Advertisement

ಪ್ರತಿ ವಾರ್ಡ್‌ಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಿ

12:13 PM Jun 01, 2018 | |

ತಾಳಿಕೋಟೆ: ಪಟ್ಟಣದ ಪ್ರತಿ ವಾರ್ಡ್‌ನಲ್ಲಿ ಸುಸಜ್ಜಿತ ರಸ್ತೆ ಹಾಗೂ ಕುಡಿಯುವ ನೀರಿನ ಸೌಕರ್ಯ ಸೇರಿದಂತೆ ಮೂಲಸೌಕರ್ಯಗಳಿಗೆ ಒತ್ತು ನೀಡಬೇಕು ಎಂದು ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ ಹೇಳಿದರು.

Advertisement

ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದರು. ಸನ್‌ 2018-19ನೇ ಸಾಲಿನ ಎಸ್‌ ಎಫ್‌ಸಿ ಅನುದಾನ 1 ಕೋಟಿ 28 ಲಕ್ಷ ರೂ. ಹಾಗೂ 14 ನೇ ಹಣಕಾಸು ಅನುದಾನದ 141.52 ಲಕ್ಷ ರೂ. ಗಳಿಗೆ ಕ್ರಿಯಾಯೋಜನೆ ತಯಾರಿಸಲಾಯಿತು. ಪ್ರತಿ ವಾರ್ಡ್‌ಗಳಲ್ಲಿ ಸುಸಜ್ಜಿತ ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆ ಹಾಕಿಕೊಂಡು ಅಭಿವೃದ್ಧಿ ಪಡಿಸಲಾಗುವುದು. ಇದರ ಜೊತೆಗೆ ಸ್ಮಶಾನ ಅಭಿವೃದ್ಧಿ ಕೈಗೊಳ್ಳಲು ನಿರ್ಧರಿಸಲಾಯಿತು.

ಅನುಮೋದಿಸಿದ ಟೆಂಡರ್‌ ಕಾಮಗಾರಿಗಳಿಗೆ ಅನುಮೋದನೆ ನೀಡಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕೈಗೊಳ್ಳಲು ಹಾಗೂ ಅನುಮೋದಿಸಿದ ವಾಣಿಜ್ಯ ಮಳಿಗೆಗಳ ಬೀಡ್‌ ದರಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಭೆಯ ನಂತರ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ ಹಾಗೂ ಸದಸ್ಯರು ಪಟ್ಟಣದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ನೀರು ಶುದ್ಧೀಕರಣ ಘಟಕಕ್ಕೆ ತೆರಳಿ ಘಟಕದಲ್ಲಿರುವ ದೋಷ ಸರಿಪಡಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು. ಪುರಸಭೆ ಉಪಾಧ್ಯಕ್ಷೆ ಹುಸೇನಬಿ ಮುಲ್ಲಾ, ಮಶಾಕ ಚೋರಗಸ್ತಿ, ಅಣ್ಣಾಜಿ ಜಗತಾಪ, ಬಾಬುರಾವ್‌ ಶಿಂಧೆ, ಮಂಜೂರಲಿ ಬೇಪಾರಿ, ಪ್ರಭುಗೌಡ ಮದರಕಲ್ಲ, ಇಬ್ರಾಹಿಂ ಮನ್ಸೂರ, ಮಾನಸಿಂಗ್‌ ಕೊಕಟನೂರ, ಯಾಸೀನ ಮಮದಾಪುರ, ಪ್ರಕಾಶ ಹಜೇರಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರಾಜು ಸಜ್ಜನ, ಆರೀಫ್‌ ಹೊನ್ನುಟಗಿ, ಕರೀಮಬಿ ಮಕಾಂದಾರ, ನವಲೆ, ಗೊಟಗುಣಕಿ, ಎ.ಬಿ. ಕಲಾಲ, ವೀರೇಶ ಇಂಜಗನೇರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next