ಹೊಸದಿಲ್ಲಿ: ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬಂದಿಗೆ ಸರಕಾರಿ ನೌಕರರಿಗಿರುವ ಸೌಲಭ್ಯಗಳನ್ನು ಕೊಡಲಾಗದು. ಅವರು ಅದನ್ನು ಹಕ್ಕೆಂದು ಕೇಳಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮಹಾರಾಷ್ಟ್ರದ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ (ಡಬ್ಲ್ಯುಎಎಲ್‌ಎಂಐ)ಯ ಸಿಬಂದಿಗೆ ಪಿಂಚಣಿ ಸೌಲಭ್ಯ ವಿಸ್ತರಿಸುವುದಕ್ಕೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದ್ದನ್ನು ವಿರೋಧಿಸಿ, ಮಹಾರಾಷ್ಟ್ರ ಸರಕಾರ ಸುಪ್ರೀಂ ಮೆಟ್ಟಿಲೇರಿತ್ತು. ಅದರ ವಿಚಾರಣೆ ಮಾಡಿರುವ ನ್ಯಾಯಾಲಯ ರಾಜ್ಯ ಸರಕಾರದ ಪರವಾಗಿ ಮಾತನಾಡಿದೆ.
“ಖಾಸಗಿ ಸಂಸ್ಥೆಗಳು ಸರಕಾರಿ ಸಂಸ್ಥೆಗಳಂತೆ ನಿಯಮ ಮಾಡಿಕೊಂಡ ಮಾತ್ರಕ್ಕೆ ಸರಕಾರಿ ನೌಕರರ ಸೌಲಭ್ಯ ಕೊಡಿ ಎಂದು ಕೇಳಲಾಗದು. ಅವರಿಗೆ ಸೌಲಭ್ಯ ಕೊಡುವುದು ಆಯಾ ಸಂಸ್ಥೆಗಳ ಜವಾಬ್ದಾರಿ’ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ : ದೀಪಕ್ ಕೊಚ್ಚರ್‌ಗೆ ಸುಪ್ರೀಂ ರಿಲೀಫ್
ನ್ಯಾಯ ಮೂರ್ತಿಗಳಾಗಿರುವ ಎಂ.ಆರ್.ಷಾ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.