ಬೀದರ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಉಪ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ಆರ್ ಅವರು ಸಂಬಂ ಸಿದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ನಡೆದ ಎಸ್ ಸಿ-ಎಸ್‌ಟಿ ಉಪ ಯೋಜನೆಗಳಡಿಯಲ್ಲಿ ವಿವಿಧಅಭಿವೃದ್ಧಿ ಇಲಾಖಾವಾರು ಕಾರ್ಯಕ್ರಮಗಳ ಪ್ರಗತಿಪರಿಶೀಲನೆ ನಡೆಸಿ ಮಾತನಾಡಿದ ಅವರು, ವಿಶೇಷಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಧಿಕಾರಿಗಳು ವೈಯಕ್ತಿಕವಾಗಿ ಗಮನ ಹರಿಸಿ, ಇದು ಅತೀ ಜರೂರುಎಂದು ಪರಿಗಣಿಸಿ ಭೌತಿಕ ಮತ್ತು ಆರ್ಥಿಕ ಸಾಧನೆಗೆ ಒತ್ತು ಕೊಡಬೇಕು ಎಂದು ತಿಳಿಸಿದರು.
ಅನುದಾನ ಬಂದಿಲ್ಲ ಎನ್ನುವ ಕಾರಣ ಹೇಳಿ ಎಸ್‌ಸಿ-ಎಸ್‌ಟಿ ಉಪ ಯೋಜನೆಗಳ ಪ್ರಗತಿಗೆ ಒತ್ತು ಕೊಡದಿದ್ದಲ್ಲಿ ಅಧಿ ಕಾರಿಗಳು ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಡಿಸಿ, ಯೋಜನೆಗಳಿಗೆ ಅನುದಾನ ಬಿಡುಗಡೆ ಆಗುವವರಗೆ ಕಾಯದೇ ಫಲಾನುಭವಿಗಳ ಆಯ್ಕೆಗೆ ಮೊದಲಾದ್ಯತೆ ನೀಡಬೇಕು. ಬಳಿಕ ಭೌತಿಕ ಸಾಧನೆಯನುಸಾರ ಅನುದಾನ ಕೇಳಿ ಆರ್ಥಿಕ ಪ್ರಗತಿಗೆ ಗಮನ ಹರಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ: ಎಸ್ಸಿಪಿ ಮತ್ತುಟಿಎಸ್ಪಿ ಯೋಜನೆಯ ಪ್ರಗತಿಯ ಸಭೆಗೆ ವಿಳಂಬವಾಗಿ ಆಗಮಿಸಿದ್ದಕ್ಕೆ ಮತ್ತು ಸಭೆಗೆ ಅಸಮರ್ಪಕ ಮಾಹಿತಿ ನೀಡಿದ ಕೆಲವು ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಮಾಹಿತಿಯನ್ನು ಅಸಮರ್ಪಕವಾಗಿ ನೀಡಿದ ಹಾಗೂ ಸಭಾ ಸೂಚನೆ ಪತ್ರ ತಲುಪಿಸಿದ್ದರೂ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಆದೇಶಿಸಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್.,ಯೋಜನಾ ನಿರ್ದೇಶಕ ವಿಜಯಕುಮಾರ ಮಡ್ಡೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸರೋಜಾ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಇದ್ದರು. ಪರಿಣಾಮಕಾರಿ ಚಟುವಟಿಕೆ ನಡೆಸಿ: ಭಾರತೀಯರೆಡ್ ಕ್ರಾಸ್ ಸಂಸ್ಥೆಯ ವಿಶೇಷ ಸಭೆಯು ಡಿಸಿ ರಾಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಡಿಸಿ, ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯಬೇಕು. ಸಂಸ್ಥೆಯ ಎಲ್ಲ ಸದಸ್ಯರು ಉಪ ಸಮಿತಿ ರಚಿಸಿಕೊಂಡು, ಪ್ರತಿ ವಾರ ಸಭೆ ನಡೆಸಿ ಎಲ್ಲ ಕಾರ್ಯ ಚಟುವಟಿಕೆಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಜನರಿಗೆ ಉತ್ತಮ ಆರೋಗ್ಯ ಸಲಹೆಗಳು ಅತೀ ಅವಶ್ಯವಿದೆ. ಸಂಸ್ಥೆಯಿಂದ ಜಿಲ್ಲೆಯಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ಮಾಡಿದರು.
ಡಿಎಚ್‌ಒ ಡಾ.ವಿ.ಜಿ.ರೆಡ್ಡಿ ಮಾತನಾಡಿದರು. ಸಂಸ್ಥೆಯ ರಾಜ್ಯ ಆಡಳಿತ ಮಂಡಳಿಯ ಸದಸ್ಯ ವೈಜಿನಾಥ ಕಮಠಾಣೆ, ಸಭಾಪತಿ ಡಾ.ಕೆ.ರಾಜಕುಮಾರ, ಕಾರ್ಯದರ್ಶಿ ವಿದ್ಯಾ ಪಾಟೀಲ, ಖಜಾಂಚಿ ಡಾ.ಸಿ.ಆನಂದರಾವ್, ಆಡಳಿತ ಮಂಡಳಿಯ ಸದಸ್ಯರಾದ ಸುಮನಬಾಯಿ ಶಿಂಧೆ ಹಾಗೂ ಇತರರು ಇದ್ದರು.