ಕೆರೂರ: ಆಧುನಿಕ ಬದುಕಿನಲ್ಲಿ ಹೆಚ್ಚಿನ ಕೃಷಿಕರು ಒಂದೇ ಬೆಳೆಯ ಅವಲಂಬನೆಗೆ ಒತ್ತು ಕೊಡದೇ ಸಮಸ್ತ ಕೃಷಿಕರು ಸಮಗ್ರ ಕೃಷಿಯತ್ತ ಹೆಚ್ಚಿನ ಒಲವು ರೂಢಿಸಿಕೊಳ್ಳಬೇಕು ಎಂದು ತಾಲೂಕು ಯೋಜನಾಧಿಕಾರಿ ಗಣೇಶ.ಡಿ. ಕರೆ ನೀಡಿದರು.
ನರಸಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಗ್ರ ಕೃಷಿ ಪದ್ಧತಿಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ-ರಾಜ್ಯ ಸರ್ಕಾರಗಳು ಮಾಡಬೇಕಾದ ಜನಪರ ಅಭಿವೃದ್ಧಿ ಕಾರ್ಯ ಧರ್ಮಾ ಧಿಕಾರಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ರೈತರಿಗೆ ಹೆಚ್ಚಿನ ಆದಾಯ ಪಡೆಯಲು ಸಾಕಷ್ಟು ಅವಕಾಶಗಳಿವೆ.ವಿಧವಾದ ಬೆಳೆಗಳಿಂದ ದರ ಕುಸಿತದ ಹಾನಿಯಿಂದ ಪಾರಾಗಲು ಸಾಧ್ಯವಿದೆ ಎಂದರು. ಮಹಿಳಾ ಅಭಿವೃದ್ಧಿಗೆ ಮಹಿಳಾ ಸ್ವಸಹಾಯ ಸಂಘದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧನ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿದೆ.
ಇದನ್ನೂ ಓದಿ:ವಿವಿಧ ಸೃಜನಾತ್ಮಕ ಕಲಾಕೃತಿಗಳ ತಯಾರಿ
ದುರ್ಬಲರ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣಾ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪರಿಸರ ಪ್ರಜ್ಞೆ, ಸ್ವಯಂ ಉದ್ಯೋಗ, ನಾಗರಿಕ ಸೌಲಭ್ಯಗಳ ಬಳಕೆ ಗುರಿ ಇಟ್ಟುಕೊಂಡು ಮಹಿಳಾ ಜ್ಞಾನ ವಿಕಾಸ ಯೋಜನೆ ಆರಂಭಿಸಲಾಗಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿ ಕಾರಿ ನಾಗೇಶ್ ಎಸ್.ಕೆ. ಸಮಗ್ರ ತೋಟ ಗಾರಿಕೆ ಬೆಳೆಗಳ ಬಗ್ಗೆ ಹಾಗೂ ಅನುಷ್ಠಾನದ ಕುರಿತು ಮಾಹಿತಿ ವಿವರಿಸಿದರು.
ಗ್ರಾಮದ ರೈತ ಮುಖಂಡ ಶೇಕಪ್ಪ ಎಮ್ಮಿ, ಸಮಗ್ರ ಕೃಷಿ ವಿಧಾನ ಗಳ ಕುರಿತು ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಧುರೀಣ ನಾಗಪ್ಪ ಅಡಪಟ್ಟಿ ಹಾಗೂ ಸೇವಪ್ರತಿನಿದಿ ವಿಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.