Advertisement

ಐಟಿ ಕಂಪನಿಗಳಲ್ಲಿ ನೌಕರರ ರಾಜೀನಾಮೆಗೆ ಭಾರಿ ಒತ್ತಡ

03:00 AM Jul 19, 2017 | Team Udayavani |

ಪುಣೆ: ಕೆಲವೇ ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನ ಕ್ಷೇತ್ರವೆಂದರೆ ಯುವಕರು ಮುಗಿಬೀಳುತ್ತಿದ್ದರು. ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕಿದರೆ ಸಾಕು ಎಂಬಂಥ ಪರಿಸ್ಥಿತಿ ಇತ್ತು. ಆದರೆ, ಈಗ ಐಟಿ ಕಂಪನಿಗಳು ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿವೆ.

Advertisement

ಇದೀಗ ಪುಣೆಯ ಕಂಪನಿಯೊಂದರಲ್ಲಿ ರಾಜೀನಾಮೆ ನೀಡುವಂತೆ ಉದ್ಯೋಗಿಯೊಬ್ಬರಿಗೆ ಒತ್ತಡ ಹೇರಲಾಗಿದ್ದ ದೂರವಾಣಿ ಸಂಭಾಷಣೆಯೊಂದು ಬಹಿರಂಗವಾಗಿದೆ. ಎಚ್‌ಆರ್‌ ಮ್ಯಾನೇಜರ್‌ ಉದ್ಯೋಗಿಗೆ ರಾಜೀನಾಮೆ ನೀಡಿ ಹೊರಹೋಗುವಂತೆ ಆದೇಶಿಸುತ್ತಿರುವುದು ಈ ಆಡಿಯೋದಲ್ಲಿದೆ. ತಾವಾಗಿಯೇ ರಾಜೀನಾಮೆ ನೀಡದಿದ್ದರೆ ನಿಮ್ಮ ಭವಿಷ್ಯವನ್ನೇ ಹಾಳು ಮಾಡುತ್ತೇವೆ. ನಿಮ್ಮ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ. ನಿಮ್ಮನ್ನು ಕೆಲಸದಿಂದ ಕಿತ್ತುಹಾಕುತ್ತೇವೆ ಎಂದೆಲ್ಲಾ ಬೆದರಿಸುತ್ತಾರೆ. ಎಚ್‌ಆರ್‌ ನಮ್ಮನ್ನು ಮಾತ ನಾಡಲು ಕರೆದ ವೇಳೆ ಅವರ ಜೊತೆ 4ರಿಂದ 5 ಹಿರಿಯ ಉದ್ಯೋಗಿಗಳಿರುತ್ತಾರೆ. ಭದ್ರತಾ ಸಿಬ್ಬಂದಿಯೂ ಇರುತ್ತಾರೆ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next