಿಗಳ ವೇತನ ಪಾವತಿಸಬೇಕು. ಸಾದಿಲ್ವಾರ ಹಣ ಪೂರೈಸಬೇಕು. 15 ಸಾವಿರ ರೂ. ಕನಿಷ್ಠ ವೇತನ ಒದಗಿಸಬೇಕು. ಬಿಸಿಯೂಟ ಖಾಸಗೀಕರಣ ನಿಲ್ಲಿಸಬೇಕು. ಹೆಚ್ಚುವರಿ ಸಿಬ್ಬಂದಿ ಎಂದು ತೆಗೆದು ಹಾಕಿರುವುದು ಸರಿಯಲ್ಲ ಎಂದು ಅಕ್ಷರದಾಸೋಹ ಸಂಘದ ಪದಾಧಿಕಾರಿ ಶೋಭಾ ಆರ್. ಗಾಯಕವಾಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement