Advertisement

ಘನ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತು

12:00 AM Feb 26, 2021 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಅವರು ಸಾಮಾನ್ಯ ಸಭೆಯಲ್ಲಿ 2021-22ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡಿಸಿದರು. 7.52 ಕೋ.ರೂ. ಅಂದಾಜು ಮೊತ್ತವನ್ನು ಬಜೆಟ್‌ ಒಳಗೊಂಡಿತ್ತು.

Advertisement

ಘನತ್ಯಾಜ್ಯ ವಿಲೇವಾರಿಗೆ ಸಿಂಹಪಾಲು
ಪ.ಪಂ. ಬಜೆಟ್‌ನಲ್ಲಿ ಅತೀ ಹೆಚ್ಚು ಮೊತ್ತವನ್ನು 2.31 ಕೋಟಿ ರೂ.ಗಳನ್ನು ಘನತ್ಯಾಜ್ಯ ವಿಲೇವಾರಿ ಕಾಮಗಾರಿಗೆ ಮೀಸಲಿರಿಸಲಾಗಿದೆ. ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಸಮಸ್ಯೆ ಇರುವುದರಿಂದ ಈ ಬಗ್ಗೆ ಮಹತ್ವದ ಯೋಜನೆಯೊಂದನ್ನು ಕೈಗೊಳ್ಳುವ ಚಿಂತನೆಯನ್ನು ಪ.ಪಂ. ಹೊಂದಿದೆ ಎನ್ನಲಾಗಿದೆ.

ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು ಇದರ ಪರಿಹಾರಕ್ಕಾಗಿ 63.75 ಲಕ್ಷ ರೂ. ಮೀಸಲಿರಿಸಲಾಗಿದೆ. ವಿಶೇಷವಾಗಿ ಕೆರೆಗಳ ಅಭಿವೃದ್ಧಿಗೆ 5 ಲಕ್ಷ ರೂ. ಮೀಸಲಿ ರಿಸಲಾಗಿದೆ. ಪ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಸರಕಾರಿ ಕೆರೆಗಳು ಶಿಥಿಲವಾಗಿದೆ. ಈ ಮೊತ್ತದಲ್ಲಿ ಎಲ್ಲಾ ಕೆರೆಗಳ ಅಭಿವೃದ್ಧಿ ಅಸಾಧ್ಯ. ಆದರೆ ಕೆರೆಗಳ ಅಭಿವೃದ್ಧಿ ಕುರಿತು ದೃಷ್ಟಿ ಹಾಯಿಸಿರುವುದ ಪೂರಕ ಬೆಳವಣಿಗೆಯಾಗಿದೆ. ಪ.ಪಂ. ವ್ಯಾಪ್ತಿಯಲ್ಲಿ 7 ಶ್ಮಶಾನಗಳಿದ್ದು ಇವುಗಳ ಅಭಿವೃದ್ಧಿಗೆ 12.50 ಲಕ್ಷ ರೂ. ಮೀಸಲಿರಿಸಲಾಗಿದೆ. ರಸ್ತೆ ಕಾಮಗಾರಿಗಳಿಗಾಗಿ 43.44 ಲಕ್ಷ ರೂ., ಚರಂಡಿ ಕಾಮಗಾರಿಗಳಿಗಾಗಿ 17.50 ಲಕ್ಷ ರೂ., ಉದ್ಯಾನವನ ಅಭಿವೃದ್ಧಿಗೆ 12.50 ಲಕ್ಷ ರೂ., ದಾರಿ ದೀಪ ವಿಸ್ತರಣೆ, ದುರಸ್ಥಿಗೆ 21.33 ಲಕ್ಷ ರೂ., ಎಸ್‌.ಎಫ್‌.ಸಿ. ಅನುದಾನದಲ್ಲಿ ದಾರಿ ದೀಪ, ನೀರು ಸರಬರಾಜಿಗೆ 15 ಲಕ್ಷ ರೂ., ಆರೋಗ್ಯ ಕ್ಷೇತ್ರಕ್ಕೆ 7.50 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 7.52 ಕೋಟಿ ರೂ. ವಿವಿಧ ಕಾರ್ಯಗಳಿಗೆ ಮೀಸಲಿರಿಸಲಾಗಿದೆ.

ಕಲ್ಯಾಣ ಕಾರ್ಯಕ್ರಮಗಳಿಗೆ
ಒ.ಬಿ.ಸಿ. ಬಡಜನರ ಕಲ್ಯಾಣ ನಿಧಿಗೆ ಪುರಸಭೆ ನಿಧಿಯಿಂದ 51,200 ರೂ., ಒ.ಬಿ.ಸಿ. ಬಡಜನರ ಕಲ್ಯಾಣ ನಿಧಿಯಿಂದ 1.31 ಲಕ್ಷ ರೂ. ಅಂಗವಿಕಲರ ಕಲ್ಯಾಣ ನಿಧಿಗೆ 35,300 ರೂ., ಕ್ರೀಡಾ ಪ್ರೋತ್ಸಾಹ ನಿಧಿಗೆ 7,100 ರೂ. ಮೊತ್ತವನ್ನು ಕಾದಿರಿಸಲಾಯಿತು.

ಪ.ಪಂ. ನೇರ ಆದಾಯ 1.11 ಕೋಟಿ ರೂ.
ಕಟ್ಟಡ ತೆರಿಗೆ, ನಳ್ಳಿ ನೀರಿನ ಶುಲ್ಕ, ಅಂಗಡಿ ಬಾಡಿಗೆ, ಕಟ್ಟಡ ಪರವಾನಿಗೆ, ವ್ಯಾಪಾರ ಪರವಾನಿಗೆ ಹಾಗೂ ಘನತ್ಯಾಜ್ಯ ವಿಲೇ, ಸಕ್ಕಿಂಗ್‌ ಮಿಶನ್‌ ಶುಲ್ಕ ಮುಂತಾದ ಮೂಲಗಳಿಂದ 1.11 ಕೋಟಿ ರೂ. ಮೊತ್ತವನ್ನು ನೇರ ಆದಾಯವಾಗಿ ಪ.ಪಂ.ಗೆ ಪಡೆಯುವ ಗುರಿ ಹೊಂದಲಾಗಿದೆ.

Advertisement

ಒಟ್ಟು 7.55 ಕೋಟಿ ರೂ. ಆದಾಯ ನಿರೀಕ್ಷೆ
ಎಸ್‌.ಎಫ್‌.ಸಿ. ನಿಧಿ, ಪ್ರಾಕೃತಿಕ ವಿಕೋಪ ನಿಧಿ, 15ನೇ ಹಣಕಾಸು ಅನುದಾನ, ಗಣತಿ ಅನುದಾನ, ಸ್ವತ್ಛ ಭಾರತ್‌ ಅನುದಾನ, ಕುಡಿಯುವ ನೀರಿನ ಅನುದಾನ ಮುಂತಾದ ಮೂಲಗಳಿಂದ 4.48 ಕೋಟಿ ರೂ. ಅನುದಾನವನ್ನು ಸರಕಾರದಿಂದ ನಿರೀಕ್ಷಿಸಲಾಗಿದೆ ಮತ್ತು 1.11 ಕೋಟಿ ರೂ. ಪ.ಪಂ. ನೇರ ಆದಾಯ ಹಾಗೂ ಇತರ ಆದಾಯಗಳು ಸೇರಿ ಒಟ್ಟು 7.55 ಕೋಟಿ ರೂ. ವಾರ್ಷಿಕ ಆದಾಯ ನಿರೀಕ್ಷಿಸಲಾಗಿದೆ. ಒಟ್ಟು ಬಜೆಟ್‌ನಲ್ಲಿ 7.52 ಕೋಟಿ ರೂ. ಯೋಜನೆಗಳಿಗೆ ಮೀಸಲಿರಿಸಿದ್ದು 2.82 ಲಕ್ಷ ರೂ. ಮಿಗತೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next