Advertisement

ಎಸ್ಮಾ ಜಾರಿ, ಬಂಧನ ಭೀತಿ: ಮನೆ ತೊರೆದ ಸಾರಿಗೆ ಸಂಸ್ಥೆಯ ನೌಕರರು

09:04 PM Apr 09, 2021 | Team Udayavani |

ಕುಣಿಗಲ್‌: ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ 2ನೇ ದಿನಕ್ಕೆ ಮುಂದುವರಿದಿದ್ದು, ವಿಪ್‌ ಜಾರಿ ಮಾಡಿ ಬಂಧಿಸಲಿದ್ದಾರೆ ಎಂಬ ಭೀತಿಯಿಂದ ಹಲವು ನೌಕರರು ಮನೆ ತೊರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಾಗಿ ಒತ್ತಾಯಿಸಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ನಿಗಮಗಳ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಕುಣಿಗಲ್‌ ತಾಲೂಕು ಸಾರಿಗೆ ಸಂಸ್ಥೆಯ ಘಟಕದ ನೌಕರರು ಗುರುವಾರವೂ ಕೆಲಸಕ್ಕೆ ಹಾಜರಾಗಿರಲಿಲ್ಲ. ಈ ನಿಟ್ಟಿನಲ್ಲಿ ಘಟಕದ ವ್ಯವಸ್ಥಾಪಕ ಮಂಜುನಾಥ್‌ ಆದಿಯಾಗಿ ಅಧಿಕಾರಿಗಳು ಸಂಸ್ಥೆಯ ವಸತಿ ಗೃಹದಲ್ಲಿ ವಾಸವಾಗಿರುವ ನೌಕರರ ಮನೆಗೆ ಬರಲಿದ್ದಾರೆ ಎಂಬ ವಿಷಯ ತಿಳಿದ ನೌಕರರು ಎಸ್ಮಾ ಜಾರಿ ಮಾಡಿ ಬಂಧಿಸಲಿದ್ದಾರೆ ಎಂಬ ಭೀತಿಯಿಂದ ಮನೆ ತೊರೆದು ಬೇರೆಡೆಗೆ ತೆರಳಿದರು.

ತರಾಟೆ: ಘಟಕದ ವ್ಯವಸ್ಥಾಪಕ ಮಂಜುನಾಥ್‌ ಮತ್ತು ಅವರ ಅಧಿಕಾರಿಗಳ ತಂಡ ಗುರುವಾರ ಪಟ್ಟಣದ ಹೌಸಿಂಗ್‌ ಬೋರ್ಡ್‌ ಕಾಲೋನಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಗರಂ ಆದ ನೌಕರರ ಕುಟುಂಬಸ್ಥರು, ನಿಮಗೆ ಸರ್ಕಾರ ಸಾಕಷ್ಟು ಸಂಬಳ ಕೊಡುತ್ತಿದೆ. ನಮಗೇನು ಕೊಡುತ್ತಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ತರಾಟೆ ತೆಗೆದುಕೊಂಡರು. ಇದು ಹೀಗೆ ಮುಂದುವರಿದರೆ ಗಂಡ, ಮಕ್ಕಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದರು ಎನ್ನಲಾಗಿದೆ. ಆದರೂ ಅಧಿಕಾರಿಗಳು ನೌಕರರ ಕುಟುಂಬಸ್ಥರೊಂದಿಗೆ ಸೌಮ್ಯದಿಂದ ನಡೆದುಕೊಂಡು ಮತ್ತೂಮ್ಮೆ ಮನವೊಲಿಸಲು ಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next