Advertisement
ವೈಜ್ಞಾನಿಕ ವಿಲೇವಾರಿಹೊರ ದೇಶ, ರಾಜ್ಯಗಳಿಂದ ಬಂದಿರುವ ವ್ಯಕ್ತಿಗಳನ್ನು ನಗರಸಭೆ ವ್ಯಾಪ್ತಿಯ ಹೊಟೇಲ್, ಹಾಸ್ಟೆಲ್ ಹಾಗೂ ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಈ ಪ್ರದೇಶ ದಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ನಗರಸಭೆಯು ತ್ಯಾಜ್ಯವನ್ನು ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಮುಂದಾಗಿದೆ. ಇದರ ಗುತ್ತಿಗೆಯನ್ನು ರಾಮಕಿ ಹಾಗೂ ಪಡುಬಿದ್ರಿ ಆಯುಷ್ ಸಂಸ್ಥೆಗೆ ನೀಡಲಾಗಿದೆ.
ಪಡುಬಿದ್ರಿ ಆಯುಷ್ ಹಾಗೂ ರಾಮಕಿ ಸಂಸ್ಥೆಯು ಉಡುಪಿಯ ಸುಮಾರು 55 ಕ್ವಾರಂಟೈನ್ ಸೆಂಟರ್‌ಗಳಿಂದ ನಿತ್ಯ ಸರಾಸರಿ 250 ಕೆ.ಜಿ. ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಿಸುತ್ತಿದೆ. ಅವುಗಳನ್ನು ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ಮೂರು ಹಂತಗಳಲ್ಲಿ ದಹನ ಮಾಡುತ್ತಿವೆ.
ವಾಹನ, ಕಾರ್ಮಿಕರ ವೆಚ್ಚ, ಇತರ ಖರ್ಚು ಸೇರಿದಂತೆ ಸಂಸ್ಥೆಗೆ ಒಂದು ಕೆ.ಜಿ. ವೈದ್ಯಕೀಯ ತ್ಯಾಜ್ಯ ದಹನ ಮಾಡಲು 75 ರೂ. ವೆಚ್ಚವಾಗುತ್ತಿದೆ. ಕ್ವಾರಂಟೈನ್ ಸೆಂಟರ್‌ಗಳಲ್ಲಿ ಹಾಗೂ ಮನೆ ಕ್ವಾರಂಟೈನ್ ಇರುವವರಿಗೆ ದೈನಂದಿನ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕವಾದ ಚೀಲವನ್ನು ಸಹ ಈ ಸಂದರ್ಭದಲ್ಲಿ ನೀಡಲಾಗುತ್ತದೆ. ವೈದ್ಯಕೀಯ ತ್ಯಾಜ್ಯವೆಂದರೇನು?
ಕೋವಿಡ್ ಬಂದ ವ್ಯಕ್ತಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಬಳಸಲಾದ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಯೂಸ್ ಆ್ಯಂಡ್ ತ್ರೋ ಹಾಗೂ ಕೋವಿಡ್ ಪರೀಕ್ಷೆಗೆ ಬಳಸಲಾಗುವ ವೈದ್ಯಕೀಯ ಪರಿಕರಗಳನ್ನು ಎರಡು ಸಂಸ್ಥೆಗಳು ವಿಭಾಗ ಮಾಡಿಕೊಂಡು ಸಂಗ್ರಹಿಸುತ್ತಿವೆ. ನಗರದ ವಿವಿಧ ಹಾಸ್ಟೆಲ್, ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರುವ ಶಂಕಿತ ವ್ಯಕ್ತಿಗಳ ದೈನಂದಿನ ತ್ಯಾಜ್ಯವನ್ನು ಸಹ ವೈಜ್ಞಾನಿಕ ಪದ್ಧತಿಯನ್ನು ಆಳವಡಿಸಿಕೊಂಡು ವಿಲೇವಾರಿ ಮಾಡುತ್ತಿದೆ.
Related Articles
ನಗರಸಭೆ ವ್ಯಾಪ್ತಿಯ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಕ್ವಾರಂಟೈನ್ ಕೇಂದ್ರದಿಂದ ಸಂಗ್ರಹಿಸಲಾದ ತ್ಯಾಜ್ಯವನ್ನು ಈ ಸಂಸ್ಥೆಗಳು ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಿವೆ.
-ಸ್ನೇಹಾ, ಪರಿಸರ ಎಂಜಿನಿಯರ್. ಉಡುಪಿ ನಗರಸಭೆ
Advertisement