Advertisement

ರೈಲ್ವೆ ಬಲವರ್ಧನೆ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು

12:15 PM Feb 20, 2018 | Team Udayavani |

ಮೈಸೂರು: ದೇಶದ ರೈಲ್ವೆ ವ್ಯವಸ್ಥೆ ಬಲವರ್ಧನೆ ಮೂಲಕ ಉದ್ಯೋಗ ಸೃಷ್ಟಿಗೆ ತಮ್ಮ ಸರ್ಕಾರ ಒತ್ತು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿಯ ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು.

Advertisement

ತಮ್ಮ ಸರ್ಕಾರ ರೈಲ್ವೆ ಆಧುನೀಕರಣ, ರೈಲ್ವೆಯಲ್ಲಿ ಆಧುನಿಕ ತಂತ್ರಜಾnನ ಅಳವಡಿಕೆ, ತಂತ್ರಜಾnನದ ಮೇಲ್ದರ್ಜೆಗೆ ಅನೇಕ ಕ್ರಮ ಕೈಗೊಂಡಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ಜೋಡಿ ಮಾರ್ಗಗಳ ನಿರ್ಮಾಣ ಹಾಗೂ ಹೊಸ ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ ಎಂದರು.

ಮಹತ್ವದ ಕಾರ್ಯ: ಮೈಸೂರು-ಬೆಂಗಳೂರು ನಡುವಿನ ರೈಲು ಮಾರ್ಗದ ವಿದ್ಯುದ್ಧೀಕರಣ ಯೋಜನೆ ಲೋಕಾರ್ಪಣೆ, ಮೈಸೂರಿನಿಂದ ರಾಜಸ್ಥಾನದ ಉದಯ್‌ ಪುರಕ್ಕೆ ಸಂಪರ್ಕ ಕಲ್ಪಿಸುವ ಪ್ಯಾಲೇಸ್‌ ಕ್ವೀನ್‌ ಹಮ್‌ ಸಫ‌ರ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿರುವುದು ರಾಜ್ಯದಲ್ಲಿ ನಡೆದ ಮಹತ್ವದ ಕಾರ್ಯ ಇದು ಎಂದು ಹೇಳಿದರು.

ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೈಸೂರು ಕೂಡ ಒಂದು. ದೇಶದ ಬೇರೆ ಬೇರೆ ಭಾಗಗಳ ಜನರಲ್ಲಿ ಜೀವನದಲ್ಲಿ ಒಮ್ಮೆಯಾದರೂ ಮೈಸೂರಿಗೆ ಹೋಗಿಇ ನೋಡಿ ಬರಬೇಕು ಎಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಆರಂಭಿಸಿರುವ ಮೈಸೂರು-ಉದಯ್‌ಪುರ ಎಕ್ಸ್‌ಪ್ರೆಸ್‌ ರೈಲು ಕರ್ನಾಟಕ ಮತ್ತು ರಾಜಸ್ಥಾನದ ಪ್ರವಾಸೋದ್ಯಮವನ್ನು ಬೆಸೆಯಲಿದೆ. ಇದರೊಂದಿಗೆ ನಾಲ್ಕು ರಾಜ್ಯಗಳನ್ನು ಬೆಸೆಯುವ ಮಹತ್ವದ ಕೆಲಸವಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ಆಟೋ ರಿûಾ, ಟ್ಯಾಕ್ಸಿ, ಮಂದಿರಗಳ ಬಳಿ ಪೂಜಾ ಸಾಮಾಗ್ರಿಗಳ ಮಾರಾಟಕ್ಕೆ ಅವಕಾಶ ದೊರೆಯುವುದು ಕೂಡ ಉದ್ಯೋಗ ಸೃಷ್ಟಿಯೇ, ಈ ಮೂಲಕ ಆರ್ಥಿಕ ವಿಕಾಸಕ್ಕೆ ದಾರಿಯಾಗಲಿದೆ ಎಂದರು.

Advertisement

ಆರ್ಥಿಕ ಅಭಿವೃದ್ಧಿಗೆ ದಾರಿ: ಬೆಂಗಳೂರು-ಮೈಸೂರು ನಡುವಿನ 117 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಷಟಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ 6400 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಈ ರಸ್ತೆ ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದ್ದು, ಬೆಂಗಳೂರಿನಿಂದ ನಿಡಘಟ್ಟವರೆಗೆ ಮೊದಲ ಹಂತ, ನಿಡಘಟ್ಟದಿಂದ ಮೈಸೂರು ವರೆಗೆ 2ನೇ ಹಂತದಲ್ಲಿ ಕಾಮಗಾರಿ ನಡೆಯಲಿದ್ದು, ಈ ಹೆದ್ದಾರಿ ಮೇಲ್ದರ್ಜೆಗೇರಿಸುವುದರಿಂದ ಆರ್ಥಿಕ ಅಭಿವೃದ್ಧಿಗೆ ದಾರಿಯಾಗಲಿದೆ ಎಂದರು.

ಇದಲ್ಲದೆ, ಮೈಸೂರಿನ ನಾಗನಹಳ್ಳಿಯಲ್ಲಿ ವಿಶ್ವದರ್ಜೆಯ ಸ್ಯಾಟಲೈಟ್‌ ರೈಲು ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 800ಕೋಟಿಗೂ ಹೆಚ್ಚು ಅನುದಾನ ನೀಡುತ್ತಿದೆ. ಈ ನಿಲ್ದಾಣ ನಿರ್ಮಾಣದಿಂದ ಸದ್ಯ ಮೈಸೂರಿಗೆ ಬರುತ್ತಿರುವ 76 ರೈಲು ಗಾಡಿಗಳ ಸಂಖ್ಯೆಯೂ ಹೆಚ್ಚಲಿದೆ. ಜತೆಗೆ ಮೈಸೂರು ಹಾಗೂ ಕರ್ನಾಟಕಕ್ಕೆ ಹೊಸ ರೈಲುಗಳ ಸಂಚಾರವು ಸಾಧ್ಯವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next