ಕಾರಟಗಿ: ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಅಜ್ಞಾನ, ಅಂಧಕಾರ, ಮೌಡ್ಯತೆ ತೊಲಗಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಪಟ್ಟಣದ ಅಬ್ದುಲ್ ನಜೀರಸಾಬ್ ಕಾಲೋನಿಯಲ್ಲಿ ಇಹ್ಸಾನ್ ಫ್ಯೂಚರ್ ಅಕಾಡೆಮಿ ಸೆಂಟರ್ ನೇತೃತ್ವದಲ್ಲಿ ನಿರ್ಮಿಸಲಾಗಿರುವ ನೂತನ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದಿಂದ ಅನೇಕ ಶೈಕ್ಷಣಿಕ ಸೌಲಭ್ಯಗಳಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.ಶಾಲೆಗೆ ಬೇಕಾದ ಜಾಗೆ, ರಸ್ತೆ, ನೀರಿಗೆ ಸಂಬಂಧಿಸಿದಂತೆ ನಿಮ್ಮ ಶಾಲಾಭಿವೃದ್ಧಿಗೆ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತ ಕನ್ನಡ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರೆ ಶಿಕ್ಷಣ ಪಡೆಯಲೇಬೇಕು. ಆಗಲೇ ಸರ್ಕಾರಿ ಕೆಲಸ ಪಡೆದು ಇತರರಿಗೂ ಸಹಾಯ ಮಾಡಲು ಸಹಕಾರಿಯಾಗುವುದು
ಎಂದರು.
ಸಾನಿಧ್ಯವನ್ನು ಬಹು| ಸೈಯ್ಯದ್ ಅಬೂಬಕರ್ ಸಿದ್ಧಿಕ್ ಮದನಿ ಅಲ್ ಹಾದಿ ತಂಬಳ್, ತೀರ್ಥಹಳ್ಳಿ , ಅಧ್ಯಕ್ಷತೆಯನ್ನು ಎನ್.ಕೆ.ಎಂ. ಶಫಿ ಸಅದಿ ವಹಿಸಿದ್ದರು.
ಪ್ರಮುಖರಾದ ವೀರೇಶ ಸಾಲೋಣಿ, ನಾಗರಾಜ್ ಬಿಲ್ಗಾರ್, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಶೋಕ ಉಮಲೂಟಿ , ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸರ್ದಾರ ಅಲಿ, ಚನ್ನಬಸಪ್ಪ ಸುಂಕದ್, ಬಿ. ಕಾಶಿವಿಶ್ವನಾಥ್ , ಮಹಿಬೂಬ್ ಎಂ.ಡಿ.ಎಸ್. ಸಿದ್ದಾಪುರ, ಸಿರಾಜ್ ಸಿದ್ದಾಪುರ, ಅಬ್ದುಲ್ ಲತೀಫ್ ಸಅದಿ, ಬೂದಾನಿಗಳಾದ ಸೈಯ್ಯದ್ ಮಹಿಬೂಬ್ ಷರೀಫ್ ಹಾಗೂ ಬಿ. ಗೌಸ್, ಜಾಮಿಯಾ ಮಸೀದಿ ಬೂದಗುಂಪಾದ ಮೌಲಾನಾ ಖಾಜಿ ಗುಲಾಂ ಹುಸೇನ್ ನೂರಿ, ಜಾಮಿಯಾ ಮಸೀದಿ ಅಧ್ಯಕ್ಷರಾದ ಮುರ್ತುಜಾಸಾಬ್ ಕುಷ್ಟಗಿ, ಬಾಬು ಬಳಿಗಾರ ಕಾರಟಗಿ, ಶಿರಾಜ್ ಹುಸೇನ್, ಅಬ್ದುಲ್ ಗನಿಸಾಬ್, ಖಾಜಾ ಹುಸೇನ್ ಮುಲ್ಲಾ, ಗೌಸ್ ಮೊಯಿದ್ದೀನ್, ಅಮ್ರುಲ್ ಹುಸೇನ್, ಜಿಂದಾಸಾಬ್, ಮಹಮ್ಮದ್ ಹನೀಫ್ ಮೇಸ್ತ್ರಿ, ಅಲಿ ಹುಸೇನ್ ನಿವೃತ್ತ ದೈಹಿಕ ಶಿಕ್ಷಕರು, ಮಜಾಹಿದ್ ಕಪಾಲಿ, ಹಯಾತ್ ಪೀರ್ ಇನ್ನಿತರರು ಇದ್ದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಫೀಳ್ ಸಅದಿ ಗಣ್ಯರನ್ನು ಸ್ವಾಗತಿಸಿದರು. ಇನ್ನು ನಾತೆ ಶರೀಫನ್ನು ಬಹು| ಮಿರಾಜುದ್ದೀನ್ ಅಸಅದಿ ಖಾದ್ರಿ ಶಿವಮೊಗ್ಗ ನೆರವೇರಿಸಿದರು. ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಶುಭ ಹಾರೈಸಿದರು. ಕಾರ್ಯದರ್ಶಿ ಎಹ್ಸಾನ್ ಕರ್ನಾಟಕ ಮೌಲಾನಾ ಸಾಹುಲ್ ಹಮೀದ್ ಶಿವಮೊಗ್ಗ ನಿರೂಪಿಸಿದರು.